ನಟ ವಿಜಯ ರಾಘವೇಂದ್ರ ಮತ್ತು ಸ್ಪಂದನಾರದ್ದು ಸುಂದರ ದಾಂಪತ್ಯ. ಸ್ಯಾಂಡಲ್ವುಡ್ನ ಮಾದರಿ ದಂಪತಿಯೆಂದೇ ಗುರುತಿಸಿಕೊಂಡಿದ್ದರು. ಆದರೆ, ವಿಧಿಯಾಟ ಇವರ ಬಾಳಲ್ಲಿ ಬಹುದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿ ಬಿಟ್ಟಿತು. ಯಾವುದೇ ಸುಳಿವಿಲ್ಲದೇ ‘ಚಿನ್ನಾರಿಮುತ್ತನ ಚಿನ್ನ’ ಬಾರದ ಲೋಕಕ್ಕೆ ಪಯಣಿಸಿ ಬಿಟ್ಟರು. ಸ್ಪಂದನಾ ಅವರು ಇಹಲೋಕ ತ್ಯಜಿಸಿ ಇಂದಿಗೆ 13 ದಿನಗಳಾಗಿವೆ. ಪತ್ನಿಯ ನಿಧನ ವಿಜಯ್ ಬದುಕಲ್ಲಿ ಬರಸಿಡಿಲು ಬಡಿದಂತಾಗಿದೆ. ನೋವಲ್ಲೇ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ.
ಇದೀಗ ಸ್ಪಂದನಾ ನಿಧನದ ನಂತರ ಅವರನ್ನು ನೆನೆದು ಭಾವನಾತ್ಮಕ ಪೋಸ್ಟ್ವೊಂದನ್ನು ವಿಜಯ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮನಸ್ಸಿನಲ್ಲಿರುವ ನೋವನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ. “ಸ್ಪಂದನಾ.. ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದೆ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ, ಕೇವಲ ನಿನ್ನವ..” ಎಂದು ಪ್ರೀತಿಯ ಸಾಲುಗಳನ್ನು ಅಗಲಿದ ಪತ್ನಿಗಾಗಿ ಬರೆದುಕೊಂಡಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





