Breaking News

ಚಂದ್ರಯಾನ- 3 ಯಶಸ್ಸಿಗೆ ಶಾಲಾ ಮಕ್ಕಳಿಂದ ಪ್ರಾರ್ಥನೆ.

ಧಾರವಾಡ: ದೇಶವೇ ಹೆಮ್ಮೆ ಪಡುವ ಚಂದ್ರಯಾನ 3 ಉಡಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಇಸ್ರೋಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಧಾರವಾಡದಲ್ಲಿ ಐದುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೆಡೆ ಸೇರಿ ಆಲ್ ದಿ ಬೆಸ್ಟ್ ಇಸ್ರೋ… ಅಂತಾ ಹೇಳುತ್ತ ಶುಭ ಕೊರಿದ್ದಾರೆ.

ಧಾರವಾಡದ ಮೃತ್ಯುಂಜಯ ನಗರದಲ್ಲಿರುವ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನರ್ಸರಿಯಿಂದ 10ನೇ ತರಗತಿವರೆಗಿನ ಮಕ್ಕಳು ತಮ್ಮ ಶಾಲೆ ಕ್ಯಾಂಪಸ್‌ನಲ್ಲಿ ಸೇರಿ ಸಾಮೂಹಿಕ ಶುಭಾಶಯ ಹೇಳಿದ್ದಾರೆ.

ರಾಕೆಟ್ ನ ಪುಟ್ಟ ಮಾದರಿಯನ್ನು ಮಧ್ಯದಲ್ಲಿಟ್ಟು, ಕೆಲವೊಂದು ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಏಕಕಾಲಕ್ಕೆ ಆಲ್ ದಿ ಬೆಸ್ಟ್ ಎಂದು ಶುಭ ಘೋಷಣೆ ಕೂಗಿದರು.

ಚಂದ್ರಯಾನ- 2 ಯಶಸ್ವಿ ಉಡಾವಣೆ ಆಗಿದ್ದರೂ ಆ ಬಳಿಕ ಸಂಪರ್ಕ ಕಡಿತಗೊಂಡು ಚಂದ್ರಯಾನ- 2 ಉದ್ದೇಶವೇ ವಿಫಲವಾಗಿತ್ತು. ಇದರಿಂದಾಗಿ ಭಾರತೀಯರಿಗೆಲ್ಲ ಬಹಳ ನಿರಾಸೆ ಮತ್ತು ಬೇಸರವಾಗಿತ್ತು. ಹೀಗಾಗಿ ಚಂದ್ರಯಾನ- 3 ಯಾವುದೇ ಅಡೆತಡೆ ಇಲ್ಲದೇ ಯಶಸ್ವಿಯಾಗಬೇಕು ಎಂಬ ಬಯಕೆಯಿಂದ ಮಕ್ಕಳು ಮತ್ತು ಶಿಕ್ಷಕರು ಸೇರಿ ಈ ಶುಭಾಶಯ ಕೋರಿ, ಯಶಸ್ಸಿಗೆ ಪ್ರಾರ್ಥಿಸಿದರು.

Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *