ಶಿವಮೊಗ್ಗ: ತನಿಖಾ ವರದಿಯಲ್ಲಿ ಹೆಸರು ಮಾಡಿರುವ ದಿಟ್ಟ ವರದಿಗಾರ್ತಿ ಎಂದು ಖ್ಯಾತಿ ಪಡೆದಿರುವ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಹಾಗೂ ತಂಡದ ಸದಸ್ಯರ ಮೇಲೆ ದೂರು ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 19-12-2023 ರಂದು ಮಾಳೂರು ಠಾಣಾ ASI ಕೃಷ್ಣಮೂರ್ತಿ ರವರಿಗೆ ಹೆದ್ದಾರಿ ಗಸ್ತು ಕರ್ತವ್ಯ ನಿರ್ವಹಿಸುವ ವೇಳೆ ರಶೀದಿಯನ್ನು ಬರೆಯುತ್ತಿರುವಾಗ ಮತ್ತು ವಾಹನಗಳನ್ನು ಚೆಕ್ ಮಾಡುತ್ತಿದ್ದಾಗ ವಿಜಯಟೈಮ್ಸ್ ಚಾನಲ್ ನ ವಿಜಯಲಕ್ಷ್ಮೀ ಶಿಬರೂರು ಮತ್ತು ಅವರ ಕಡೆಯ ನಾಲೈದು ಜನರು ಗುಂಪು ಕೂಡಿಕೊಂಡು ಬಂದು ಸರ್ಕಾರಿ ಇಲಾಖಾ ವಾಹನಕ್ಕೆ ಅಡ್ಡಲಾಗಿ ನಿಂತು ವಾಹನ ತಪಾಸಣೆ ಮಾಡದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಸರ್ಕಾರದಿಂದ ನೀಡಿದ ರಶೀದಿ ಪುಸ್ತಕವನ್ನು ಕಸಿದುಕೊಂಡು ಅದರ ವಿಡಿಯೋಗಳನ್ನು ತೆಗೆದುಕೊಂಡು ಎಎಸ್‌ಐ ರವರಿಗೆ ವಾಹನ ತಪಾಸಣೆ ಮಾಡಲು ಬಿಡದೇ ಅಪಘಾತಗಳನ್ನು ತಡೆಯುವ ತಮ್ಮ ಕರ್ತವ್ಯದಿಂದ ಹಿಮ್ಮೆಟ್ಟಿಸುವ ಸಲುವಾಗಿ ಸರ್ಕಾರಿ ಕೆಲಸ ನಿರ್ವಹಿಸದಂತೆ ಅಡ್ಡಿಪಡಿಸಿ, ಪೊಲೀಸರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಾ ಸಾರ್ವಜನಿಕರಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ವರ್ತಿಸಿದ ವಿಜಯ್ ಟೈಮ್ಸ್ ನ್ಯೂಸ್ ಚಾನಲ್ ನ ವಿಜಯಲಕ್ಷ್ಮೀ ಶಿಬರೂರು ಮತ್ತು ಅವರ ಜೊತೆಯಲ್ಲಿದ್ದ ಸಿಬ್ಬಂದಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರಿ ಅಧಿಕಾರಿಗಳು ಬ್ರಷ್ಟಾಚಾರ ನಡೆಸುವ ವೇಳೆಯೇ ವಿಜಯಲಕ್ಷ್ಮಿ ಶಿಬರೂರು ಅನೇಕ ಬಾರಿ ದಾಳಿ ನಡೆಸಿ ಅಧಿಕಾರಿಗಳ ಅಸಲಿಯತ್ತನ್ನು ಇವರು ಬಯಲು ಮಾಡಿದ್ದರು. ಬೆಂಗಳೂರಿನ ಟ್ರಾಫಿಕ್ ಪೊಲೀಸರ ಕಳ್ಳಾಟ,RTO ಅಧಿಕಾರಿಗಳ ಲಂಚದ ಕುರಿತು ಅನೇಕ ಸ್ಟೋರಿ ಕೂಡ ಮಾಡಿದ್ದರು. ಇಂತಹ ಪತ್ರಕರ್ತರ ಮೇಲೆ ದೂರು ದಾಖಲಿಸಿರುವುದನ್ನು ಪತ್ರಿಕಾ ರಂಗ ಖಂಡಿಸುತ್ತಿದ್ದು ಮುಂದೆ ಏನಾಗಲಿದೆ ಎಂದು ಕಾದುನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news




