Breaking News

ಐಎಎಸ್ ಅಧಿಕಾರಿ ವಿರುದ್ದ ವರದಕ್ಷಿಣೆ ಆರೋಪ.

ಬೆಂಗಳೂರು: ಪತ್ನಿ ಮತ್ತು ಆಕೆಯ ಕುಟುಂಬಸ್ಥರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ ಮಾನಸಿಕ ಕಿರುಕುಳ ನೀಡುತ್ತಿರುವ ಆರೋಪದಡಿ ಐಎಎಸ್ ಅಧಿಕಾರಿಯೊಬ್ಬರ ವಿರುದ್ದ ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಕೊಡಗು ಜಿಲ್ಲಾ ಪಂಚಾಯತ್​​ನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಆಕಾಶ್ ಶಂಕರ್ ವಿರುದ್ಧ ಅವರ ಪತ್ನಿ ಡಾ. ವಂದನಾ ಈ ಆರೋಪ ಮಾಡಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿ ಟಿ ಆರ್ ಸುರೇಶ್ ಅವರ ಪುತ್ರಿ ಡಾ ವಂದನಾ ಅವರಿಗೆ ಕಳೆದ ವರ್ಷ ಜೂನ್‌ನಲ್ಲಿ ಆಕಾಶ್ ಶಂಕರ್ ಜತೆ ವಿವಾಹವಾಗಿತ್ತು. ಆದರೆ ಮದುವೆಯಾದ ಒಂದು ವರ್ಷದೊಳಗೆ ವರದಕ್ಷಿಣೆ ಕಿರುಕುಳ ನೀಡಿದ್ದ ಆರೋಪ ಆಕಾಶ್ ವಿರುದ್ಧ ಕೇಳಿ ಬಂದಿತ್ತು. ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಪತಿ ಆಕಾಶ್ ವಿರುದ್ಧ ಪತ್ನಿ ವಂದನಾ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ, ಪತಿಯಿಂದ ದೂರ ಉಳಿದಿದ್ದರು.ಆದರೆ ಇತ್ತೀಚಿಗೆ ಆಕಾಶ್ ಶಂಕರ್, ಅವರ ಸಹೋದರ ವಿಕಾಸ್ ಶಂಕರ್, ವಿಕಾಸ್ ಪತ್ನಿ ಚೇತನಾ, ಎಸ್ ಕೆ ಚೇತನ್ ಹಾಗೂ ಐಸಿರಿ ಶಿವಕುಮಾರ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ, ಅಸಂಬದ್ಧ ಪೋಸ್ಟ್ ಪ್ರಕಟಿಸುವುದು, ತಮ್ಮ ಸ್ನೇಹಿತರಿಗೆ ಮೆಸ್ಸೇಜ್ ರವಾನಿಸುತ್ತಿದ್ದಾರೆ ಎಂದು ವಂದನಾ ದೂರಿದ್ದಾರೆ

Share News

About BigTv News

Check Also

ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್! ರಾಸಲೀಲೆ ಆರೋಪ ಸದ್ದು!

ಯಶು ಬೇಬಿ ಆಡಿಯೋ ಲೀಕ್! ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್.. ಯಶು ಬೇಬಿ ಆಡಿಯೋ ಲೀಕ್! ಖಾಕಿ ಮೇಲೆ ಕಪ್ಪು …

Leave a Reply

Your email address will not be published. Required fields are marked *