ಹುಬ್ಬಳ್ಳಿ: ಈದ್ಗಾ ಗಣೇಶೋತ್ಸವಕ್ಕೆ ಕ್ಷಣಗಣನೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ವಿರಾಜಮಾನನಾಗಿಲಿದ್ದಾನೆ ನೂರೆಂಟು ವಿಘ್ನಗಳ ಎದುರಿಸಿ ವಿಘ್ನ ನಿವಾರಕ ಗಣೇಶನ ಸ್ವಾಗತಕ್ಕೆ ಸಕಲ ತಯಾರಿ ನಡೆದಿದೆ. ಶಾಂತಿಯುತ ಗಣೇಶೋತ್ಸವಕ್ಕೆ ಖಾಕಿಪಡೆ ಸನ್ನದ್ಧ, ನಗರದಲ್ಲಿ ಬಿಗಿ ಪೊಲೀಸ್ ಭದ್ರತೆಮಾಡಲಾಗಿದೆ.ಸಾಕಷ್ಟು ವಿವಾದ ಬಳಿಕ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ದೊರೆತಿದೆ.
ಪ್ರತಿಷ್ಠಾಪನೆಗೆ ಕೆಲವೇ ಕ್ಷಣಗಳು ಬಾಕಿ ಇವೆ.ಬೆಳಿಗ್ಗೆ 9.30 ಕ್ಕೆ ನಗರದ ಮೂರು ಸಾವಿರ ಮಠದಿಂದ ವಿಜೃಂಭಣೆಯಿಂದ ಗಣೇಶನ ಮೆರವಣಿಗೆ ನಡೆಯಲಿದೆ.ಸರಿಯಾಗಿ 10.30 ಕ್ಕೆ 5 ಅಡಿ ಎತ್ತರದ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಆಗಲಿದೆ.ನಂತರ ಹೋಮ, ಹವನ ಜೊತೆಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನಡೆಯಲಿದೆ.ತದನಂತರ ಸಾರ್ವಜನಿಕರ ದರ್ಶನಕ್ಕೆ ಮುಕ್ತ ಅವಕಾಶ ಇರಲಿದೆ.ಮೂರು ದಿನಗಳ ಕಾಲ ಇದೆ ರೀತಿಯ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.
ರಾಜ್ಯದ ಹೆಸರಾಂತ ಸ್ವಾಮಿಗಳು, ಹಿಂದೂಪರ ಮುಖಂಡರು ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಗಣೇಶನ ದರ್ಶನ ಪಡೆಯಲಿದ್ದಾರೆ.ಇನ್ನೂ ಶಾಂತಿಯುತವಾಗಿ ಹಬ್ಬ ಆಚರಣೆಗೆ ಪೊಲೀಸ್ ಇಲಾಖೆ ಸಹ ಸಕಲ ಸಿದ್ಧತೆಯನ್ನು ನಡೆಸಿದೆ.ಭದ್ರತಾ ದೃಷ್ಟಿಯಿಂದ ಹಿರಿಯ ಅಧಿಕಾರಿಗಳನ್ನು ಸೇರಿ ಐದು ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.ಕಳೆದ ಬಾರಿಯಂತೆ ಈ ಬಾರಿ ಮೈದಾನ ಎರಡು ಭಾಗ ನಮಾಝ್ ಮಾಡುವ ಸ್ಥಳ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸ್ಥಳದ ನಡುವೆ ತಗಡಿನ ಸೀಟ್ ಗಳನ್ನು ಹಾಕಿ ಅದರ ಮೇಲೆ ಪರದೆ ಹಾಕಲಾಗಿದೆ. ಮೈದಾನದಲ್ಲಿ ಸುತ್ತಲೂ ಸಿಸಿ ಕ್ಯಾಮರಾಗಳ ಕಣ್ಗಾವಲು ಇದೆ. ಮೈದಾನದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಆರಂಭ ಮಾಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





