ಬೆಂಗಳೂರ ಪೊರ್ವ ತಾಲ್ಲೂಕಿನ ಕೆ,ಆರ್ ಪುರಂ ನ ಗ್ರೇಡ್ -2 ತಹಶೀಲ್ದಾರ್ ಹಾಗಿರುವ ಎಸ್. ಅಜಿತ್ ಕುಮಾರ್ ರೈ ಅವರನ್ನು ಅಮಾನಾತ್ತು ಮಾಡಿ ರಾಜ್ಯ ಸರಕಾರದ ಉಪ ಕಾರ್ಯದರ್ಶಿ ಅವರು ಆದೇಶ ಮಾಡಿದ್ದಾರೆ , ನಿಗದಿತ ಮೂಲಗಳಿಂದ ಗಳಿಸಿರುವ ವರಮಾನ ಅಧಿಕವಾಗಿರುವ ಹಿನ್ನಲೆ ಹಾಗೂ ಸಾಕ್ಷಿಗಳನ್ನು ನಾಶಪಡಿಸುವ ಸಂಭವವಿರುವುದರಿಂದ ಎಸ್ ಅಜಿತ ಕುಮಾರ್ ರೈ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ಆದೇಶ ಮಾಡಲಾಗಿದೆ. ಶೇ 69.80 ರಷ್ಟು ಹಚ್ಚಿನ ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತ ಪೋಲಿಸ್ ರು ವರದಿ ನೀಡಿದ ಬೆನ್ನಲ್ಲೇ ಈ ಆದೇಶ ಹೊರ ಬಿದ್ದಿದೆ. ಸದ್ಯೆ ಲೋಕಾಯುಕ್ತರು ದಾಳಿ ಮಾಡಿದ ಪ್ರಕರಣ ಇನ್ನು ತನಿಖೆ ಮಾಡಲಾಗುತ್ತಿದ್ದು.

ಇನ್ನು ಹಲವು ಭ್ರಷ್ಟ ಅಧಿಕಾರಿಗಳ ಮುಖವಾಡ ಹೊರಬಿಳಲಿದೆ. ಸದರಿ ಅಧಿಕಾರಿಯವರು ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮ 1958ರ ನಿಯಮ 98{1}ಎ ರನ್ವಯ ನಿಯಮಾನುಸಾರ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ ಸದರಿಯವರು ಸಕ್ಮಮ ಪ್ರಾಧಿಕಾರದ ಪೂರ್ವಾನುಮತಿ ಯಿಲ್ಲದೆ ಕೇಂದ್ರಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ

bigtvnews | Hubli Dharwad News | Kannada News | Karnataka News Hubli News | News In Hubli | Local news





