ಮುಳಗುಂದ : ಹಿಂದು ಮುಸ್ಲಿಂ ಭಾವೈಕ್ಯತೆಯ ಪ್ರತೀಕ ಮೊಹರಂ ಹಬ್ಬವನ್ನು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕೋಲಾಟ, ಯುವಕರ ಹೆಜ್ಜೆ ಮೇಳ ಮೆರವಣಿಗೆಯೊಂದಿಗೆ ಶನಿವಾರ ಆಚರಿಸಲಾಯಿತು.ಸಂಪ್ರದಾಯದಂತೆ ಪಟ್ಟಣದ ದಾವಲ್ ಮಲ್ಲಿಕ ಪಹಾಡ, ನದಾಫ್ ಗಲ್ಲಿ ಕೌಲಪೇಟಿ, ಮಕಾನದಾರ ಮಸೀದಿ, ಚಿಂದಿಪೇಟಿ, ಸವಳಭಾವಿ, ತಿಗಡಿಕೇರಿ, ಬಂಡಿ ಓಣಿ, ಸಂಗನಪೇಟಿನಲ್ಲಿ ಪ್ರತಿಷ್ಠಾಪಿಸಲಾದ (ಪಂಜಾ) ಅಲೈದೇವರು, ಡೋಲಿ ಮೆರವಣೆಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಮಹಾಂತ ಶಿವಯೋಗಿಶ್ವರ ಮಠದ ಹತ್ತಿರ ಪರಸ್ಪರ ಎದರುಗೊಂಡ (ಅಲೈಬಲೈ) ದೃಷ್ಯವನ್ನು ಸೇರಿದ್ದ ಜನ ಸಮೂಹ ಕಣ್ಣತುಂಬಿಕೊಂಡು ಭಕ್ತಿಭಾವದಿಂದ ನಮಿಸಿದರು. ಯುವಕ ಮಂಡಳದ ಹೆಜ್ಜೆ ಮಜಲು, ಕೋಲಾಟ, ಜಾಂಜ್ ಮೇಳದ ಕುಣಿತ ಜನರನ್ನು ಆಕರ್ಷಿಸುವುದರ ಜತೆಗೆ ಮೊಹರಂ ಹಬ್ಬಕ್ಕೆ ಮೆರಗು ನೀಡಿದವು. ಮಸೀದಿಯಲ್ಲಿ ಯೌಮೆ ಅಶೂರಾ ಪ್ರಾರ್ಥನೆ ಹಾಗೂ ಶರಬತ್ತ ವಿತರಣೆ ಕಾರ್ಯಕ್ರಮ ಜರುಗಿ ಸಂಜೆ ಯಥಾ ಪ್ರಕಾರ ಪಂಜಾ ದೇವರು ಹೊಳೆಗೆ ಕಳೆಸುವ ಸಂಪ್ರಾಯದ ನೆರವೇರಿಸುವ ಮೂಲಕ ಮೊಹರಂ ಹಬ್ಬಕ್ಕೆ ತೆರೆ ಬಿದ್ದಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news




