Breaking News

ದೇಶದ ಮೊದಲ ವಿಮಾ ರಸ್ತೆಗೆ ಇಲ್ಲ ಕಾಯಕಲ್ಪ: ಅವ್ಯವಸ್ಥೆ ಆಗರ ತಿಮ್ಮಸಾಗರ

ಹುಬ್ಬಳ್ಳಿ: ಅದು ದೇಶದ ಮೊದಲ ವಿಮಾ ಸೌಲಭ್ಯಕ್ಕೆ ಒಳಪಟ್ಟ ರಸ್ತೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಕೂಡ ಹೆಸರನ್ನು ಅಚ್ಚೊತ್ತುವ ಮೂಲಕ ರಾಷ್ಟ್ರ ಹಾಗೂ ರಾಜ್ಯದ ಗಮನವನ್ನು ತನ್ನತ್ತ ಸೆಳೆದಿದ್ದ ರಸ್ತೆ. ಆದರೆ ಆ ರಸ್ತೆಯ ಅವ್ಯವಸ್ಥೆ ನೋಡಿದರೇ ನಿಜಕ್ಕೂ ಬೇಸರದ ಭಾವನೆ ಮೂಡುವುದು ಖಂಡಿತ.

ಈ ರಸ್ತೆಯನ್ನೊಮ್ಮೆ ಸರಿಯಾಗಿ ನೋಡಿ. ಸಾಕಷ್ಟು ಸಾರ್ವಜನಿಕ ಪ್ರಶಂಸೆಗಳಿಸಿ ಹೆಸರು ಮಾಡಿದ್ದ ಈ ರಸ್ತೆಯಲ್ಲಿಗ ಕಡೆಲು ಸ್ವಲ್ಪ ಕೂಡ ಜಾಗವಿಲ್ಲದಂತಾಗಿದೆ. ಈ ರಸ್ತೆಯ ಅವ್ಯವಸ್ಥೆ ನೋಡಿದರೇ ನಿಜಕ್ಕೂ ಭಗವಂತನಿಗೂ ಕಣ್ಣಿನಲ್ಲಿ ನೀರು ಬರುವುದು ಖಂಡಿತ. ಹೌದು.. ಹುಬ್ಬಳ್ಳಿ ವಿದ್ಯಾನಗರದ ತಿಮ್ಮಸಾಗರ ರಸ್ತೆಯ ಅವ್ಯವಸ್ಥೆ ನೋಡಿದರೇ ನಿಜಕ್ಕೂ ಬೇಸರದ ಭಾವನೆ ಮೂಡುತ್ತದೆ. ಹುಬ್ಬಳ್ಳಿಯ ನೂತನ ನ್ಯಾಯಾಲಯದ ಸಂಕೀರ್ಣದ ಮುಂಭಾಗದಲ್ಲಿರುವ ತಿಮ್ಮಸಾಗರ ರಸ್ತೆ ಅಪಘಾತಗಳಿಗೆ ಆಹ್ವಾನ ನೀಡುವಂತಾಗಿದೆ. ಸ್ವಲ್ಪ ಯಾಮಾರಿದರೂ ಅಪಘಾತ ಮಾತ್ರ ಕಟ್ಟಿಟ್ಟ ಬುತ್ತಿ. ಬೈಕ್ ಸವಾರರು ಕೈಯಲ್ಲಿಯೇ ಜೀವ ಹಿಡಿದುಕೊಂಡು ವಾಹನ ಚಾಲನೆ ಮಾಡಬೇಕಿದೆ. ಹೀಗಿದ್ದರೂ ಕೂಡ ಈ ರಸ್ತೆಗೆ ಮಾತ್ರ ಕಾಯಕಲ್ಪ ಸಿಕ್ಕಿಲ್ಲ. ಈ ಹಿಂದೆ ಈ ರಸ್ತೆಗೆ ಸ್ಥಳೀಯ ನಿವಾಸಿಗಳು ವಿಮಾ ಸೌಲಭ್ಯವನ್ನು ಕಲ್ಪಿಸಿದ್ದರೂ ಕೂಡ ಈ ರಸ್ತೆಗೆ ಇದುವರೆಗೂ ದುರಸ್ತಿ ಭಾಗ್ಯ ಬಂದಿಲ್ಲ.

ಇನ್ನೂ ಈ ರಸ್ತೆ ಸಾಕಷ್ಟು ಜನರಿಗೆ ಅನುಕೂಲವಾಗಿರುವ ರಸ್ತೆ. ಈ ಮಾರ್ಗದಲ್ಲಿ ನ್ಯಾಯಾಲಯದ ನ್ಯಾಯಾದೀಶರು, ವಕೀಲರು, ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಾಗಿ ಓಡಾಡುತ್ತಾರೆ. ಆದರೂ ಕೂಡ ಈ ರಸ್ತೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಈಗಾಗಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೆ ಮಳೆಗಾಲ ಆರಂಭವಾಗಿದ್ದರು ಕೂಡ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಕೂಡಲೇ ರಸ್ತೆಯನ್ನು ಸರಿಪಡಿಸಲು ವಕೀಲರು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಇಂತಹದೊಂದು ಮಹತ್ವದ ರಸ್ತೆಗೆ ಮಾತ್ರ ಇದುವರೆಗೂ ಕಾಯಕಲ್ಪ ದೊರೆಯದೇ ಇರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಇನ್ನಾದರೂ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಜನಪ್ರತಿನಿಧಿಗಳು ಎಚ್ಚೇತ್ತುಕೊಂಡು ಅಪಘಾತ ಸಂಭವಿಸುವ ಮುನ್ನವೇ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *