Breaking News

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಲ್ಲಾದ್ ಜೋಶಿ……

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದರು.ರಾಮ ಭಕ್ತನ ಬಂಧನ ಸರ್ಕಾರದ ಕುಹಕ, ನೀಚತನ ವಾಗಿದೆ.ರಾಮ ಮಂದಿರ ನಿರ್ಮಾಣವಾದರೆ ನಿಮಗೇಕೆ ಹೊಟ್ಟೆಕಿಚ್ಚು ಎಂದು ತಿಳಿಯುತ್ತಿಲ್ಲ.ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಖಂಡರನ್ನು ಕೇಳ್ತೇನೆ ಕೋರ್ಟ್ ವಾರಂಟ್ ಅಂತಾ ಸುಳ್ಳು ಹೇಳ್ತಾರೆ.ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ ದೇಶದ್ರೋಹಿಗಳ ಬಿಡುಗಡೆಗೆ ಪತ್ರ ಬರೀತಾರೆ, ಕೆಜೆ ಹಳ್ಳಿ, ಡಿಜೆ ಹಳ್ಳಿ, ಪಿಎಫ್‌ಐ ಪ್ರಕರಣ ಹಿಂಪಡೆಯೋದು ಮಾಡ್ತಾರೆ,ಐಎಸ್‌ಐಎಸ್ ಸರ್ಕಾರ ಅಂತಾ ಸಿದ್ದರಾಮಯ್ಯ ತಿಳಿದುಕೊಂಡಿದ್ದಾರೆ.

ಮುಸಲ್ಮಾನರ ತುಷ್ಟೀಕರಣದ ಪರಾಕಾಷ್ಟೆ ಇದು ಆಗಿದೆ.ಸಿದ್ದರಾಮಯ್ಯ ಅನಗತ್ಯವಾಗಿ ದ್ವೇಷ, ಅಸೂಯೆ ಹುಟ್ಟು ಹಾಕುತ್ತಿದ್ದಾರೆ ಇದನ್ನೇ ಮುಂದುವರಿಸ್ತೀವಿ ಅನ್ನೋ ದಾರ್ಷ್ಟ್ಯ ತೋರಿಸ್ತಿದ್ದಾರೆ.ಸಿದ್ದರಾಮಯ್ಯನವರ ಹಿಂದೂ ದ್ವೇಷದ, ಮುಸ್ಲೀಮ್ ತುಷ್ಟೀಕರಣದ ಪರಾಕಾಷ್ಟೆ ಇದಾಗಿದೆ.ನಾವು ಹಿಂದೂ ಕಾರ್ಯಕರ್ತರ ಪರ ವಕೀಲರನ್ನು ಇಟ್ಟಿದ್ದೇವೆ.ಈ ಕೇಸ್ ನಮ್ಮ ಗಮನಕ್ಕೆ ಬಂದಿಲ್ಲ, ಬಂದಿದ್ರೆ ಹಿಂಪಡೀತಾ ಇದ್ವಿ, ರಾಮ ಮಂದಿರ ಉದ್ಘಾಟನೆ ಆಗುವಾಗ ಅರೆಸ್ಟ್ ಮಾಡುವ ಅಗತ್ಯ ಏನಿತ್ತು.? ಎಂದರು.

ಪೊಲೀಸ್ ಅಧಿಕಾರಿಗಳು ಸನ್‌ಫ್ಲವರ್ ಇದ್ದ ಹಾಗೆ ಸರ್ಕಾರ ಅನ್ನೋ ಸೂರ್ಯ ಎತ್ತ ಕಡೆ ತಿರಗ್ತಾನೆ, ಅತ್ತ ಕಡೆ ತಿರಗ್ತಾರೆ.ಎಮ್‌.ಬಿ. ಪಾಟೀಲ್ ಅವರ ಪಕ್ಷದ ಪರಿಸ್ಥಿತಿ ನೋಡಿಕೊಳ್ಳಲಿ ಕಾಂಗ್ರೆಸ್ ರಾಮನ ಬಗ್ಗೆ ಅವಹೇಳನ ಮಾಡದಿದ್ದರೆ ಈ ಸ್ಥಿತಿ ಬರ್ತಿರಲಿಲ್ಲ.ಕಾಂಗ್ರೆಸ್‌ನವರು ಹುಚ್ಚುಹುಚ್ಚು ತನ ಮಾಡಿ ಈಗ ಮಾತನಾಡ್ತಿದ್ದಾರೆ.ಇದು ಮಾತನಾಡುವ ಅಗತ್ಯ ಇತ್ತಾ.
ಸಿದ್ದರಾಮಯ್ಯ ರಾಮ ಭಕ್ತರಾಗಿದ್ದರೆ ಅಯೋಧ್ಯೆಗೆ ಹೋಗಲಿ.ಹಳೇ ಕೇಸ್ ಅಂದರೆ ರಾಮ ಮಂದಿರ ಹೋರಾಟದ ಕೇಸ್ ಹೊರಗೆ ಸಿಎಮ್ ಹೇಳಿದ್ದಾರೆ.ಇದು ಸರಿಯಲ್ಲ. ಹೀಗಾಗಿ ಇದರ ವಿರುದ್ಧ ನಾಳೆ ಬಿಜೆಪಿಯಿಂದ ಹೋರಾಟ ಮಾಡುತ್ತಿದ್ದೇವೆ ಎಂದು ಪ್ರಲ್ಲಾದ್ ಜೋಶಿ ಹೇಳಿದರು.

Share News

About BigTv News

Check Also

ಸಿವಿಲ್ ವ್ಯಾಜ್ಯದಲ್ಲಿ ಖಾಕಿ ದರ್ಬಾರ್‌ಗೆ ಹೈಕೋರ್ಟ್ ಬ್ರೇಕ್..! ಅಧಿಕಾರ ಮೀರಿದರೆ ಪೊಲೀಸರಿಗೇ ಶಿಸ್ತು ಕ್ರಮದ ಬಿಸಿ..!!

ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..! ಸಿವಿಲ್ …

Leave a Reply

Your email address will not be published. Required fields are marked *