Breaking News

ಬಿಜೆಪಿ ಸರ್ಕಾರ ಸೈನಿಕರನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದೆ….

ಬೆಂಗಳೂರು: ಬಿಜೆಪಿಯವರು ಬ್ರಿಟಿಷರು ಇದ್ದಂತೆ. ಅವರು ಚುನಾವಣೆಗಾಗಿ ನಮ್ಮ ಸೈನಿಕರನ್ನು ಬಲಿಕೊಟ್ಟಿದ್ದಾರೆ ಎಂದು ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಎಚ್‌ಸಿ ಬಾಲಕೃಷ್ಣ ಆರೋಪಿಸಿದ್ದಾರೆ. ಮಾಗಡಿ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಸೈನಿಕರನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದೆ. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಚಿಸಿದ್ದು ಹೇಗೆ? ಲೋಕಸಭಾ ಚುನಾವಣೆಗೂ ಮುನ್ನ ಪುಲ್ವಾಮಾದಲ್ಲಿ ಸೈನಿಕರ ಬಲಿದಾನ ವಾಯಿತು ಎಂದು ವಾಗ್ದಾಳಿ ನಡೆಸಿದರು.

ಮೋದಿಯವರು ವಿಶ್ವ ಮಾನವ ಆಗುವ ಕನಸು ಕಾಣುತ್ತಿದ್ದಾರೆ. ಕಳೆದ ಬಾರಿ ಪುಲ್ವಾಮಾ ದಾಳಿ ನಡೆಯದೇ ಇದ್ದಿದ್ದರೆ ಜನರು ಅವರನ್ನು ಮನೆಗೆ ಕಳುಹಿಸುತ್ತಿದ್ದರು. ಪುಲ್ವಾಮಾ ದಾಳಿ ಏಕೆ ನಡೆಯಿತು? ಈ ದೇಶದಲ್ಲಿ ಅಮಾಯಕ ಸೈನಿಕರನ್ನು ಬಲಿ ಕೊಟ್ಟ ಕೀರ್ತಿ ಮೋದಿ ಸರಕಾರಕ್ಕೆ ಸಲ್ಲಬೇಕು. ಸೈನಿಕರು ಪ್ರಾಣ ತ್ಯಾಗ ಮಾಡಿ ಮೋದಿ ಅಧಿಕಾರಕ್ಕೆ ಬಂದರು. ನಮ್ಮ ಜನ ಇದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕರು ಹೇಳಿದರು.

Share News

About BigTv News

Check Also

ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್! ರಾಸಲೀಲೆ ಆರೋಪ ಸದ್ದು!

ಯಶು ಬೇಬಿ ಆಡಿಯೋ ಲೀಕ್! ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್.. ಯಶು ಬೇಬಿ ಆಡಿಯೋ ಲೀಕ್! ಖಾಕಿ ಮೇಲೆ ಕಪ್ಪು …

Leave a Reply

Your email address will not be published. Required fields are marked *