Breaking News

ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ನೀಡಿದ ಉಪಹಾರದಲ್ಲಿ ಜಿರಳೆ..

ಭೋಪಾಲ್ (ಮಧ್ಯಪ್ರದೇಶ) : ಭೋಪಾಲ್‌ನ ರಾಣಿ ಕಮಲಾಪತಿಯಿಂದ ದೆಹಲಿಯ ಹಜರತ್ ನಿಜಾಮುದ್ದೀನ್​ಗೆ​ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ನೀಡಿದ ಉಪಹಾರದಲ್ಲಿ ಜಿರಳೆ ಕಾಣಿಸಿಕೊಂಡಿದೆ ಎಂದು ದೂರು ನೀಡಿದ ಬಳಿಕ, ರೈಲ್ವೆ ಇಲಾಖೆಯು ಅಡುಗೆ ಪರವಾನಗಿದಾರರ ವಿರುದ್ಧ ಕ್ರಮ ಕೈಗೊಂಡಿದೆ.ಜುಲೈ 24, 2023ರಂದು ಭೋಪಾಲ್‌ನಿಂದ ಗ್ವಾಲಿಯರ್‌ಗೆ ಕೋಚ್ ಸಂಖ್ಯೆ 20171 ರ ಸೀಟ್ ಸಂಖ್ಯೆ 57 ರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಉಪಾಹಾರಕ್ಕಾಗಿ ತೆಗೆದುಕೊಂಡ ಪರಾಠದಲ್ಲಿ ಜಿರಳೆ ಪತ್ತೆಯಾಗಿತ್ತು. ಕೂಡಲೇ ರೈಲುಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಇತರೆ ಪ್ರಯಾಣಿಕರು, ತಿಂಡಿಯಲ್ಲಿ ಜಿರಳೆ ಇರುವ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಈ ಮಾಹಿತಿ ಗಮನಕ್ಕೆ ಬಂದ ತಕ್ಷಣ, ರೈಲಿನಲ್ಲಿದ್ದ IRCTC ಅಧಿಕಾರಿಗಳು ತಕ್ಷಣವೇ ಪ್ರಯಾಣಿಕರನ್ನು ಸಂಪರ್ಕಿಸಿ, ತ್ವರಿತ ಕ್ರಮ ಕೈಗೊಂಡು ಪರ್ಯಾಯ ಆಹಾರದ ವ್ಯವಸ್ಥೆ ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ IRCTC ಕ್ಷಮೆ ಯಾಚಿಸಿದೆ. ಆಹಾರ ಸೇವೆ ಒದಗಿಸುವ ಲೈಸೆನ್ಸ್‌ದಾರರಿಗೆ ದಂಡ ವಿಧಿಸಿದೆ. ಜೊತೆಗೆ, ಅಡುಗೆಮನೆಯಲ್ಲಿ ಆಹಾರ ತಯಾರಿಸುವ ಮುನ್ನ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. ಹಾಗೂ ಅಡುಗೆ ಕೋಣೆಯನ್ನು ಕಾಲಕಾಲಕ್ಕೆ ಪರಿಶೀಲಿಸಲು ನಿರ್ಧರಿಸಿದೆ.ಭಾರತೀಯ ರೈಲ್ವೆ ಕೂಡ ಆರೋಪಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ ಮತ್ತು ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ತಿಳಿಸಿದೆ. ಭವಿಷ್ಯದಲ್ಲಿ ಇಂತಹ ದೂರುಗಳು ಕಂಡು ಬಂದರೆ IRCTC ಮತ್ತು ಪರವಾನಗಿದಾರರಿಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Share News

About BigTv News

Check Also

ಅಭಿಮಾನಿಗಳಿಗೆ ಶಾಕ್ ಡಾಲಿ

ಡಾಲಿ ಧನಂಜಯ್ ಹುಟ್ಟುಹಬ್ಬದ ಹಿನ್ನೆಲೆ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಬಾರಿ ತಾವು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು …

Leave a Reply

Your email address will not be published. Required fields are marked *