ತಾನು ಅಂದು ಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು ಎನ್ನುವ ಸ್ಥಿತಿ ಬಿಸಿಸಿಐನದ್ದು ಆಗಿದೆ. ಬಿಸಿಸಿಐ ಯುವ ತಂಡದೊಂದಿಗೆ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುವ ಪ್ಲ್ಯಾನ್ ಹಾಕಿಕೊಂಡಿದ್ದರೆ, ಈಗ ಟೀಮ್ ಇಂಡಿಯಾದ ಹಿರಿಯ ಆಟಗಾರರಿಬ್ಬರು ತಾವು ಸಹ ಟಿ20 ವಿಶ್ವಕಪ್ ಆಡುವುದಾಗಿ ಇಂಗಿತ ವ್ಯಕ್ತ ಪಡಿಸಿದ್ದಾರೆ. ಈ ಹಿರಿಯ ಆಟಗಾರರು ಆಡುತ್ತಾರೆ ಎಂದಿದ್ದೇ ಬಿಸಿಸಿಐ ಚಿಂತೆಯನ್ನು ದುಪ್ಪಟ್ಟು ಮಾಡಿದೆ. ಟೀಮ್ ಇಂಡಿಯಾದ ಈ ಆಟಗಾರರು ಚುಟುಕು ಫಾರ್ಮೆಟ್‌ನಿಂದ ದೂರ ಸರೆಯುತ್ತಾರೆ. ಹೀಗಾಗಿ ನಾವು ಯುವ ತಂಡವನ್ನು ಕಟ್ಟಬಹುದು ಎಂಬ ಆಸೆಯನ್ನು ಬಿಸಿಸಿಐ ಹೊಂದಿತ್ತು. ಆದರೆ ಅದರ ಆಸೆ ಕಮರಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸಹ ಮತ್ತೊಮ್ಮೆ ಟಿ20 ವಿಶ್ವಕಪ್ ಆಡುವ ಆಸೆಯನ್ನು ಇಂಗಿತ ಪಡಿಸಿದ್ದಾರೆ.ಅಸಲಿಗೆ ಈ ಹಿರಿಯ ಆಟಗಾರರು ಆಡುತ್ತಾರೆ ಎಂದರೆ ಅವರನ್ನು ಆಡಬೇಡಿ ಎನ್ನುವುದು ಬಿಸಿಸಿಐಗೆ ಒಪ್ಪುತ್ತಿಲ್ಲ. ಏಕೆಂದರೆ ಇವರಿಬ್ಬರು ಈಗಿನ ಕಾಲದ ಸೂಪರ್ ಸ್ಟಾರ್ ಆಟಗಾರರು.
bigtvnews | Hubli Dharwad News | Kannada News | Karnataka News Hubli News | News In Hubli | Local news





