ರಶ್ಮಿಕಾ ಮಂದಣ್ಣ ಭಾರತದಾದ್ಯಂತ ಫೇಮಸ್ ಆಗಿದ್ದಾರೆ. ನ್ಯಾಷನಲ್ ಕ್ರಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ತೆಲುಗು, ತಮಿಳು ಅಷ್ಟೇ ಅಲ್ಲದೆ ಹಿಂದಿ ಭಾಷೆಯಲ್ಲಿಯೂ ರಶ್ಮಿಕಾ ಮಂದಣ್ಣ ಸಿನಿಮಾ ಮಾಡುತ್ತಿರೋದು ಗೊತ್ತಿದೆ. ರಣ್‌ಬೀರ್ ಕಪೂರ್ ನಟಿಸಿರುವ ‘ಎನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ರಗಡ್ ಪಾತ್ರದಲ್ಲಿ ನಟಿಸಿದ್ದಾರೆ.ತೆರೆಮೇಲೆ ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಇಬ್ಬರ ಕೆಮಿಸ್ಟ್ರಿ ಬಗ್ಗೆ ಟೀಸರ್ ರಿಲೀಸ್ ಆದಲ್ಲಿಂದಲೂ ಚರ್ಚೆಯಾಗುತ್ತಲೇ ಇದೆ. ಅದರಲ್ಲೂ ಕಿಸ್ಸಿಂಗ್ ಸೀನ್ ನೋಡಿದ ಮೇಲೆ ರಶ್ಮಿಕಾರನ್ನು ಟ್ರೋಲ್ ಮಾಡಿದ್ದು ಇದೆ. ಅದ್ಯಾವುದಕ್ಕೂ ಉತ್ತರ ಕೊಡುವ ಗೋಜಿಗೆ ಹೋಗಿರಲಿಲ್ಲ. ಈಗ ಸಿನಿಮಾ ಪ್ರಚಾರಕ್ಕೆ ಅಂತ ಬೆಂಗಳೂರಿಗೆ ಬಂದಿರೋ ರಶ್ಮಿಕಾಗೆ ಕಿಸ್ಸಿಂಗ್ ಸೀನ್ ಬಗ್ಗೆ ಪ್ರಶ್ನೆ ಎದುರಾಗಿತ್ತು. ಸಿನಿಮಾದಲ್ಲಿ ಕಿಸ್ಸಿಂಗ್ ಅನ್ನು ಹೇಗೆ ಫ್ರೇಮ್ ಮಾಡುತ್ತೀರಾ ಅಂತ ಮಾಧ್ಯಮದವರು ಪ್ರಶ್ನೆ ಮಾಡಿದ್ದರು. ಅದಕ್ಕೆ ರಶ್ಮಿಕಾ ಮಂದಣ್ಣ ನಿರ್ದೇಶಕರ ಕಡೆ ಬೆರಳು ಮಾಡಿದ್ದಾರೆ. ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಯಾಕೆ ಬೇಕಿತ್ತು? ತಾನೇನು ಆ ಸೀನ್ ಮಾಡಲು ಒಪ್ಪಿಕೊಂಡೆ ಅನ್ನೋದನ್ನು ರಶ್ಮಿಕಾ ‘ಎನಿಮಲ್’ ಪ್ರೀ ರಿಲೀಸ್ ಪ್ರೆಸ್‌ಮೀಟ್‌ನಲ್ಲಿ ರಿವೀಲ್ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





