Breaking News

ಅಧಿಕೃತವಾಗಿ ‘ಕೆಜಿಎಫ್ 3’ ಘೋಷಣೆ ಮಾಡಿದ ಹೊಂಬಾಳೆ ಫಿಲ್ಮ್ಸ್

ಸಲಾರ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯ ಜೊತೆಗೆ ಮತ್ತೊಂದು ಮಹತ್ವದ ಸುದ್ದಿಯನ್ನೂ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ನೀಡಿದೆ. ಮುಂದಿನ ದಿನಗಳಲ್ಲಿ ಕೆಜಿಎಫ್ 3 (KGF 3) ಸಿನಿಮಾವನ್ನೂ ನಿರ್ಮಾಣ ಮಾಡುವುದಾಗಿ ಅದು ತಿಳಿಸಿದೆ. ಸಲಾರ್ ಸಿನಿಮಾದ ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯವನ್ನು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಬರೆದುಕೊಂಡಿದೆ.

ಕೆಜಿಎಫ್ 3 ಸಿನಿಮಾ ಮುಂಬರುವ ದಿನಗಳಲ್ಲಿ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ, ಅಧಿಕೃತವಾಗಿ ಯಾರೂ ಅದನ್ನು ಹೇಳುವ ಪ್ರಯತ್ನ ಮಾಡಿರಲಿಲ್ಲ. ಸಲಾರ್ ನಂತರವೇ ಈ ಚಿತ್ರವನ್ನು ಪ್ರಶಾಂತ್ ನೀಲ್ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಸುಳಿವು ಎನ್ನುವಂತೆ ಕೆಜಿಎಫ್ 3 ಚಿತ್ರದ ಬಗ್ಗೆ ನಿರ್ಮಾಣ ಸಂಸ್ಥೆ ಪ್ರಸ್ತಾಪಿಸಿದೆ.

ಪ್ರಶಾಂತ್ ನೀಲ್ (Prashant Neel) ಮತ್ತು ಯಶ್ (Yash) ಕಾಂಬಿನೇಷನ್ ನ ಕೆಜಿಎಫ್ ಸಿನಿಮಾ ವಿಶ್ವಮಟ್ಟದಲ್ಲಿ ಸದ್ದು ಮಾಡಿತು. ಕನ್ನಡ ಸಿನಿಮಾವೊಂದು ಆ ಪ್ರಮಾಣದಲ್ಲಿ ದುಡ್ಡು ಮಾಡಲು ಸಾಧ್ಯವಾ ಎನ್ನುವ ಅಚ್ಚರಿಯನ್ನೂ ಮೂಡಿತ್ತು. ಕೆಜಿಎಫ್ 1 ಮತ್ತು 2 ಎರಡೂ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಬಿರುಗಾಳಿ ಎಬ್ಬಿಸಿದ್ದವು. ಹಾಗಾಗಿ ಮುಂದಿನ ದಿನಗಳಲ್ಲಿ ಈ ಸರಣಿ ಮುಂದುವರೆಯಲಿದೆ ಎನ್ನುವ ಸುಳಿವೂ ಕೂಡ ಇತ್ತು.

ಇದೀಗ ಪ್ರಶಾಂತ್ ನೀಲ್ ಸಲಾರ್ ಮುಗಿಸಿಕೊಂಡು, ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಯಶ್ ಹೊಸ ಸಿನಿಮಾದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಹಾಗಾಗಿ ಕೆಜಿಎಫ್ 3 ಸಿನಿಮಾ ಯಾವಾಗ ಸೆಟ್ಟೇರಲಿದೆ ಎನ್ನುವ ಕುತೂಹಲ ಎಲ್ಲರಿಗೂ ಮೂಡಿದೆ

Share News

About BigTv News

Check Also

ಹುಬ್ಬಳ್ಳಿ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ಅಧಿಕಾರಿಗಳ ದಾಳಿ

ಹಾಡು ಹಗಲೆ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ನಡೆಯುತ್ತಿದೆ.ಅಡ್ಡೆಯ‌ ಮೇಲೆ ತಹಶೀಲ್ದಾರ್ ಹಾಗೂ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಇಂದು ದಾಳಿ …

Leave a Reply

Your email address will not be published. Required fields are marked *