Breaking News

ನಿನ್ನಾಕೆ ಹೆಸರು ಹೃದಯದಲ್ಲಿರಲಿ ಬೈಕ್‌ ನ ಮೇಲಲ್ಲ ; ಧಾರವಾಡ ಪೋಲಿಸ್‌

ಧಾರವಾಡ: ಸಾರ್ವಜನಿಕರಿಗೆ ಕಾನೂನು ತಿಳುವಳಿಕೆ ಮೂಡಿಸಲು ಪೊಲೀಸರು ಹಗಲಿರುಳು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ, ಕೆಲವರು ಮಾತ್ರ ಕಾನೂನು ಉಲ್ಲಂಘನೆ ಮಾಡುವುದೇ ಹೆಚ್ಚು. ಹಾಗಾಗಿಯೇ ಪೊಲೀಸರು ಮತ್ತಷ್ಟು ಕಾಳಜಿ ತೋರಿಸಿ ಕಾನೂನು ತಿಳಿಸಲು ಮುಂದಾಗಿದ್ದಾರೆ. ಧಾರವಾಡದ ಸಂಚಾರಿ ಠಾಣೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೈಕಿನ ಹಿಂಬದಿ ನಂಬರ್ ಪ್ಲೇಟ್ ಹಾಕದೇ ‘ನನ್ನಾಕಿ’ ಎಂದು ಬರೆದಿರುವುದು ಕಂಡು ಬಂದಿದೆ. ತಕ್ಷಣವೇ ಬೈಕ್‌ನ್ನ ವಶಕ್ಕೆ ಪಡೆದು ನಂಬರ್ ಪ್ಲೇಟ್ ಹಾಕಿಸಿ ಕಳಿಸಿದ್ದಾರೆ.

ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೊಲೀಸರು, ನನ್ನಾಕಿ ಹೆಸರು ಹೃದಯದಲ್ಲಿರಲಿ ಬೈಕಿನ ಮೇಲಲ್ಲ ಎಂದು ಹೇಳಿದ್ದಾರೆ. ವಿಶೇಷವಾಗಿ ಜಾಗೃತಿ ಮೂಡಿಸಲು ಧಾರವಾಡ ಸಂಚಾರಿ ಠಾಣೆ ಇನ್ಸಪೆಕ್ಟರ್ ಮಲ್ಲನಗೌಡ ನಾಯ್ಕರ ಮುಂದಾಗಿದ್ದು, ಬೈಕ್ ಬಳಕೆದಾರರು ಎಚ್ಚರಿಕೆ ವಹಿಸಬೇಕಿದೆ.

Share News

About BigTv News

Check Also

ಪಿಎಸ್‌ಐ-ಪಿಸಿ ಮೇಲೆ ಲೋಕಾಯುಕ್ತ ದಾಳಿ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ!

ಭ್ರಷ್ಟಾಚಾರಕ್ಕೆ ಬಿಗಿ ಹೊಡೆತ: ಪಿಎಸ್‌ಐ, ಪಿಸಿ ಬಂಧನಕ್ಕೆ ಠಾಣೆ ಮುಂದೆ ಪಟಾಕಿ ಹಬ್ಬ! ಲೋಕಾಯುಕ್ತ ದಾಳಿ ನಂತರ ಜನರ ಸಂಭ್ರಮ: …

Leave a Reply

Your email address will not be published. Required fields are marked *