Breaking News

ಕೆರೆಯ ಸ್ವಚ್ಛತೆಗೆ ಆದ್ಯತೆ ನೀಡಿ, ರಾಜಣ್ಣ ಕೊರವಿ ಅವರಿಂದ ಸಾರ್ವಜನಿಕರಲ್ಲಿ ಮನವಿ

ಹುಬ್ಬಳ್ಳಿ-03 : ವಾರ್ಡ್ ನಂಬರ್ 36ರಲ್ಲಿ ಬರುವ ಚನ್ನಪ್ಪನ ಕೆರೆಗೆ ಮಹಾನಗರ ಪಾಲಿಕೆಯ ಹಿರಿಯ ಸದಸ್ಯ ರಾಜಣ್ಣ ಕೊರವಿ, ಭೇಟಿ ನೀಡಿ ಮಾತನಾಡಿದ ಅವರು ಚನ್ನಪ್ಪನ ಕೆರೆಯಲ್ಲಿ ಬೆಳೆದಂತಹ ಅಂತರಗಂಗೆ ಕಸವನ್ನ ಕೂಡಲೇ ಸ್ವಚ್ಛಗೊಳಿಸಬೇಕು ಹಾಗೂ ಕೆರೆಗೆ ಬರುವ ಒಳಚರಂಡಿ ನೀರನ್ನು ತಡೆಯಬೇಕು, ಹಾಗೂ ಸಾರ್ವಜನಿಕರು ಕಸವನ್ನು ಕೆರೆಯಲ್ಲಿ ಒಗೆಯುವುದನ್ನು ನಿಲ್ಲಿಸಬೇಕು ಮತ್ತು ಅಭಿವೃದ್ಧಿಪರ ಕೆಲಸ ಕಾರ್ಯಗಳನ್ನು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪಾಲಿಕೆ ಸದಸ್ಯರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಹಾನಗರ ಪಾಲಿಕೆ ಇ ಇ ತೊಬಾಕಿ, ಉಪ ಆಯುಕ್ತರಾದ ಫಕ್ಕಿರೇಶ್ ಇಂಗಳಗಿ, ಎ ಇ ಚೈತ್ರ ಸಾಲಿಮಠ, ಬಳಿಗೇರ್, ಬಸವರಾಜ್ ಮಾಡಳ್ಳಿ, ವಿಠ್ಠಲ್ ಹಜೇರಿ, ಪರಶುರಾಮ್ ಎಲಿವಾಳ್, ಜಯಂತ್ ಪೂಜಾರಿ ಹಾಗೂ 36ನೇ ವಾರ್ಡಿನ ಬಡಾವಣೆಯ ಹಿರಿಯರು ಉಪಸ್ಥಿತರಿದ್ದರು.

Share News

About BigTv News

Check Also

ಸಚಿವ ಸಂತೋಷ್ ಲಾಡ್ ಅವರಿಗೆ ಅದ್ದೂರಿ ಗೌರವ ಸನ್ಮಾನ; ಆತ್ಮೀಯ ಭೇಟಿಯಲ್ಲಿ…

ಸಚಿವ ಸಂತೋಷ್ ಲಾಡ್ ಅವರಿಗೆ ಕಾಂಗ್ರೆಸ್ ಮುಖಂಡರಿಂದ ಗೌರವ ಸನ್ಮಾನ… ಕಾಂಗ್ರೆಸ್ ಮುಖಂಡರಾದ ಫತೇಶಾ ಯಾರಗಟ್ಟಿ ಹಾಗೂ ದಾದಾಪೀರ್ ಬಳ್ಳಾರಿ ಅಬ್ಬಾಸ್ …

Leave a Reply

Your email address will not be published. Required fields are marked *