ರಾಹುಲ್ ಗಾಂಧಿಗೆ ಕೋರ್ಟ್ ನಲ್ಲಿ ಮತ್ತೊಂದು ಹಿನ್ನಡೆ ವಿಚಾರವಾಗಿ ಇಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದಾರೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಪ್ರಬುದ್ಧರಿದ್ದಾರೆ. ಟ್ರಯಲ್ ಕೋರ್ಟ್ ಶಿಕ್ಷೆ ನೀಡಿತ್ತು ನಂತರ ಜಿಲ್ಲಾ ಮತ್ತು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು ಆದರೆ ಹೈಕೋರ್ಟ್ ಶಿಕ್ಷೆ ರದ್ದುಗೊಳಿಸಲು ನಿರಾಕರಣೆ ಮಾಡಿದೆ. ಆದರೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಇವರ ಹೋರಾಟ ಯಾರ ವಿರುದ್ಧ ಹೈಕೋರ್ಟ್ ವಿರುದ್ಧನಾ.? ಅಂತ ಜೋಶಿ ಪ್ರಶ್ನೆಸಿದ್ದಾರೆ. ಸುಮಾರು 57-58 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಗೆ ಪ್ರಜ್ಞೆಯಿದೆಯಾ?.ಟ್ರಯಲ್ ಕೋರ್ಟ್ ನಲ್ಲಿ ಕ್ಷಮೆ ಯೋಚಿಸುವಂತೆ ಸಲಹೆ ಕೊಟ್ಟಾಗ ರಾಹುಲ್ ನಾನು ಅಂದದ್ದೆ ಸರಿ ಅಂತ ಸಮರ್ಥನೆ ಮಾಡಿದ್ದಾರೆ ನನ್ನ ಹೇಳಿಕೆ ವಾಪಸು ಪಡೆಯಲ್ಲಾ ಅಂದರು. ರಾಹುಲ್ ಗಾಂಧಿ ಅಪ್ರಬುದ್ಧತೆ ಮತ್ತು ಅಹಂಕಾರ ದಿಂದ ಆಗಿರುವಂತದ್ದು. ಕಾಂಗ್ರೆಸ್ ಯಾರ ವಿರುದ್ಧ ಪ್ರತಿಭಟನೆ ಮಾಡತ್ತಾರೆ ಮೊದಲು ರಾಹುಲ್ ಗಾಂಧಿ ಅವರಿಗೆ ಹೋಗಿ ಬುದ್ಧಿ ಹೇಳಲಿ. ರಾಹುಲ್ ಗಾಂಧಿ ಬುದ್ದಿಮತ್ತೆ ಕಡಿಮೆಯಿದೆ ಆದರೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದು ಅವರ ಮನಸ್ಥಿತಿ ತೋರಿಸುತ್ತದೆ. ಎಂದು ಹುಬ್ಬಳ್ಳಿಯಲ್ಲಿ ಇಂದು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





