ಮೈಸೂರು: ರಾಜಧಾನಿ ಬೆಂಗಳೂರು ನಂತರ ಮೈಸೂರು ಅತಿ ವೇಗವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ರೈಲ್ವೇ ನಿಲ್ದಾಣಕ್ಕೆ ಮೂರನೇ ಪ್ರವೇಶ ದ್ವಾರ ನಿರ್ಮಿಸಲು ನೈರುತ್ಯ ರೈಲ್ವೆ ಮೈಸೂರು ವಿಭಾಗ ಮುಂದಾಗಿದೆ.ಇದರಿಂದ ಬನ್ನಿಮಂಟಪದಿಂದ ಬರುವ ಜನರಿಗೆ ಅನುಕೂಲವಾಗಲಿದೆ. ಸುಮಾರು 1.5 ಕಿ.ಮೀ ಉಳಿತಾಯವಾಗುತ್ತದೆ. ಅಲ್ಲದೆ, ಅಶೋಕಪುರಂ ರೈಲ್ವೆ ನಿಲ್ದಾಣ ಬೇರೆ ಆಗಿರುವುದರಿಂದ ಜೆ.ಪಿ.ನಗರ, ಶ್ರೀರಾಂಪುರ ಸೇರಿದಂತೆ ಇತರರು ಅಲ್ಲಿಂದಲೇ ಪ್ರಯಾಣಿಸುತ್ತಾರೆ. ಹೀಗಾಗಿ ಹೊಸ ಪ್ರವೇಶ ದ್ವಾರವೂ ಟ್ರಾಫಿಕ್ ತಡೆಗಟ್ಟಲು ಕೂಡ ಸಹಕಾರಿಯಾಗಲಿದೆ.ಎಲ್ಲಿ ದ್ವಾರ ನಿರ್ಮಾಣ? ಪ್ರಸ್ತುತ ವಾಣಿ ವಿಲಾಸ ನೀರು ಸರಬರಾಜು ಕಚೇರಿ ಬಳಿ ರೈಲ್ವೆ ಇಲಾಖೆಗೆ ಸೇರಿದ ಜಾಗವಿದೆ. ಅಲ್ಲಿಯೇ ಹೊಸ ಪ್ರವೇಶ ದ್ವಾರ ತಲೆ ಎತ್ತಲಿದೆ. ಇಲ್ಲಿಂದಲೇ ಎರಡನೇ ಪ್ರವೇಶ ದ್ವಾರಕ್ಕೂ ನೇರ ಎಂಟ್ರಿ ಕೊಡಬಹುದಾ ಎಂಬ ಚರ್ಚೆ ನಡೆಯುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





