ಹುಬ್ಬಳ್ಳಿ : ಕರ್ನಾಟಕ ರತ್ನ ಪವರ್ ಸ್ಟಾರ್ ಡಾ// ಪುನೀತ್ ರಾಜಕುಮಾರ್ ಪುಣ್ಯ ಸ್ಮರಣೆಯ ಅಂಗವಾಗಿ ಇಲ್ಲಿಯ ನವನಗರದಲ್ಲಿರುವ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ರಕ್ತದಾನ ಶಿಬಿರವನ್ನು ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಡಾ. ಬಿ ಆರ್ ಪಾಟೀಲ್ ಅವರು ಪುನೀತ್ ರಾಜಕುಮಾರ್ ಕೇವಲ ಒಬ್ಬ ನಟರಲ್ಲ ಸಮಾಜ ಸೇವಕರು ಪುನೀತ್ ರಾಜಕುಮಾರ್ ಅವರು ಸಹ ಇಂದಿನ ಯುವ ಜನತೆಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಮುಖ್ಯ ಅತಿಥಿಗಳಾದ ಡಾ. ವಿನೋದ್ ಪಾಟೀಲ್ ಅವರು 123 ಸಲ ರಕ್ತದಾನ ಮಾಡಿದರು ಮತ್ತು ಪುನೀತ್ ರಾಜಕುಮಾರ್ ಅಭಿಮಾನಿಗಳು ಬಂದು ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಡಾ.ವಿಲಾಸ ಗುಂಡ, ಡಾ.ಮಹಾಂತೇಶ ವೀರಾಪುರ, ಶಿವಯೋಗಿ ಹಾವೇರಿ,ರಾಘವೇಂದ್ರ ಗಾಯಕವಾಡ, ಡಾ.ಉಮೇಶ ಹಳ್ಳಿಕೇರಿ ಮತ್ತು ರಕ್ತದಾನ ಶಿಬಿರದ ಆಯೋಜಕರು ಶಿವಕುಮಾರ್ ರಟ್ಟಿಹಳ್ಳಿ, ದಯಾನಂದ ಸಾಧನಿ, ಅಂಜುಮ್, ಶಿಲ್ಪಾ ಮಾನೆ, ಮಧು ಜುಮ್ನಾಳ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





