ಕೂರ್ಗ್ ಮತ್ತು ಚಿಕ್ಕಮಗಳೂರಿನಂತಹ ಗಿರಿಧಾಮಗಳಿಗೆ ಭೇಟಿ ಕೊಟ್ಟು ಬೇಸತ್ತಿದ್ದಲ್ಲಿ, ಈ ಗಿರಿಧಾಮಗಳಷ್ಟೇ ರಮಣೀಯವಾದ ಹಾಗೂ ಜನದಟ್ಟಣೆ ಕಡಿಮೆಯಿರುವ ಕೆಲವು ಗಿರಿಧಾಮಗಳಿಗೆ ಭೇಟಿ ಕೊಡಿ. ದಕ್ಷಿಣಭಾರತದ ರಾಜ್ಯಗಳಲ್ಲಿ ಕರ್ನಾಟಕವು ಶ್ರೀಮಂತ ರಾಜ್ಯವೆಂಬ ವಿಷಯ ಹೊಸತೇನು ಅಲ್ಲ ಇದು ಇನ್ನೂ ಅನ್ವೇಷಣೆಗೆ ಒಳಗಾಗದೇ ಇರುವಂತಹ ಹಲವಾರು ಕಣಿವೆಗಳು ಗಿರಿಗಳು ಮತ್ತು ಅರಣ್ಯಗಳನ್ನು ಹೊಂದಿದೆ. ಆದುದರಿಂದ ಇವುಗಳು ನಿಮಗೆ ಬೇಕಾದ ಆನಂದವನ್ನು ಒದಗಿಸುವಾಗ ಯಾವಾಗಲೂ ಅನ್ವೇಶಿತ ಪ್ರದೇಶಗಳಿಗೇ ಏಕೆ ಕೊಡುವಿರಿ? ಈ ಕೆಳಗಿನ ಪಟ್ಟಿಯಲ್ಲಿ ಕರ್ನಾಟಕದ ಕೆಲವು ಕಡಿಮೆ ಅನ್ವೇಷಣೆಗೊಳಗಾದ ಪ್ರಶಾಂತವಾದ ಪರಿಸರ ಮತ್ತು ಮೋಡಿಮಾಡುವಂತಹ ಪ್ರಕೃತಿಯನ್ನು ಒಳಗೊಂಡ ಗಿರಿಧಾಮಗಳಿದ್ದು, ಇವು ರಾತ್ರಿ ಮಲಗುವಾಗ ಹೇಳುವ ಕಥೆಯಲ್ಲಿ ಬರುವ ಸ್ವರ್ಗದಂತೆ ಕಾಣುತ್ತದೆ.
ಈ ಸ್ಥಳಗಳು ನಿಮಗೆ ಖಂಡಿತವಾಗಿಯೂ ಎಂದೂ ಮರೆಯದಂತಹ ಅನುಭವವನ್ನು ಕೊಡುತ್ತದೆ. ಇಲ್ಲಿ ಜಲಪಾತಗಳಿಂದ ನದಿಗಳವರೆಗೆ , ಸರೋವರಗಳಿಂದ ಕಾಡುಗಳು ಮತ್ತು ಬಯಲುಪ್ರದೇಶಗಳಿಂದ ಮಂಜಿನಿಂದ ಕೂಡಿದ ಪರ್ವತಗಳ ವರೆಗೆ ನೂರಾರು ತಾಣಗಳನ್ನು ಇಲ್ಲಿ ಕಾಣಬಹುದಾಗಿದೆ….
bigtvnews | Hubli Dharwad News | Kannada News | Karnataka News Hubli News | News In Hubli | Local news





