Breaking News

ರಾಜ್ಯ ನರಳುತ್ತಿದೆ. ನಿದ್ದೆಯಲ್ಲಿರುವ ಸರ್ಕಾರ ಎದ್ದು ಎಳಲಿ‌ ಎಂದ ರಾಜ್ಯ ಬಿಜೆಪಿ…

ಬೆಂಗಳೂರು: ರಾಜ್ಯ ನರಳುತ್ತಿದೆ. ನಿದ್ದೆಯಲ್ಲಿರುವ ಸರ್ಕಾರ ಎದ್ದು ರೈತರಿಗೆ ಬೆಳೆ ಪರಿಹಾರ ನೀಡಲಿ ಎಂದು ರಾಜ್ಯ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ಮಕ್ಕಳ ಮೇಲಿನ ದೌರ್ಜನ್ಯದ ಘಟನೆ ಕೋಲಾರದ ಮಾಲೂರು ಯಲುವಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ನಡೆದಿರುವುದು ನೋಡಿದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಹಳಿತಪ್ಪಿದ ಆಡಳಿತದಲ್ಲಿ ಮಕ್ಕಳು ಸುರಕ್ಷಿತವಾಗಿರಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದು ಬಿಂಬಿತವಾಗುತ್ತಿದೆ. ಅದರಲ್ಲೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರೇ ದೌರ್ಜನ್ಯ ಶೋಷಣೆಗೆ ಗುರಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ನಿದ್ದೆಯಲ್ಲಿರುವ ಸರ್ಕಾರ ಎಚ್ಚರಗೊಳ್ಳುವುದು ಯಾವಾಗ? ಎಂದು ಪ್ರಶ್ನಿಸಿದೆ.

ಮಳೆ ವಿಫಲ, ವ್ಯವಸಾಯಕ್ಕೆ ವಿದ್ಯುತ್ ನೀಡದ ಫಲ, ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ನಿರ್ಧಾರದಿಂದಾಗಿ ಬೆಳೆ ಉತ್ಪನ್ನ ಈ ಬಾರಿ ವಿಪರೀತ ತಗ್ಗಿದೆ. ಇದರ ಪರಿಣಾಮ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಮುಂದಿನ ದಿನಗಳಲ್ಲಿ ‘ಅನ್ನ ಭಾಗ್ಯ’ ಯೋಜನೆಗೂ ಕುತ್ತು ತರಲಿದೆ. ಜನಸಾಮಾನ್ಯರ ಗೋಳು ಕಾಂಗ್ರೆಸ್ ಸರ್ಕಾರದ ಮುಂದೆ ‘ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. ಯಾಕೆ ಈ ರಿತಿ ಮಾಡುತ್ತಿದೆ ತಿಲಿಯುತ್ತಿಲ್ಲಾ.ಬಡವರ ಕಸ್ಟ ಯಾಕೆ ಸರ್ಕಾರ ಕ್ಕೆ ತಿಲಿತಿಲ್ಲಾ.ಬೆಡದ ಗ್ಯಾರಂಟಿ ಕೂಡುವ ಬದಲು ಬಡವರಿಗಾಗಿ ಎನಾದರು ಗ್ಯರಂಟಿ ಇದ್ದರೆ ಒಲ್ಕೆಯದಾಗುತಿತ್ತು ಎಂದು ಕಾಂಗ್ರೆಸ್‌ ಸರ್ಕಾರದ ಬಗ್ಗೆ ಹರಿಹಾಯ್ದರು.

Share News

About BigTv News

Check Also

Karnataka Police: ಇನ್ನು ಶಾಸಕರ ‘ಮಿನಿಟ್’ಗೆ ಬ್ರೇಕ್..? ಪೊಲೀಸ್ ವರ್ಗಾವಣೆಯಲ್ಲಿ ಗೃಹ ಇಲಾಖೆಯ ಬಿಗ್ ಸರ್ಜರಿ..!

ರಾಜ್ಯ ಪೊಲೀಸ್ ಇಲಾಖೆಯಲ್ಲಿ ವರ್ಷಗಳಿಂದ ಕೇಳಿಬರುತ್ತಿರುವ.. ರಾಜಕೀಯ ನಾಯಕರ ಕೈಗೊಂಬೆ ಇನ್ಸ್‌ಪೆಕ್ಟರ್‌ಗಳಿಗೆ ಬ್ರೇಕ್..? ಪೊಲೀಸ್ ವರ್ಗಾವಣೆಯಲ್ಲಿ ಭಾರೀ ಸರ್ಜರಿ..! ಶಾಸಕರ …

Leave a Reply

Your email address will not be published. Required fields are marked *