ಬೆಂಗಳೂರು: ಸ್ಯಾಂಡಲ್‌ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬ್ಯಾಂಕಾಕ್‌ನಲ್ಲಿದ್ದ ಸ್ಪಂದನಾ ಅವರಿಗೆ ಹಾರ್ಟ್ ಅಟ್ಯಾಕ್ ಆಗಿ ನಿಧನರಾಗಿದ್ದಾರೆ. ಸದ್ಯ ಲೋ ಬಿಪಿ ಹಾಗೂ ಹೃದಯಾಘಾತ ಆಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ವಿಜಯರಾಘವೇಂದ್ರ ಹಾಗೂ ಸ್ಪಂದನಾ ದಂಪತಿಗೆ ಇವರಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. 2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು.
ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ಅವರನ್ನು ವಿಜಯ ರಾಘವೇಂದ್ರ 2007, ಆಗಸ್ಟ್ 26ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಈ ದುರಂತ ನಡೆದಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





