Breaking News

ಮಾದಕವಸ್ತು ವ್ಯಸನದ ವಿರುದ್ಧ ಎಲ್ಲರೂ ಹೋರಾಟ ಮಾಡುವುದು ಉಪ ಪೊಲೀಸ್ ಆಯುಕ್ತ ರಾಜು ಎಂ

ಧಾರವಾಡ ಮಾದಕ ವ್ಯಾಸನವು ಮೂಲತಃ ಮೆದುಳಿನ ಕಾಯಿಲೆಯಾಗಿದೆ. ಮಾದಕ ವ್ಯಸನದ
ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸದೇ ಮಾದಕವಸ್ತು ವ್ಯಸನದ ವಿರುದ್ಧ ಎಲ್ಲರೂ ಹೋರಾಟ ಮಾಡುವುದು ಅತ್ಯಂತ ಅವಶ್ಯವಾಗಿದೆ. ಡ್ರಗ್ಸ್ ವಿರುದ್ದದ ಸಮರವೇ ಈ ಜಾಥಾ ಎಂದು ಎಂದು ಉಪ ಪೊಲೀಸ್ ಆಯುಕ್ತ ರಾಜು ಎಂ. ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ನಗರದ ಕೆಸಿಡಿ ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತಾಲಯ ಮತ್ತು ಆರೋಹಣ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ *ಮದಕವಸ್ತು ವ್ಯಸನದ ವಿರುದ್ಧದ ಜಾಗೃತಿಗಾಗಿ ನಡಿಗೆ* ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿರು.

ಸಣ್ಣ ವಯಸ್ಸಿನಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಿ ಇಂದು ಅದರಿಂದ ಹೊರಬರದೆ ಜೀವನವನ್ನೇ ಹಾಳು ಮಾಡಿಕೊಂದಿರುವ ಎಷ್ಟೋ ಯುವಕರ ಉದಾಹರಣೆಗಳು ಕಣ್ಣಮುಂದೆ ಇವೆ. ಗಾಂಜಾ, ಕೊಕೇನ್ ಗಳಲ್ಲದೇ ಮದ್ಯಸೇವನೆ, ತಂಬಾಕು ಸೇವನೆ ಕೂಡ ಮಾದಕ ವಸ್ತುಗಳ ಸೇವನೆಗಳು ಇಂದು ನಮ್ಮ ಯುವಜನತೆ ಮತ್ತು ಸಮಾಜವನ್ನು ಕಾಡುತ್ತಿದ್ದು ಅವುಗಳಿಂದ ಹೊರಬರಲು ಆಗುತ್ತಿಲ್ಲ. ಪೋಷಕರ, ಹಿರಿಯರ ನೆರವು ಸಿಗದೆ ಅವರ ಬದುಕು ಕಮರಿಹೋಗಿತ್ತಿವೆ. ಮಾದಕ ವ್ಯಸನದಿಂದ ಆಗುವ ಶಾರೀರಿಕ ಬದಲಾವಣೆ, ಪರಿಣಾಮಗಳನ್ನು ಸಹಿಸಿಕೊಳ್ಳುವುದು ಕಷ್ಟವಾಗಿದೆ ಎಂದು ಅವರು ಹೇಳಿದರು.
ಡ್ರಗ್ಸ್ ಗಳು ವಿಶ್ವದ ಪ್ರತಿಯೊಂದು ದೇಶದ ಯುವಕರ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದ್ದು, ಅಭಿವೃದ್ಧಿ ವಿರೋಧಿ ಆಗಿದೆ ಎಂದು ಅವರು ತಿಳಿಸಿದರು.

ಡ್ರಗ್ಸ್ ವಸ್ತುಗಳು, ವ್ಯಸನಿಗಳ ಮನಸ್ಸು ಮತ್ತು ದೇಹದ ಜೀವಕೋಶಗಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ. ಯುವಕರು ಆರೋಗ್ಯದ ಬಗ್ಗೆ ಸಂಪೂರ್ಣ ಜ್ಞಾನವಿಡಬೇಕು. ಮಾದಕ ವ್ಯಸನವು ಮೂಲತಃ ಮೆದುಳಿನ ಕಾಯಿಲೆಯಾಗಿದೆ. ಎಚ್ಚರದಿಂದ ಇರಬೇಕು ಎಂದು ನುಡಿದರು.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ. ಗೋಪಾಲ ಕೃಷ್ಣ. ಬಿ., ಸಹಾಯಕ ಪೊಲೀಸ್ ಆಯುಕ್ತ ವಿಜಯ ಕುಮಾರ ಟಿ., ಸಿ.ಪಿ.ಐ ಶಂಕರಗೌಡ ಬಸವನಗೌಡ ಮತ್ತು ಇತರ ಪೊಲೀಸ್ ಅಧಿಕಾರಿಗಳು, ಆರೋಹನ ಪೌಂಡೆಶನ್ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share News

About BigTv News

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *