ಅಮೆರಿಕ ತನ್ನ ಬುದ್ಧಿ ಬಿಡೋದಿಲ್ಲ ಅಂತಾ ಕಾಣುತ್ತೆ, ಯಾಕಂದ್ರೆ ಅವರಿವರ ನಡುವೆ ಈ ದೇಶ ತಂದಿಟ್ಟು ಆಟ ನೋಡುತ್ತೆ ಅನ್ನೋ ಆರೋಪ ಇದೆ. ಅದರಲ್ಲೂ ಅಮೆರಿಕ ವೆಪನ್ಸ್ ಮಾರಾಟಕ್ಕೆ ಹೀಗೆ ಯುದ್ಧಗಳನ್ನ ಬೆಂಬಲಿಸುತ್ತೆ ಅನ್ನೋ ಗಂಭೀರ ಆರೋಪ ಕೂಡ ಇದೆ. ಹೀಗಿದ್ದಾಗ ಇಸ್ರೇಲ್ ಹಾಗೂ ಹಮಾಸ್ ಯುದ್ಧದಲ್ಲಿ ಕೂಡ ಅಮೆರಿಕ ತನ್ನ ದ್ವಂದ್ವ ನೀತಿ ಮುಂದುವರಿಸಿದೆ.
ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ಬೆಂಕಿ ಹೊತ್ತಿಕೊಂಡು ಬರೋಬ್ಬರಿ 2 ತಿಂಗಳ ಸಮಯ ಕಳೆದು ಹೋಗಿದೆ. ಹೀಗಿದ್ದಾಗ ಹೇಗಾದರೂ ಮಾಡಿ ಈ ಯುದ್ಧಕ್ಕೆ ಬ್ರೇಕ್ ಹಾಕಿ, ಲಕ್ಷಾಂತರ ಜನರ ಜೀವವನ್ನ ಕಾಪಾಡಬೇಕು ಅನ್ನೋದು ವಿಶ್ವಸಂಸ್ಥೆಯ ಆಶಯವಾಗಿತ್ತು. ಆದರೆ ಆಗಿದ್ದೇ ಬೇರೆ, ಸುಮ್ಮನೆ ಇರದ ‘ದೊಡ್ಡಣ್ಣ’ ಎಂಬ ಬಿರುದು ಪಡೆದ ಅಮೆರಿಕದ ಸರ್ಕಾರ ಅಡ್ಡಗಾಲು ಹಾಕಿದೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಶಾಂತಿ ಪಾಠ ಮಾಡುತ್ತಿರುವ ದೊಡ್ಡಣ್ಣ ಅಮೆರಿಕದ ಈ ದ್ವಂದ್ವ ನೀತಿ ಬಗ್ಗೆ ಆಕ್ರೋಶ ಮೊಳಗಿದೆ. ಹಾಗಾದರೆ ಇದೀಗ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಆಗಿದ್ದು ಏನು?
bigtvnews | Hubli Dharwad News | Kannada News | Karnataka News Hubli News | News In Hubli | Local news





