Breaking News

ಪ್ರದೀಪ್‌ ಈಶ್ವರ್‌ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಸೇವಾ ಸಂಸ್ಥೆ ಆಗ್ರಹ….

ಬೆಂಗಳೂರು: ಕನ್ನಡ ಕಿರುತೆರೆಯ ಬೃಹತ್‌ ರಿಯಾಲಿಟಿ ಶೋ ಎಂಬ ಖ್ಯಾತಿಯ ಬಿಗ್‌ಬಾಸ್‌ ಕನ್ನಡದಲ್ಲಿ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಕಾಣಿಸಿಕೊಂಡಿದ್ದು,ಈ ಕುರಿತು ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ವಿಧಾನಸಭೆ ಸ್ಪೀಕರ್​ಗೆ ಯು ಟಿ ಖಾದರ್‌ ಅವರಿಗೆ ದೂರು ನೀಡಿದೆ. ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕರಾಗಿರುವ ಪ್ರದೀಪ್‌ ಈಶ್ವರ್‌ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಯು ಟಿ ಖಾದರ್‌ ದೂರು ನೀಡುವ ಮೂಲಕ ಸೇವಾ ಸಂಸ್ಥೆಯು ಆಗ್ರಹಿಸಿದೆ.

ಇನ್ನು ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಬಿಗ್‌ ಬಾಸ್‌ ಮನೆಗೆ ಹೋಗಿರುವುದನ್ನ ಪ್ರಶ್ನಿಸಿ ವಿಧಾನಸಭೆ ಸ್ವೀಕರ್‌ ಯು ಟಿ ಖಾದರ್‌ ಅವರಿಗೆ ದೂರು ಸಲ್ಲಿಸಿದ್ದಾರೆ. ರಾಜ್ಯ ಸರಕಾರದಿಂದ ಸಂಬಳ ಪಡೆಯುತ್ತಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾದ ಪ್ರದೀಪ್‌ ಈಶ್ವರ್‌ ಅವರು ಜವಾಬ್ದಾರಿಯುತ ಪ್ರಜೆಯಾಗಿದ್ದಾರೆ.

ತಮ್ಮ ಕ್ಷೇತ್ರದ ಜನರಿಗೆ ಏನಾದರೂ ಸಮಸ್ಯೆಯಾದಗ ಸ್ಪಂದಿಸುವುದು ಇವರ ಕರ್ತವ್ಯ. ಆದರೆ, ಈ ಜವಾಬ್ದಾರಿ ಮರೆತು ಇವರು ಬಿಗ್‌ಬಾಸ್‌ ಮನರಂಜನೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಇಂತಹ ತಪ್ಪು ಮಾಡಿರುವ ಇವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ದೂರು ನೀಡಿದೆ.

Share News

About BigTv News

Check Also

₹7.11 Crore Robbery Case in bengaluru: ಸಿದ್ದಾಪುರ ATM ದರೋಡೆ ಪ್ರಕರಣ; ಪೊಲೀಸ್ ಪೇದೆಯೇ ಕಿಂಗ್‌ಪಿನ್!

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ನ 7.11 ಕೋಟಿ ರೂ. ದರೋಡೆ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಸಿದ್ದಾಪುರ …

Leave a Reply

Your email address will not be published. Required fields are marked *