Breaking News

ಗ್ಯಾಸ್‌ ಬೆಲೆಯಲ್ಲಿ 100 ರೂಪಾಯಿ ಇಳಿಸಿದ ಕೇಂದ್ರ ಸರ್ಕಾರ: ಇಂದು ಮಧ್ಯರಾತ್ರಿಯಿಂದಲೇ ದರ ಜಾರಿ!

ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಮಂಗಳವಾರ ಇಳಿಸಿವೆ. 19ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ (99.75 ರೂಪಾಯಿ) ಅಂದಾಜು 100 ರೂಪಾಯಿ ಇಳಿಕೆಯಾಗಿದೆ.

ಕೋಲ್ಕತ್ತ 1,802.50 ರೂ, ಮುಂಬೈ 1,640.50 ರೂಪಾಯಿ ಇದ್ದರೆ ಇನ್ನು ಚೆನ್ನೈನಲ್ಲಿ 19 ಕೆಜಿಯ ಒಂದು ಸಿಲಿಂಡರ್ ಬೆಲೆ 1,852.50 ರೂಪಾಯಿ ಆಗಿದೆ. ಜುಲೈ 4 ರಂದು ಎಲ್​ಪಿಸಿ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಪರಿಷ್ಕರಿಸಿದ್ದವು. ಪರಿಣಾಮ 19 ಕೆಜಿಯ ಸಿಲಿಂಡರ್ ಬೆಲೆ 1,780 (ದೆಹಲಿ), 1,895.50 (ಕೋಲ್ಕತ್ತ), 1,733.50 (ಮುಂಬೈ) ಹಾಗೂ ಚೆನ್ನೈನಲ್ಲಿ 1,945 ರೂಪಾಯಿ ಆಗಿತ್ತು.

ಸಾಮಾನ್ಯವಾಗಿ ಕಂಪನಿಗಳು ತಿಂಗಳದ ಮೊದಲನೇಯ ದಿನ ವಾಣಿಜ್ಯಕ್ಕೆ ಬಳಸುವ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಆದರೆ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಗೃಹ ಬಳಕೆಯ 14.2 ಕೆಜಿಯ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು ಮಾರ್ಚ್​ 1 ರಂದು ತೈಲ ಕಂಪನಿಗಳು ಪರಿಷ್ಕರಣೆ ಮಾಡಿದ್ದವು

Share News

About BigTv News

Check Also

ಖಾಕಿ ಕಾರ್ಯಾಚರಣೆಗೆ ಜಯ..! PSI ಗುಡದರಿ ತನಿಖೆಯಲ್ಲಿ ಗಾಂಜಾ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ..!!

ಗಾಂಜಾ ಮಾರಾಟಗಾರರಿಗೆ ಕೋರ್ಟ್‌ನಿಂದ ಖಡಕ್ ಏಟು..! PSI ಗುಡದರಿ ತನಿಖೆಗೆ ನ್ಯಾಯಾಲಯದ ಮುದ್ರೆ..!! ಗಾಂಜಾ ದಂಧೆಕೋರರಿಗೆ ಜೈಲೇ ಗತಿ..! 3 …

Leave a Reply

Your email address will not be published. Required fields are marked *