ನವಲಗುಂದ: ಈ ಪಟ್ಟಣದ ಜನೆತೆ ಇದೀಗ ವರುಣ ಶಾಪವಾಗಿ ವ್ಯಕ್ತವಾಗಿದೆ. ವರುಣನ ಆಗಮನದಿಂದ ಖುಷಿಯಲ್ಲಿದ್ದ ಜನತೆಗೆ ಬೇಸರವುಂಟು ಮಾಡಿದೆ. ಇದೀಗ ಚೆನ್ನಾಗಿ ಬೆಳೆದ ಈರುಳ್ಳಿ ಸಂಪೂರ್ಣವಾಗಿ ನೀರುಪಾಲಾಗಿದೆ.
ತಾಲೂಕಿನ ಯಮನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಮಾರಗೊಪ್ಪ ಹದ್ದಿನಲ್ಲಿರುವ ರೈತನ ಹೊಲದ ಈರುಳ್ಳಿ ಬೆಳೆ ಹೊಲದಲ್ಲಿ ನೀರು ನಿಂತು ಅಪಾರ ಪ್ರಮಾಣದಲ್ಲಿ ಬೆಳೆಹಾನಿಗಿದೆ. ಬಿತ್ತಿದ ದುಬಾರಿ ಬೀಜ, ಬಿತ್ತನೆ ಖರ್ಚು, ಕಳೆ ತಗೆಸುವುದು, ಔಷಧಿ ಸಿಂಪಡಣೆ ಮಾಡುವುದು ಸೇರಿ ಎಕರೆಗೆ ಕನಿಷ್ಟ 25-30 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳೆ ಪ್ರತಿ ಕೆ.ಜಿ.ಗೆ 45 ರಿಂದ 55 ರೂ. ನಂತೆ ಮಾರಾಟ ಮಾಡಲಾಗುತ್ತಿದೆ ಆದರೆ ಬಿತ್ತಿದ ಈರುಳ್ಳಿ ಬೆಳೆ ನೀರು ನಿಂತು ಕೊಳೆ ರೋಗ ಬಂದು ಬೆಳೆ ಕೈಗೆ ಬಾರದ ಪರಸ್ಥಿತಿ ಬಂದೋಗಿದೆ ಎಂದು ರೈತರು ಅಳಲು ತೋಡಿಕೊಂಡರು. ಸಾಲ ಸೋಲ ಮಾಡಿ ಈರುಳ್ಳಿ ಬಿತ್ತಿದ ಬೆಳಗಾರರಿಗೆ ಮಳೆಯಿಂದ ನಷ್ಟ ಉಂಟಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

