Breaking News

ಐದು ವರ್ಷ ಸಮರ್ಥ ಆಡಳಿತ ನಡೆಸಲಿರುವ ಕಾಂಗ್ರೆಸ್…..

ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾವಣೆ ಮಾಧ್ಯಮ ಸೃಷ್ಟಿ. ಇದೀಗ ಸಿದ್ದರಾಮಯ್ಯ ಸಿಎಂ ಇದ್ದಾರೆ. ಅವರೇ ಮುಖ್ಯಮಂತ್ರಿ. ಮುಂದಿನ ಐದು ವರ್ಷ ಸಮರ್ಥವಾಗಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲಿದೆ ಎಂದು ನವಲಗುಂದ ಮತಕ್ಷೇತ್ರದ ಶಾಸಕ ಎನ್.ಹೆಚ್.ಕೊನರೆಡ್ಡಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಕುದುರೆ ತರಹ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಇಲ್ಲದವರು ಯಾರೋ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಸರ್ಕಾರ ಬಿಳಿಸುವ ಬಗ್ಗೆ ಬಿಜೆಪಿಯವರ ಹಗಲು ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ತೀರ್ಮಾನ. ಆಪರೇಶನ್ ಬಿಜೆಪಿ‌ ಹುಟ್ಟು ಗುಣ. ಹೀಗಾಗಿ ಕೆಲವರು ಮಾತಾಡತ್ತಾರೆ. ಏನೂ ಇಲ್ಲದ ಮನೆಗೆ ಯಾರದರೂ ಹೋಗುವ ವಿಚಾರ ಮಾಡತ್ತಾರೆಯೇ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ‌ ಖಾಲಿ‌ಮನೆ ಎಂದರು.

ಐದು ಗ್ಯಾರಂಟಿಗಳ ಯೋಜನೆಯಿಂದ ನಮ್ಮ ಸರ್ಕಾರಕ್ಕೆ ಆರ್ಥಿಕ ತೊಂದರೆಯಾಗಿದೆ. ಶಾಸಕರಿಗೆ ಅನುದಾನದ ಕೊರತೆ ಆಗಿದೆ. ಇದರಿಂದ ಶಾಸಕರಿಗೆ ಅನುದಾನ ಕೊಡಲು ಆಗುತ್ತಿಲ್ಲ. ಈ ನಡುವೆಯೂ ಲೋಕೋಪಯೋಗಿ ಇಲಾಖೆಗೆ 25 ಕೋಟಿ ರೂಪಾಯಿ ಕೊಡಲು ಸಿದ್ದರಾಮಯ್ಯನವರು ತೀರ್ಮಾನ ತೆಗೆದುಕೊಂಡಿದ್ದಾರೆ. ಸಿದ್ದರಾಮನವರು ಮುಖ್ಯಮಂತ್ರಿ ಇದ್ದಾಗ ಯಾವತ್ತಿಗೂ ಅನುದಾನ ಕೊರತೆ ಆಗಿಲ್ಲ. ಸಮರ್ಥವಾಗಿ ಸಿದ್ದರಾಮಯ್ಯನವರ ಎಲ್ಲವನ್ನೂ ನಿಭಾಯಿಸುತ್ತಾರೆ ಎಂದರು.

ಮುಂದಿನನಾಲ್ಕೈದು ತಿಂಗಳಲ್ಲಿ ಎಲ್ಲವನ್ನೂ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಾವು ಮೊದಲು ಕೆಲಸ ಮಾಡಿ, ನಂತ್ರ ಮಾತನಾಡಿತ್ತೆವೆ ಎಂದು ಎನ್.ಹೆಚ್.ಕೊನರೆಡ್ಡಿ ತಿಳಿಸಿದರು.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *