Breaking News

ತುಕಾಲಿ ಸಂತೋಷ್ ಮೇಷ್ಟ್ರು ಆಗಿದ್ದಾರೆ..

ಬಿಗ್ ಬಾಸ್ ಕನ್ನಡ ಸೀಸನ್ 10 ಒಂದಲ್ಲ ಒಂದು ರೀತಿ ವೀಕ್ಷಕರನ್ನು ಸೆಳೆಯುತ್ತಿದೆ. ಮನೆಯ ಸದಸ್ಯರು ಕೂಡ ಬಿಗ್ ಬಾಸ್ ಕೊಡುವ ಟಾಸ್ಕ್‌ಗಳಲ್ಲಿ ಸಖತ್ ಆಕ್ಟಿವ್ ಆಗಿಯೇ ಭಾಗವಹಿಸುತ್ತಿದ್ದಾರೆ. ಬಿಗ್ ಬಾಸ್ ಶೋ ವೀಕ್ಷಕರಿಗೆ ಸಖತ್ ಎಂಟರ್‌ಟೈನ್ಮೆಂಟ್ ನೀಡುತ್ತಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯೊಳಗೆ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ಆರಂಭ ಮಾಡಲಾಗಿತ್ತು. ಈ ಟಾಸ್ಕ್‌ನಲ್ಲಿ ವಿದ್ಯಾರ್ಥಿಗಳು ಅವರೇ.. ಶಿಕ್ಷಕರು ಕೂಡ ಅವರೇ.. ಹೀಗಾಗಿ ಪ್ರತಿ ಬಾರಿ ಪಾಠ ಮಾಡುವುದಕ್ಕೆ ಬಂದಾಗಲೂ ತುಂಟತನದ ವಿದ್ಯಾರ್ಥಿಗಳು ಟೀಚರ್ ಅನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ.
ಶಾಲೆ ಆರಂಭ ಆದಲ್ಲಿಂದ ಜೋರಾಗೇನೋ ನಡೀತಿದೆ. ಈಗಾಗಲೇ ತನಿಷಾ, ಮೈಕಲ್, ಪ್ರತಾಪ್, ನಮ್ರತಾ ಬೋರ್ಡ್ ಮುಂದೆ ನಿಂತು ಪಾಠ ಮಾಡಿದ್ದಾರೆ. ಇಂದು (ಡಿಸೆಂಬರ್ 13) ಬೆಳಗ್ಗೆ ಜಿಯೋ ಸಿನಿಮಾ ರಿಲೀಸ್ ಮಾಡಿರುವ ಪ್ರೋಮೊದಲ್ಲಿ ತುಕಾಲಿ ಸಂತೋಷ್ ಮೇಷ್ಟ್ರು ಆಗಿದ್ದಾರೆ. ಆದರೆ, ಪಾಠ ಮಾಡೋಕೆ ಹೋಗಿ ಫುಲ್ ಸುಸ್ತಾಗಿದ್ದಾರೆ. ಈ ಮಜವಾದ ದೃಶ್ಯಗಳು ಪ್ರೋಮೊದಲ್ಲಿ ಸೆರೆಯಾಗಿದೆ.

Share News

About BigTv News

Check Also

ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್, ಫೋಟೋಶೂಟ್ ಪೋಸ್ಟ್‌ಗೆ ಬ್ರೇಕ್..? ಡಿಜಿಪಿಗೆ ಶಿಫಾರಸು ಪತ್ರ..

ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್ ಬೇಡ..! ಖಾಕಿಯ ಘನತೆ ಉಳಿಸಲು ಕಠಿಣ ನಿಯಮಕ್ಕೆ ಶಿಫಾರಸು… ಬೆಂಗಳೂರು: ಪೊಲೀಸ್ ಸಮವಸ್ತ್ರ ಧರಿಸಿ ರೀಲ್ಸ್, …

Leave a Reply

Your email address will not be published. Required fields are marked *