ನವದೆಹಲಿ : ಭಾರತ ಪ್ರತಿಷ್ಠಿತ ಸಿನಿಮಾ ರಂಗದ ರಾಷ್ಟ್ರ ಪ್ರಶಸ್ತಿಯನ್ನು ಕನ್ನಡದ ‘ಕಾಂತಾರ’ ಚಲನಚಿತ್ರವು ಪ್ರಶಸ್ತಿ ಬಾಚಿಕೊಂಡಿದೆ. ಡಿವೈನ್ ಸ್ಟಾರ್, ನಿರ್ದೇಶಕ ರಿಷಭ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಒಲಿದಿದ್ದಿದ್ದು, ಸ್ಯಾಂಡಲ್ವುಡ್ನಲ್ಲಿ ಸಂಭ್ರಮ ಮನೆ ಮಾಡಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2024 ವಿಜೇತ ಪಟ್ಟಿಯನ್ನು ಪ್ರಕಟಿಸಿದೆ.ಈ ಹಿಂದೆ ನಾತಿಚರಾಮಿ ಚಿತ್ರಕ್ಕೆ ಪ್ರಶಸ್ತಿ ಬಂದಿತ್ತು. ಇದು ಬಿಟ್ರೆ, ಮತ್ತೆ ಕನ್ನಡಕ್ಕೆ ಪ್ರಶಸ್ತಿಗಳೇ ಬಂದಿರಲಿಲ್ಲ.ಇನ್ನು ಪೈಪೋಟಿಯಲ್ಲಿ ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ಅವರ ʻನನ್ಪಕಲ್ ನೆರತು ಮಯಕ್ಕಮ ‘ ಮತ್ತು ‘ರೋರ್ಸ್ಚಾಚ್’ ಚಿತ್ರಗಳಿಗೆ ಅವರ ಹೆಸರನ್ನು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಆಯ್ಕೆ ಮಾಡಲಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

