ಬಿಗ್ ಇಂಪ್ಯಾಕ್ಟ್… ಹು-ಧಾ ಪೋಲಿಸ್ ಠಾಣೆಯ ಸಿಬ್ಬಂದಿಗಳು ಕರ್ತವ್ಯದಲ್ಲಿ ಸಮವಸ್ತ್ರ ಧರಿಸದೇ ಇರುವ ಕುರಿತಾಗಿ ಆಯುಕ್ತರು ಎಚ್ಚರಿಕೆ ನೀಡಲಾಗಿದ್ದ ಕುರಿತಾಗಿ

ಬಿಗ್ ಟಿವಿ ವರದಿ ಪ್ರಸಾರ ಮಾಡಿತ್ತು.ಇದರ ಪರಿಣಾಮವಾಗಿ ನಿನ್ನೆ ಹಿರಿಯ ಪೋಲಿಸ್ ಅಧಿಕಾರಿಗಳು ಅದರ ಕುರಿತಾಗಿ ಸೂಕ್ತ ಕಾನೂನು ಕ್ರಮ ತೆಗದುಕೊಂಡಿದ್ದು ಇದು ಬಿಗ್ ಟಿವಿ ವರದಿಗೆ ಸಿಕ್ಕ ಸ್ಪಂದನೆಯಾಗಿದೆ..

ಹೌದು ಶಿಸ್ತಿಗೆ ಇನ್ನೊಂದು ಹೆಸರೇ ಪೋಲಿಸ ಅಂದರೆ ತಪ್ಪಾಗಲಾರದು. ಆದ್ರೆ ಇತ್ತಿಚೆಗೆ ಹು-ಧಾ ಪೋಲಿಸರು ಇತ್ತೀಚಿನ ದಿನಗಳಲ್ಲಿ ಕರ್ತವ್ಯಕ್ಕೆ ನೀಡಲಾದ ಸಮವಸ್ತ್ರ ಧರಿಸಿವುದನ್ನೇ ಮರೆತು ಬಿಟ್ಟಿದ್ದಾರೆ. ಈ ಕುರಿತು ಮಾನ್ಯ ಆಯುಕ್ತರು ಈ ಮೊದಲು ಸಮವಸ್ತ್ರ ಧರಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಆದ್ರೆ ಆಯುಕ್ತರ ಮಾತಿಗೆ ಬೆಲೆ ಕೊಡದೆ ಮನಸ್ಸಿಗೆ ಬಂದಂತೆ ತಮ್ಮದೇ ದರ್ಬಾರ್ ಮಾಡ್ತಾಯಿದ್ದಾರೆ. ಅದಕ್ಕೆ ಸಂಭಂದಿಸಿದಂತೆ ನಿನ್ನೆ ಉಪಪೋಲಿಸ್ ಆಯುಕ್ತರು ನಿನ್ನೆ ಒಂದು ಮಹತ್ವದ ಸೂಚನೆ ನೀಡಿದ್ದು, ಹು-ಧಾ ಇನ್ಸ್ಪೇಕ್ಟರುಗಳು ಆಯಾ ಠಾಣಾಧಿಕಾರಿಗಳು ಬೆಳಗಿನ ಹಾಜರಿಯನ್ನು 8 ಗಂಟೆಯೊಳಗೆ ಪಿಐ ಅವರು ತೆಗೆದುಕೊಂಡ ಬಗ್ಗೆ

ಭಾವಚಿತ್ರಗಳನ್ನು ಉಪಪೋಲಿಸ್ ಆಯುಕ್ತರು ಕಾನೂನು ಸುವ್ಯವಸ್ಥೆ ಹು-ಧಾ ನಗರ ಕಛೇರಿಯ ಮಾರ್ನಿಂಗ್ ಬ್ರೀಪಿಂಗ್ ವಾಟ್ಸಾಪ್ ಗ್ರೂಪ್ ಗೆ ಕಡ್ಡಾಯವಾಗಿ ಅಪಲೋಡ್ ಮಾಡುವುದು, ಮತ್ತು ಸ್ವತಃ ಇನ್ಸ್ಪೇಕ್ಟರುಗಳೇ ಬೆಳಗಿನ ಹಾಜರಿಯನ್ನು ತೆಗೆದುಕೊಳ್ಳಬೇಕು ಮತ್ತು ಅದನ್ನು ನಿರ್ಲಕ್ಷಿಸದೇ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸುಚನೆ ನೀಡಿದ್ದಾರೆ. ಒಂದು ವೇಳೆ ಈ ಸೂಚನೆಯನ್ನು ನಿಷ್ಕಾಳಜಿ ಮಾಡಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲಾಗುದೆಂದು ಮೇಲಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಇದು

ಬಿಗ್ ಟಿವಿಯ ವರದಿಗೆ ಸಿಕ್ಕ ಜಯವಾಗಿದೆ. ಮಾನ್ಯ ಆಯುಕ್ತರ ಈ ಕಟ್ಟುನಿಟ್ಟಿನ ಕ್ರಮಕ್ಕೆ ಯಾವ ರೀತಿಯ ಸ್ಪಂದನೆ ವ್ಯಕ್ತವಾಗುತ್ತೇ ಕಾದು ನೋಡಬೇಕಿದೆ. ಜೊತೆಗೆ ಕ್ರೈಂ ಹಾಗೂ ಇತರೆ ವಿಭಾಗದ ಪೋಲಿಸ್ ಸಿಬ್ಬಂದಿಗಳು

ಕರ್ತವ್ಯ ಸಮಯವನ್ನು ಸರಿಯಾಗಿ ಪಾಲನೆ ಮಾಡ್ತರಾ, ಅಥವಾ ತಮ್ಮದೇ ಆದ ಆಡಳಿತ ಮುಂದುವರೆಸ್ತಾರಾ ಕಾದು ನೋಡಬೇಕಿದೆ.ಒಟ್ಟಿನಲ್ಲಿ ಹು-ಧಾ ಆಯುಕ್ತರ ನೀಡಿರುವ ಸೂಚನೆಗೆ ಎಷ್ಟು ಜನ ಬೆಳೆಗಿನ ಹಾಜರಿಗೆ ಬಂದಿದ್ದರು ಮತ್ತು ಕ್ರೈಂ ಪೋಲಿಸರು ಮತ್ತು ಉಳಿದ ಸಿಬ್ಬಂದಿಗಳು ಈ ನಿಯಮವನ್ನು ಎಷ್ಟರ ಮಟ್ಟಿಗೆ ಪಾಲನೆ ಮಾಡ್ತಾರೆ ಅನ್ನೋದು ಕಾದು ನೋಡಬೇಕಿದೆ…
M A Shaikh ಬಿಗ್ ಟಿವಿ ನ್ಯೂಸ್ ಹುಬ್ಬಳ್ಳಿ
bigtvnews | Hubli Dharwad News | Kannada News | Karnataka News Hubli News | News In Hubli | Local news

