Breaking News

ಕೋಲ್‌ ಕ್ಯಾಪ್ಟನ್‌ ಎಂ.ಎಸ್.ದೋನಿ ಅವರಿಗೆ ಇಂದು 42 ನೇ ಹುಟ್ಟು ಹಬ್ಬದ ಸಂಭ್ರಮ

ಎಂಎಸ್ ಧೋನಿ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ, ಹೇಳಿ? ತನ್ನ ಚಾಣಾಕ್ಷ ನಾಯಕತ್ವದಿಂದ ಭಾರತ ತಂಡವನ್ನು ವಿಶ್ವಮಟ್ಟಕ್ಕೆ ಏರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ .ಭಾರತ ತಂಡದ ಸ್ಟಾರ್ ಕ್ರಿಕೆಟ್ ಆಟಗಾರ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಹುಟ್ಟುಹಬ್ಬ ಇಂದು . ಅವರು ಜುಲೈ 7 ರಂದು ಜನಿಸಿದರು .ಬಾಲ್ಯದಲ್ಲಿ ಕ್ರಿಕೆಟ್ ಮತ್ತು ಪುಟಬಾಲ್ ಆಟದಲ್ಲಿ ಆಸಕ್ತಿ ಹೊಂದಿದ್ದ ಇವರು ವೃತ್ತಿ ಜೀವನಕ್ಕೆ ಕ್ರಿಕೆಟ್ ಆಯ್ಕೆ ಮಾಡಿಕೊಂಡರು. ಫುಟ್ಬಾಲ್ ನಲ್ಲಿ ಗೋಲ್ ಕೀಪರ್ ಆಗಿದ್ದ ಇವರನ್ನು ಅವರ ಕೋಚ್ ಕ್ರಿಕೆಟ್ ವಿಕೆಟ್ ಕೀಪರ್ ಆಗಬೇಕು ಎಂದು ಹೇಳಿದರು.

2001 ರಿಂದ 2003 ರ ವರೆಗೆ ಕ್ರಿಕೆಟ್ ಕ್ಲಬ್‌ ನಲ್ಲಿ ಇವರು ಆಟವಾಡುತ್ತಿದ್ದರು. ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ವೃತ್ತಿ ಜೀವನ ಆರಂಭವಾಗಿದ್ದು 1998ರಲ್ಲಿ. 1998ರಲ್ಲಿ ಬಿಹಾರ್ ದಲ್ಲಿ ಅಂಡರ್ 19 ತಂಡಕ್ಕೆ ಆಟವಾಡಿದರು. ದಿಲೀಪ್ ಟೋಪಿ ,ದೇವದರ್ ಟೋಪಿ‌, ಇಂಡಿಯಾ ಏ ತಂಡದಲ್ಲಿ ಆಟವಾಡಿ ಸಾಕಷ್ಟು ಸಾಧನೆ ಮಾಡಿರುವ ಹಿನ್ನಲೆ ಇಂಡಿಯನ್ ಟೀಮ್ ನಲ್ಲಿ ಆಡಲು ಅವಕಾಶ ದೊರೆಯಿತು. 2004 ರಲ್ಲಿ ಸೌರವ್ ಗಂಗೂಲಿ ಅವರು ಬಾಎತ ತಂಡದ ವಿಕೆಟ್ ಕೀಪರ್ ಆಗಿ ಮಹೇಂದ್ರ ಸಿಂಗ್ ಧೋನಿಯವರನ್ನು ಅಂತರಾಷ್ಟ್ರೀಯ ಪಂದ್ಯಕ್ಕೆ ಆಯ್ಕೆ ಮಾಡಿದರು.2004ರಲ್ಲಿ ಬಾಂಗ್ಲಾದೇಶದ ಚಿಟ್ಟಿಗಾಂ ನಲ್ಲಿ ನಡೆದ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪದಾರ್ಥನೆ ಮಾಡಿದರು. ಅಲ್ಲಿಂದ ಮಹೇಂದ್ರ ಸಿಂಗ್ ಧೋನಿ ಅವರ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಪ್ರಾರಂಭವಾಯಿತು.

ಮಹೇಂದ್ರ ಸಿಂಗ್ ಧೋನಿ ಅವರು 90 ಟೆಸ್ಟ್ ಮ್ಯಾಚ್ ಗಳನ್ನು ಆಡಿ 4876 ರನ್ನು ಗಳನ್ನು ಕಲೆ ಹಾಕಿದ್ದಾರೆ.ಟೆಸ್ಟ್ ಮ್ಯಾಚ್ ನಲ್ಲಿ ಇವರು 256 ಕ್ಯಾಚ್ ಮತ್ತು 38 ಸ್ಟಂಪ್ ಔಟ್ ಮಾಡಿದ್ದಾರೆ .ಒನ್ ಡೇ ಇಂಟರ್ನ್ಯಾಷನಲ್ ಪಂದ್ಯದಲ್ಲಿ 10776 ರನ್ನು ಗಳನ್ನು ಕಲೆ ಹಾಕಿದ್ದಾರೆ. ಶ್ರೀಲಂಕಾ ವಿರುದ್ಧ ಕಲೆ ಹಾಕಿದ 183 ಇವರ ರನ್ ಇವರ ಒಂದು ದಿನದ ಅಂತರಾಷ್ಟ್ರೀಯ ಪಂದ್ಯದ ಅತ್ಯಧಿಕ ರನ್ ಇದಾಗಿದೆ. 1,318 ಕ್ಯಾಚ್ ಮತ್ತು 120 ಸ್ಟಂಪ್ ಔಟ್ ಮಾಡಿದ್ದಾರೆ. ಅತಿ ವೇಗವಾಗಿ ಸ್ಟಂಪ್ ಔಟ್ ಮಾಡುವ ಆಟಗಾರ ಎಂಬ ಹೆಗ್ಗಳಿಕೆ ಇವರಿಗೆ ಇದೆ. ಬ್ಯಾಟಿಂಗ್ ಮತ್ತು ವಿಕೆಟ್ ಕೀಪರ್ ಆಗಿ ಜಗತ್ಪ್ರಸಿದ್ಧರಾಗಿದ್ದಾರೆ. ಎಂ ಎಸ್ ಧೋನಿ ಅವರು ಭಾರತಕ್ಕಾಗಿ ಐಸಿಸಿ ಟ್ರೋಫಿ ಗೆದ್ದಿದ್ದಾರೆ. 2007ರ ಟಿ -ಟ್ವೆಂಟಿ ವರ್ಲ್ಡ್ ಕಪ್, 2011ರ ವರ್ಲ್ಡ್ ಕಪ್, 2013ರ ಐಸಿಸಿ ಚಾಂಪಿಯನ್ ಟ್ರೋಫಿ ಭಾರತಕ್ಕೆ ತಂದು ಕೊಟ್ಟಿದ್ದಾರೆ.

ಆಗಸ್ಟ್ 15 ,2018ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದರು .ನಿರಂತರ 16 ವರ್ಷದ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿಯನ್ನು ಘೋಷಣೆ ಮಾಡಿದರು. ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮಹೇಂದ್ರ ಸಿಂಗ್ ಧೋನಿಯವರು ಭಾರತದಲ್ಲಿ ಅತ್ಯಂತ ಪ್ರಚಲಿತದಲ್ಲಿರುವ ಐಪಿಎಲ್ ಕ್ರಿಕೆಟ್ ನಲ್ಲಿ ಆಟವಾಡುತ್ತಿದ್ದಾರೆ .ಟೀಮ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಕೂಡ 4 ಸಲ ಚಾಂಪಿಯನ್ನಾಗಿ ಹೊರಹೊಮ್ಮೀದೆ. ಈ ಆವೃತ್ತಿಯಲ್ಲಿ ಕೂಡ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿದೆ .

ಅಲ್ಲದೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಕೂಡ ಮಹೇಂದ್ರ ಸಿಂಗ್ ಧೋನಿ ಅವರಿಗೆ ದೊರತಿವೆ. ಭಾರತ ಕ್ರಿಕೆಟ್ ತಂಡ ಕಂಡ ಅತ್ಯಂತ ಹೆಮ್ಮೆಯ ನಾಯಕ ಹಾಗೂ ಕೂಲ್ ಕ್ಯಾಪ್ಟನ್ ಎಂದೆ ಪ್ರಸಿದ್ಧಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿಯ ಸಾಧನೆಗಳು ಅದ್ಭುತ. ಧೋನಿಗೆ ಕ್ರಿಕೆಟ್ ಹೊರತುಪಡಿಸಿ ಅವರಿಗೆ ಕೃಷಿ ಎಂದರೆ ಬಲು ಅಚ್ಚು ಮೆಚ್ಚು ಹಾಗಾಗಿ ತಮ್ಮ ಫಾರ್ಮ್ಸ್ ಹೌಸ್ ನಲ್ಲಿಯೇ ಭಿನ್ನ ವಿಭಿನ್ನ ಬೆಳೆಗಳನ್ನು ಬೆಳೆದು ವಿದೇಶಕ್ಕೆ ರಫ್ತು ಮಾಡುತ್ತಾರೆ .ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದನ್ನು ಧೋನಿ ಇಷ್ಟಪಡುತ್ತಾರೆ ,ಸೈನಿಕರನ್ನು ಗೌರವಿಸುವುದು ,ಜೊತೆಗೆ ಸೈನಿಕರ ಜೊತೆ ಸಮಯವನ್ನು ಕೂಡ ಕಳೆದಿರುತ್ತಾರೆ. ಇಂದು ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತೀರುವ ಎಂ.ಎಸ್.‌ ದೋನಿ ಅವರಿಗೆ ಅವರ ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದ್ದಾರೆ.

Share News

About BigTv News

Check Also

ಐಪಿಎಲ್ ಮ್ಯಾಚ್ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣು ಕ್ಯಾಂಟೀನ್ ಗೆ ಕಟ್ಟುನಿಟ್ಟೀನ ಸೂಚನೆ.

ಕಳೆದ ಐಪಿಎಲ್ ಸೀಸನ್ ನಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ ನಡುವಿನ ಪಂದ್ಯದ ವೇಳೆ 23 ವರ್ಷದ ಯುವಕ ಚೈತನ್ಯ …

Leave a Reply

Your email address will not be published. Required fields are marked *