Breaking News

ಹೊಚ್ಚ ಹೊಸ ಧಾರಾವಾಹಿ ‘ಲಕ್ಷ್ಮಿ ನಿವಾಸ’ದಲ್ಲಿ ಚಂದನಾ ಅನಂತಕೃಷ್ಣ ನಟಿಸಲಿದ್ದಾರೆ…

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಭರ್ಜರಿ ಬ್ಯಾಚುಲರ್ಸ್’ ಶೋವಿನಲ್ಲಿ ರುದ್ರ ಮಾಸ್ಟರ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದ ಚಂದನಾ ಅನಂತಕೃಷ್ಣ ಶೋವಿನಿಂದ ಅರ್ಧಕ್ಕೆ ಹೊರಬಂದಿದ್ದರು. ಆದರೆ, ಅವರು ಯಾಕೆ ಶೋವಿನಿಂದ ಅರ್ಧಕ್ಕೆ ಹೊರಬಂದರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೌದು, ಚಂದನಾ ಅನಂತಕೃಷ್ಣ ಅವರು ಇದೀಗ ನಟನೆಯ ಮೂಲಕ ನಿಮ್ಮ ಮನ ಸೆಳೆಯಲಿದ್ದಾರೆ.ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ‘ಲಕ್ಷ್ಮಿ ನಿವಾಸ’ದಲ್ಲಿ ಚಂದನಾ ಅನಂತಕೃಷ್ಣ ನಟಿಸಲಿದ್ದಾರೆ. ಜೀ ಕನ್ನಡ ವಾಹಿನಿಯು ಈಗಾಗಲೇ ಧಾರಾವಾಹಿಯ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು ಅದರಲ್ಲಿ ಚಂದನಾ ಅವರನ್ನು ನೋಡಬಹುದು.

ಇದರ ಜೊತೆಗೆ ಸ್ವತಃ ಚಂದನಾ ಅನಂತಕೃಷ್ಣ ಅವರು ಕೂಡಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕೂಡಾ ಧಾರಾವಾಹಿಯ ಪ್ರೋಮೋವೊನ್ನು ಹಂಚಿಕೊಂಡಿದ್ದು “ಜನರು ಮುಂದೆ ಏನು ಮಾಡ್ತೀರಾ ಅಂಥ ಕೇಳುತ್ತಿದ್ದರು. ಅದಕ್ಕೆ ಇದುವೇ ಉತ್ತರ. ನಾನು ಮರಳಿ ಬರುತ್ತಿದ್ದೇನೆ. ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹವನ್ನು ಬಯಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

Share News

About BigTv News

Check Also

ಖಾಕಿ ಕಾರ್ಯಾಚರಣೆಗೆ ಜಯ..! PSI ಗುಡದರಿ ತನಿಖೆಯಲ್ಲಿ ಗಾಂಜಾ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ..!!

ಗಾಂಜಾ ಮಾರಾಟಗಾರರಿಗೆ ಕೋರ್ಟ್‌ನಿಂದ ಖಡಕ್ ಏಟು..! PSI ಗುಡದರಿ ತನಿಖೆಗೆ ನ್ಯಾಯಾಲಯದ ಮುದ್ರೆ..!! ಗಾಂಜಾ ದಂಧೆಕೋರರಿಗೆ ಜೈಲೇ ಗತಿ..! 3 …

Leave a Reply

Your email address will not be published. Required fields are marked *