Breaking News

1978 ನನ್ನ ಜೀವನದ ಅಮೂಲ್ಯ ವರ್ಷ: ಡಾ.ವೀರೇಂದ್ರ ಹೆಗ್ಗಡೆ

ಧಾರವಾಡ : 1978 ರಲ್ಲಿ ನನ್ನ ಜೀವನದ ಅತಿ ಅಮೂಲ್ಯವಾದ ವರ್ಷ. ನನ್ನ ಮದುವೆಯಾಗಿದ್ದು 1978 ರಲ್ಲಿ ಆ ವರ್ಷದಲ್ಲಿ ಬಹಳಷ್ಟು ಅಭಿವೃದ್ಧಿ ‌ಕೆಲಸಗಳು ಆಗಿವೆ ಎಂದು ರಾಜ್ಯಸಭಾ ಸದಸ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ತಮ್ಮ ಮದುವೆಯ ನೆನಪನ್ನು ಮೆಲುಕು ಹಾಕಿದರು.

ಜೆಎಸ್ಎಸ್ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಾರವಾಡದಲ್ಲಿ ಜನತಾ ಶಿಕ್ಷಣ ಸಮಿತಿ ಪ್ರಾರಂಭ ಮಾಡಿದ ವರ್ಷ ಅದು. ಧಾರವಾಡದಲ್ಲಿ ಜೆಎಸ್ಎಸ್ ಧಾರವಾಡ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳು ಹಾಗೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ವಜ್ರಕುಮಾರ ಶಿಕ್ಷಣ ಸಮಿತಿಯನ್ನು ಬಂಡೆಯಂತೆ ನಿಂತು ಕಟ್ಟಿ ಬೆಳೆಸಿದ್ದಾರೆ. ಅವರ ಪರಿಶ್ರಮ ಸಾಕಷ್ಟಿದೆ ಎಂದು ತಿಳಿಸಿದರು.

ಧಾರವಾಡ ಜಿಲ್ಲೆಯಲ್ಲಿ ಎಂಜಿನಿಯರಿಂಗ್ ಕಾಲೇಜು, ಎಸ್‌ ಡಿಎಂ ವೈದ್ಯಕೀಯ ಕಾಲೇಜು, ಎಸ್‌ಡಿಎಂ ಆಸ್ಪತ್ರೆ ಪ್ರಾರಂಭ ಆಗುವಲ್ಲಿ ಎಲ್ಲ ಸಿಬ್ಬಂದಿಯ ಪಾತ್ರವೂ ಮುಖ್ಯ ಎಂದು ತಿಳಿಸಿದರು

Share News

About BigTv News

Check Also

ಖಾಕಿ ಕಾರ್ಯಾಚರಣೆಗೆ ಜಯ..! PSI ಗುಡದರಿ ತನಿಖೆಯಲ್ಲಿ ಗಾಂಜಾ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ..!!

ಗಾಂಜಾ ಮಾರಾಟಗಾರರಿಗೆ ಕೋರ್ಟ್‌ನಿಂದ ಖಡಕ್ ಏಟು..! PSI ಗುಡದರಿ ತನಿಖೆಗೆ ನ್ಯಾಯಾಲಯದ ಮುದ್ರೆ..!! ಗಾಂಜಾ ದಂಧೆಕೋರರಿಗೆ ಜೈಲೇ ಗತಿ..! 3 …

Leave a Reply

Your email address will not be published. Required fields are marked *