Breaking News

ಕಾಣೆಯಾಗಿದ್ದ ಎರಡು ವರ್ಷದ ಮಗು ಪೋಷಕರ ಕೈಗೆ ಒಪ್ಪಿಸುವ ಮೂಲಕ ತನ್ನ ಶಕ್ತಿಯನ್ನು ಸಾಬೀತು ಮಾಡಿದ್ದಾನೆ….

ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಬಂದಿದ್ದ ಮಗುವೊಂದು ಕಿಡ್ನಾಪ್ ಆದ ಘಟನೆ ಭಕ್ತರಲ್ಲಿ ಭಯ ಹುಟ್ಟಿಸಿದೆ. ಆದರೆ ತಿರುಪತಿ ತಿಮ್ಮಪ್ಪ ಮಾತ್ರ ಭಕ್ತರ ಕೈ ಬಿಟ್ಟಿಲ್ಲ, ಕಾಣೆಯಾಗಿದ್ದ ಎರಡು ವರ್ಷದ ಮಗು ಪೋಷಕರ ಕೈಗೆ ಒಪ್ಪಿಸುವ ಮೂಲಕ ತನ್ನ ಶಕ್ತಿಯನ್ನು ಸಾಬೀತು ಮಾಡಿದ್ದಾನೆ.

ಸೋಮವಾರ ರಾತ್ರಿ ತಿರುಪತಿ ಆರ್‌ಟಿಸಿ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್ 3ರಲ್ಲಿ ಎರಡು ವರ್ಷದ ಬಾಲಕನನ್ನು ಅಪರಿಚಿತ ವ್ಯಕ್ತಿಯೊಬ್ಬರು ಅಪಹರಿಸಿದ್ದಾರೆ. ಎಯುಮಲಯನ ದೇವಸ್ಥಾನಕ್ಕೆ ಹೋಗಿ ತಿರುಪತಿ ಬಸ್ ನಿಲ್ದಾಣದಲ್ಲಿ ತಂಗಿದ್ದ ವೇಳೆ ಈ ಅಪಹರಣ ನಡೆದಿದೆ. ಅಪಹರಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಸಮಯದಲ್ಲಿ ಮಾಧವ ಬೆಟ್ಟದಲ್ಲಿ ಅಪಹರಣಕ್ಕೊಳಗಾಗಿದ್ದ ಮಗು ಇರುವುದು ಪೊಲೀಸರಿಗೆ ಗೊತ್ತಾಯಿತು. ಅಪಹರಣಕಾರ ಸುಧಾಕರ್ ಎಂಬುವುದು ತಿಳಿದುಬಂದಿದೆ. ಆದರೆ ಆತ ಪೊಲೀಸರು ಬರುವ ಶಂಕೆಯಿಂದ ಮಗುವನ್ನು ಪಕ್ಕನ ಮನೆಯಲ್ಲಿ ಬಿಟ್ಟು ಹೋಗಿದ್ದಾನೆ. ಮಗು ಅರುಳ್ ಮುರುಗನ್ ನನ್ನು ಪೊಲೀಸರು ರಕ್ಷಿಸುತ್ತಿದ್ದಂತೆ ಅಪಹರಣಕಾರ ಸುಧಾಕರ್ ಓಡಿಹೋಗಿದ್ದಾನೆ. ಈತನಿಗಾಗಿ ಸದ್ಯ ಹುಡುಕಾಟ ನಡೆಯುತ್ತಿದೆ. ಮಧ್ಯರಾತ್ರಿಯಲ್ಲಿ ಕಾಣೆಯಾದ ತಮ್ಮ ಮಗುವನ್ನು ಪತ್ತೆ ಮಾಡಿದ ಪೊಲೀಸರಿಗೆ ಚಂದ್ರಶೇಖರ್ ಮೀನಾ ದಂಪತಿ ಕೃತಜ್ಞತೆ ಸಲ್ಲಿಸಿದ್ದಾರೆ.

Share News

About BigTv News

Check Also

Featured Video Play Icon

ಪ್ರಜ್ವಲ್ ರೇವಣ್ ಪ್ರಕರಣದಲ್ಲಿ ಬಿಜೆಪಿ ನಿಲುವು ಸ್ಪಷ್ಟಪಡಿಸಬೇಕಿದೆ: ರಕ್ಷಾ ರಾಮಯ್ಯ

ಹುಬ್ಬಳ್ಳಿ: ಪ್ರಜ್ವಲ್ ರೇವಣ್ ಪ್ರಕರಣದಲ್ಲಿ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಆರು ತಿಂಗಳ ಹಿಂದೆಯೇ ಇದರ ಬಗ್ಗೆ ಮಾಹಿತಿ ಇದ್ದರೂ …

Leave a Reply

Your email address will not be published. Required fields are marked *