Breaking News

ನಿವೃತ್ತ ನೌಕರರ ಸಂಘದ ಭವನ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಕೆ

ಕುಂದಗೋಳ : ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ಭಾಗಶಃ ಒಂದು ಅರ್ಧ ಗುಂಟೆ ನಿವೇಶನವನ್ನು ಹಸ್ತಾಂತರ ಮಾಡುವ ಮೂಲಕ ನಿವೃತ್ತ ನೌಕರರ ಸಂಘದ ಭವನ ನಿರ್ಮಾಣ ಮಾಡಲು ಅನುಕೂಲ ಮಾಡಿ ಕೊಡುವಂತೆ ನಿವೃತ್ತ ಅಧಿಕಾರಿಗಳು ನೌಕರರ ಸಂಘದ ಅಧ್ಯಕ್ಷ ಮುತ್ತಪ್ಪ ಅಣ್ಣಿಗೇರಿ ಅವರಿಗೆ ಮನವಿ ಪತ್ರ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ತಾಲೂಕ ಘಟಕ ಕಾರ್ಯಾಧ್ಯಕ್ಷರಾದ ಶೇಖರಪ್ಪ ಬಿಸೆರೊಟ್ಟಿಯವರು ಮತ್ತು ಅಧ್ಯಕ್ಷರಾದ ನದಾಪ ಎನ್.ಎಫ್ ಅವರು ಮನವಿ ಅರ್ಪಿಸಿ ಅಹವಾಲು ವಿವರಿಸಿದರು.ಈ ವೇಳೆ ಮುತ್ತಣ್ಣ ಅಣ್ಣಿಗೇರಿ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕ ಘಟಕ ಕುಂದಗೋಳ ಇವರು ಮನವಿ ಪಡೆದು ಸಕಾರಾತ್ಮಕ ಸಂಘದ ಜೊತೆ ಚರ್ಚಿಸಿ ನಿವೇಶನ ಒದಗಿಸಲು ಚಿಂತನೆ ನಡೆಸಲಾಗುವುದು ಎಂದರು.

Share News

About Shaikh BigTv

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *