ಕಿಮ್ಸ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣೆ…
ಯುವಕರ ಪರ ಸಮೃದ್ಧ ನಾಡು ಕಟ್ಟಲು ಖಾಕಿ ಪಡೆ ನಡೆ..
ಹುಬ್ಬಳ್ಳಿಯಲ್ಲಿ ಹೂ- ಬಳ್ಳಿಯ ಮನಸ್ಸಿನ ಕೆಲಸ ಮಾಡುತ್ತಿರುವ ಆರಕ್ಷಕರು….
ಹುಬ್ಬಳ್ಳಿ; ಬೆಳ್ಳಂಬೆಳಿಗ್ಗೆ ಫೀಲ್ಡ್ ಗೆ ಇಳಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಪೊಲೀಸರು ಮಾದಕ ವಸ್ತುಗಳ ಬಳಕೆದಾರರನ್ನು ವಶಕ್ಕೆ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ… ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮೀಷನರೇಟ್ ನಿಂದ ಇಂದು ಕಮೀಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಉಪಯೋಗಿಸುವಂತಹ ಎಲ್ಲಾ ಬಳಕೆದಾರರನ್ನು ಇಂದು ಬೆಳಗ್ಗೆಯಿಂದ ದಿಢೀರ್ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.ಕಮೀಷನರ್ ಎನ್.ಶಶಿಕುಮಾರ್ ಹಾಗೂ ಡಿಸಿಪಿ ರವೀಶ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಒಟ್ನಲ್ಲಿ ಅವಳಿನಗರದಲ್ಲಿನ ಗಾಂಜಾ ಗಾಟು ಕಡಿಮೆ ಮಾಡಲು ಹು-ಧಾ ಕಮಿಷನರೇಟ್ ಶತಾಯಗತಾಯ ಪ್ರಯತ್ನ ಮಾಡುತಿದ್ದು, ಹಂತ ಹಂತವಾಗಿ ಅವಳಿನಗರದಲ್ಲಿನ ಗಾಂಜಾ ಹಾವಳಿಗೆ ಸಂಪೂರ್ಣ ಬ್ರೇಕ್ ಹಾಕೋಕೆ ಫೀಕ್ಸ್ ಆಗಿದ್ದಾರೆ.. ಇನ್ನಾದ್ರೂ ಗಾಂಜಾ ಆಸಾಮಿಗಳು ಎಚ್ಚೆತ್ತುಕೊಳ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

