Breaking News

ಕಾಂಗ್ರೆಸ್ ಸರ್ಕಾರ ಸರ್ವ ಜನಾಂಗದ ವಿರೋಧ ಕಟ್ಟಿಕೊಂಡು ಕರ್ನಾಟಕವನ್ನು ದಿವಾಳಿ ಮಾಡುತ್ತಿದೆ: ರಾಜ್ಯ ಬಿಜೆಪಿ.

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಸರ್ವ ಜನಾಂಗದ ವಿರೋಧ ಕಟ್ಟಿಕೊಂಡು ಕರ್ನಾಟಕವನ್ನು ದಿವಾಳಿ ಮಾಡುತ್ತಿದೆ. ಇದಕ್ಕೆ ಪರಿಹಾರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತದಾರರು ತಕ್ಕ ಪಾಠ ಶೀಘ್ರದಲ್ಲೇ ಕಲಿಸಿಕೊಡುತ್ತಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮೂಲಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಕರ್ನಾಟಕದಲ್ಲಿ ಶೈಕ್ಷಣಿಕ ಮೂಲಸೌಕರ್ಯ ಸಂಪೂರ್ಣ ಕುಸಿದಿದೆ. ಅದರಲ್ಲೂ ಪರಿಶಿಷ್ಟ ಜಾತಿ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಮಕ್ಕಳ ವಸತಿ ಶಾಲೆಗಳ ಸ್ಥಿತಿಯಂತೂ ದಯನೀಯವಾಗಿದೆ. ವಿಧಾನ ಮಂಡಲ ಸಮಿತಿಯೇ ಈ ವಿಚಾರ ಒಪ್ಪಿಕೊಂಡಿದ್ದರೂ ಕಾಂಗ್ರೆಸ್ ಸರ್ಕಾರ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಶಿಕ್ಷಣ ವ್ಯವಸ್ಥೆ ಇಂಥ ಶೋಚನೀಯ ಸ್ಥಿತಿಗೆ ಬರದಂತೆ ಖಾತರಿಪಡಿಸುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಸರ್ಕಾರ ತಿರಸ್ಕರಿಸಿದ್ದು ಯಾವ ಕಾರಣಕ್ಕೆ ಎಂಬುದು ಇದರಿಂದ ಸ್ಪಷ್ಟ ಎಂದು ಬಿಜೆಪಿ ತಿಳಿಸಿದೆ.

Share News

About BigTv News

Check Also

ಕಮಿಷನರ್ ಬಂದಿದ್ದು 2–3 ದಿನ..! ಇನ್ಸ್‌ಪೆಕ್ಟರ್ ಯಾರು, ಪಿಎಸ್ಐ ಯಾರು ಅನ್ನೋದೇ ಗೊತ್ತಿಲ್ಲ..!

ಹುಬ್ಬಳ್ಳಿ-ಧಾರವಾಡ: ನೂತನ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ಹುಬ್ಬಳ್ಳಿಗೆ ಬಂದು ಇನ್ನೂ ಎರಡರಿಂದ ಮೂರು ದಿನಗಳಷ್ಟೇ ಆಗಿದೆ… ಹೊಸ …

Leave a Reply

Your email address will not be published. Required fields are marked *