Breaking News

ವೈದ್ಯರು ಪರಿಸರ ಸಂರಕ್ಷಣೆಗಾಗಿ ಪಾದಯಾತ್ರೆ

ಹುಬ್ಬಳ್ಳಿ: ವಿಶ್ವ ಪರಿಸರ ದಿನದ ಅಂಗವಾಗಿ, ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಧಾರವಾಡ ಜಿಲ್ಲಾ, ಹಾಗೂ ಮಹಿಳಾ ಘಟಕ ಧಾರವಾಡ ಜಿಲ್ಲಾ ಮತ್ತು ಆಯುರ್ವೇದ ಮಹಾವಿದ್ಯಾಲಯ ಹೆಗ್ಗೆರೆ ಹಳೆ ಹುಬ್ಬಳ್ಳಿ, ಅವರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಸಸಿ ನೆಡುವ ಮೂಲಕ, ಹಾಗೂ ಜನರಿಗೆ ಜಾಗೃತಿಯನ್ನು ಮೂಡಿಸಲು ಹೆಗ್ಗೇರಿಯಲ್ಲಿ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎ. ಎಸ್. ಪ್ರಶಾಂತ್ ಹಾಗೂ ಧಾರವಾಡ ಜಿಲ್ಲಾ ಎನ್. ಐ .ಎಮ್ .ಎ ಅಧ್ಯಕ್ಷರಾದ ಡಾ. ಪ್ರದೀಪ್ ದೇಸಾಯಿ ಅವರು ಜಾಥವನ್ನು ಉದ್ಘಾಟಿಸಿದರು. ಜಾಗೃತಿಯ ಜಾಥ ಕಾರ್ಯಕ್ರಮದಲ್ಲಿ ಆಯುರ್ವೇದ ಮಹಾವಿದ್ಯಾಲಯದ ಶಲ್ಯ ತಂತ್ರ ವಿಭಾಗದ ಮುಖ್ಯಸ್ಥರಾದ ಡಾ. ಸಿ. ತ್ಯಾಗರಾಜ್,ಎನ್. ಐ. ಎಂ. ಎ ಧಾರವಾಡ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಎಂ. ರೋಣಿಮಠ.ಡಾ ಭಾರದ್ವಾಡ ಹಾಗೂ ಮಹಿಳಾ ಘಟಕದ ಕಾರ್ಯದರ್ಶಿ ಡಾ. ಆಯಿಷ ಮುಲ್ಲ, ಡಾ. ಸುಪ್ರಿಯ ಡಾ .ಪ್ರಕಾಶ ರಾಥೋಡ್, ಡಾ.ಕಲ್ಲಪ್ಪ ಜಗ್ಗಲ್ ಹಾಗು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಸದಸ್ಯರು ಮತ್ತು ಆಯುರ್ವೇದ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *