ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಗಣೇಶ ವಿಸರ್ಜನೆ ಬಹಳ ಶಾಂತಿಯುತವಾಗಿ, ಒಳ್ಳೆಯ ಸಿಸ್ಟಮ್ ಇಂದ ಆಯಿತು. ಅದಕ್ಕೆ ಮೊದಲು ಹುಬ್ಬಳ್ಳಿ – ಧಾರವಾಡದ ಪೊಲೀಸ್ ಕಮಿಷನರ್, ಪೊಲೀಸ್ ಇಲಾಖೆ ಸಿಬ್ಬಂದಿ, ಪೊಲೀಸ್ ಕಂಪ್ಲೀಟ್ ಡಿಪಾರ್ಟ್ಮೆಂಟ್ ಗೆ ಹುಬ್ಬಳ್ಳಿ -ಧಾರವಾಡ ಅವಳಿನಗರದ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದ ಹೇಳುತ್ತೇನೆ ಎಂದರು.
ಯಾವಾಗಲೂ ಒಂದು ಹಬ್ಬ ಇರಲಿ, ಯಾವ ಜಾತಿ ಧರ್ಮದ್ದು ಆಗಿರಲಿ ಪ್ರತಿಯೊಂದು ಹಬ್ಬ ನಮ್ಮ ಊರ ಹಬ್ಬ ಎಂದು ನಮ್ಮ ಮನೆಯವರು ನಮ್ಮ ಅಣ್ಣ ತಮ್ಮಂದಿರು ಕೊಡಿ ಮಾಡಬೇಕು ಹೊರತು ಬೇರೆಯೋರನ್ನ ಅಥವಾ ಹೊರಗಿನೂರನ್ನ ಕರದ್ವಿ , ಯಾರೋ ಫೈರ್ ಬ್ರಾಂಡ ಕರದ್ರಿ ಫೈರ್ ಬ್ರಾಂಡ್ ಅಂದ್ರೆ ಏನು ಗೊತ್ತಾಗತಿಲ್ಲ. ಫೈರ್ ಅಂದ್ರೆ ಬೆಂಕಿ. ಬೆಂಕಿ ಬ್ರಾಂಡ್ ಕರೆದರೆ ಹೆಂಗೆ ಸಮಾಜದ ಜನಕ್ಕೆ ಏನು ಸಂದೇಶ ಕೊಡತಿದಿರಾ. ನಿಮ್ಮನ್ನ ಭೇಟಿ ಆಗಬೇಕು ಅದೇನೋ ಫೈರ್ ಬ್ರಾಂಡ್ ಅಂತ ಬೆಂಕಿ ಅಂತ ಅವರು ನಿಮ್ಮ ಹತ್ರ ಬರಲು ಭಯ ಪಡತಾರೆ.

ನೀವು ಒಬ್ಬ ಸೀನಿಯರ್ ಜನ ಪ್ರತಿನಿಧಿಯಾಗಿ ತಮ್ಮ ಕ್ಷೇತ್ರದಲ್ಲಿ ಜನರಿಗೆ ಏನು ಸಮಸ್ಯೆ ಇದೆ. ಏನು ತೊಂದ್ರೆ ಇದೆ. ಜನರು ನಿಮ್ಮನ್ನ ಮೆಚ್ಚಿ ಓಟು ಕೊಟ್ಟಿರ್ತಾರೆ ಅವರ ಸಮಸ್ಯೆ ತಿಳಿದು ಪರಿಹಾರ ನೀಡುವ ಕಾರ್ಯ ಮಾಡಬೇಕು ಎಂದು ಹುಬ್ಬಳ್ಳಿಯಲ್ಲಿ ಪಾರುಖ್ ಅಬ್ಬುನವರ್ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





