ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಯಕೃತ್ತಿನ ಸಮಸ್ಯೆ ವಯಸ್ಕರ ಹಾಗೆಯೇ ಮಕ್ಕಳಲ್ಲಿ ಕೂಡ ಕಾಡುತ್ತಿದೆ. ಈ ನಿಟ್ಟಿನಲ್ಲಿ ತಂದೆಯೊಬ್ಬ ಮಗುವಿನ ಕಾಯಿಲೆಗೆ ತನ್ನ ಯಕೃತ್ತನ್ನು ನೀಡುವ ಮೂಲಕ ಮಗುವಿಗೆ ಮರು ಜನ್ಮ ನೀಡಿರುವ ವಿಶೇಷ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಸ್ತುತ ದಿನಮಾನಗಳಲ್ಲಿ ವಯಸ್ಕರಿಗಿಂತ ಮಕ್ಕಳ ಲಿವರ್ ಸಮಸ್ಯೆ ಸಾಕಷ್ಟು ಸವಾಲಿನೊಂದಿಗೆ ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ
ಈ ಮೊದಲು ವಯಸ್ಕರಲ್ಲಿ ಹಾಗೂ ಅತಿಯಾದ ಮದ್ಯಪಾನ ಮಾಡುವವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಲಿವರ್ ಸಂಬಂಧಿಸಿದ ಕಾಯಿಲೆಗಳು ಹಾಗೂ ಲಿವರ್ ವೈಫಲ್ಯ ಈಗ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅಲ್ಲದೇ ಯಕೃತ್ತಿನ ಕಾಯಿಲೆಯನ್ನು ವಯಸ್ಕರ ಕಾಯಿಲೆ ಎಂದು ಹೇಳುವುದು ಮುಗಿದಿದೆ. ಯಕೃತ್ತಿನ ಸಮಸ್ಯೆ ವಿಶ್ವದಾದ್ಯಂತ ಗಂಭೀರ ಸಮಸ್ಯೆಯಾಗಿ ಹೊರಹೊಮ್ಮುತ್ತಿದೆ. ಈ ನಿಟ್ಟಿನಲ್ಲಿ ಆರು ವರ್ಷದ ಮಗುವಿನ ಲಿವರ್ ಸಂಬಂಧಿಸಿದ ಕಾಯಿಲೆಯನ್ನು ಗುರುತಿಸಿದ ಮಣಿಪಾಲ್ ಆಸ್ಪತ್ರೆ ವೈದ್ಯರು ಮೊದಲಿಗೆ ಮೆಡಿಸಿನ್ ಮೂಲಕ ಗುಣಪಡಿಸಲು ಮುಂದಾಗಿದ್ದಾರೆ. ಆದರೆ ಮೆಡಿಸಿನ್ ಮೂಲಕ ಗುಣಪಡಿಸಲು ಸಾಧ್ಯವಾಗದೇ ಇದ್ದಾಗ ತಂದೆಯ ಲಿವರ್ ನ ಒಂದು ಭಾಗವನ್ನು ತೆಗೆದು ಮಗುವಿಗೆ ಶಸ್ತ್ರಚಿಕಿತ್ಸೆ ಮೂಲಕ ಟ್ರಾನ್ಸ್ ಪ್ಲಾಂಟೆಶನ್ ಮಾಡಿದ್ದು, ಈಗ ಮಗು ಮತ್ತು ತಂದೆ ಆರೋಗ್ಯವಾಗಿದ್ದಾರೆ. ಈ ಬಗ್ಗೆ ಮಗುವಿಗೆ ಜೀವದಾನ ಮಾಡಿದ ತಂದೆ ಏನು ಹೇಳ್ತಾರೆ ಕೇಳಿ
ಇನ್ನೂ ವಯಸ್ಕರಲ್ಲಿ ಬರುವ ಲಿವರ್ ವೈಫಲ್ಯದ ಕಾಯಿಲೆಗಳು ಆಲೋಹಾಲ್ ಸೇವನೆ, ವೈರಲ್ ಸೋಂಕು, ಕೊಬ್ಬಿನ ಯಕೃತ್ತಿನ ಕಾಯಿಲೆ ಹಾಗೂ ಸ್ವಯಂ ನಿರೋಧಕ ಅಂಶಗಳಿಂದ ಉಂಟಾಗುತ್ತದೆ. ಆದರೆ ಮಕ್ಕಳಿಗೆ ಸಾಮಾನ್ಯವಾಗಿ ಜನ್ಮಜಾತವಾಗಿ ಮತ್ತು ಪಿತ್ತರಸದ ಅಟ್ರಿಸಿಯಾ ಮತ್ತು ವಿಲ್ಸನ್ ಕಾಯಿಲೆಯಂತಹ ಚಯಾಪಚಯ ಪರಿಸ್ಥಿತಿಯಿಂದ ಉಂಟಾಗಬಹುದು. ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಕಾಳಜಿ ವಹಿಸಬೇಕಿದೆ.ಒಟ್ಟಿನಲ್ಲಿ ಯಕೃತ್ತಿನ (ಲಿವರ್) ರೋಗದ ಸಮಸ್ಯೆಯಿಂದ ಬಹುತೇಕ ಮಕ್ಕಳು ಬಳಲುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಮತ್ತಷ್ಟು ವೈದ್ಯಕೀಯ ಯೋಜನೆ ಜಾರಿ ಮಾಡುವ ಮೂಲಕ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಬಗ್ಗೆ ಕಾಳಜಿ ವಹಿಸುವ ಕಾರ್ಯವನ್ನು ಮಾಡಬೇಕಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





