Breaking News

ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಭೇಟಿ ಮಾಡಿ ಮನವೊಲಿಕೆ ಯತ್ನ‌…

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ನಿವಾಸಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ನಿನ್ನೆ(ಗುರುವಾರ) ಸಂಜೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಸಿಎಂ ವಿರುದ್ಧ ಬಹಿರಂಗ ಹೇಳಿಕೆ ನೀಡಿದ ಹಿನ್ನೆಲೆ ಎಐಸಿಸಿ, ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.‌ ಇದರ ಬೆನ್ನಲ್ಲೇ ಸಚಿವರಾದ ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಭೇಟಿ ಮಾಡಿ ಮನವೊಲಿಕೆ ಯತ್ನ‌ ನಡೆಸಿದ್ದಾರೆ. ‘ಮುಖ್ಯಮಂತ್ರಿ ವಿರುದ್ಧ ಬಹಿರಂಗ ಹೇಳಿಕೆ ನೀಡಿದರೆ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರ ಉಂಟಾಗುತ್ತದೆ. ಹೀಗಾಗಿ ಏನೇ ಅಸಮಾಧಾನ ‌ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸುವಂತೆ ಮನವಿ ಮಾಡಿದ್ದಾರೆ’ ಎನ್ನಲಾಗಿದೆ.

Share News

About BigTv News

Check Also

ಖಾಕಿ ಕಾರ್ಯಾಚರಣೆಗೆ ಜಯ..! PSI ಗುಡದರಿ ತನಿಖೆಯಲ್ಲಿ ಗಾಂಜಾ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ..!!

ಗಾಂಜಾ ಮಾರಾಟಗಾರರಿಗೆ ಕೋರ್ಟ್‌ನಿಂದ ಖಡಕ್ ಏಟು..! PSI ಗುಡದರಿ ತನಿಖೆಗೆ ನ್ಯಾಯಾಲಯದ ಮುದ್ರೆ..!! ಗಾಂಜಾ ದಂಧೆಕೋರರಿಗೆ ಜೈಲೇ ಗತಿ..! 3 …

Leave a Reply

Your email address will not be published. Required fields are marked *