ನಾವು ನಡೆದಿದ್ದೆ ದಾರಿ ಆಡಿದ್ದೆ ಆಟ ಅಂದವರು ಅಂದರ್ ಆದ್ರು..!!!
ನಮ್ಮಿಂದ ನಶೆ ಜಗತ್ತು ಅಂತ ಮೆರೆಯುತ್ತಿದ್ದವರು ಊರ ಬಿಟ್ಟ ಬಿಡಿ….
ಇದು ಶಶಿಕುಮಾರ್ ಅಡ್ಡಾ… ಇಲ್ಲಿ ಶಾಂತಿ ಕದಡುವ ಕೆಲಸ ಮಾಡುವವರಿಗೆ ಜಾಗವಿಲ್ಲ.
ನಮ್ಮ ಪಾಲಿಗೆ ಕಲ್ಲು ಬಿತ್ತು ಅಂತ ಒಳಗೊಳಗೆ ಕೊರಗುತ್ತಿರು ತಲೆಹಿಡುಕರು
ಅವಳಿ ನಗರದ ಸಾಲು ಸಾಲು ಡ್ರಗ್ಸ್ ಪೆಡ್ಲರ್ ಗಳು ಅಂದರ್ ಆಗಿದ್ದು ದಾಖಲೆ
ನೆಮ್ಮದಿ ಉಸಿರು ಅಂದ್ರೆ ಇದು ಅಂತ ತೋರಿಸಿಕೊಟ್ಟ ಸುಪರ್ ಕಾಪ್ ನಡೆ.!!!!
ಅವಳಿನಗರದಲ್ಲಿ ಛೋರ ಬಜಾರ ನಡೆಸಲು ಕುಮ್ಮಕ್ಕು ನೀಡಿದವರಿಗೆ ಇದು ನುಂಗಲಾರದ ತುತ್ತು…
ನಾನು ನಾನೆ ನಂದೆ ಹವಾ ನಾನು ಮಾಡಿದ್ದೆ ಆಟ ಅಂತ ಮೆರೆಯುವವರ ಪಾಳೆ ಇಂದು ತಪ್ಪಿದರೆ ನಾಳೆ ಬರುವದು ಗ್ಯಾರಂಟಿ ….. ಹಿಂಗ ಯಾಕ ಅಂತೀರಾ ಅವಳಿ ನಗರದ ಪೊಲೀಸರ ಫುಲ್ ಅಲರ್ಟ್ ಅಗಿದ್ದು ಹಿಂದೆ ಆಡಿದ್ದ ಆಟ ಇಂದು ಮುಂದು ವರೆಸಿದರೆ ಕಂಬಿ ಹಿಂದೆ ಮುದ್ದೆ ಮುರಿಯುವದು ಗ್ಯಾರಂಟಿ… ಇದು ಮೊದಲೇ

ಗ್ಯಾರಂಟಿ ಸರ್ಕಾರ ಅದರಲ್ಲೂ ಹುಬ್ಬಳ್ಳಿಯ ಸುಪರ್ ಕಾಪ್ ಶಶಿಕುಮಾರ್ ಅಡ್ಡಾದಲ್ಲಿ ಏನ ಮಾಡಿದ್ರು ನಡೆಯುತ್ತೆ ಅಂದರೆ ಅದು ನಿಮ್ಮ ತಪ್ಪು…ಇದಕ್ಕೆ ನಿದರ್ಶನ ಈ ಸುದ್ದಿ ನೋಡಿ….. ಹಳೇ ಹುಬ್ಬಳ್ಳಿಯ ತಿಮ್ಮಸಾಗರ ರಸ್ತೆಯ ಪಾಳು ಬಿದ್ದ ಕಟ್ಟಡವೊಂದರಲ್ಲಿ ಅಫೀಮ್ ಮಾರಾಟ ಮಾಡುತ್ತಿದ್ದ ಆರೋಪಿಗಳ ಮೇಲೆ

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ PI ಸುರೇಶ ಯಳ್ಳೂರ ನೇತೃತ್ವದ ತಂಡವು ದಾಳಿ ಮಾಡಿ ರಾಜಸ್ಥಾನ ಮೂಲದ ವಿಕಾಸ್ ಬಿಷ್ಣೊಯ್, ಜೈಸಾರಾಮ್ ಚೌದರಿ, ರಾಮರಾಮ ಬಿಷ್ಣೊಯ್ ಎಂಬ 03 ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿತರಿಂದ 23,500/-ರೂ ಮೌಲ್ಯದ 46 ಗ್ರಾಂ ಅಫೀಮು, ಒಂದು ದ್ವಿಚಕ್ರ ವಾಹನ, ಮೂರು ಮೊಬೈಲ್ ಗಳು, ಸೇರಿದಂತೆ ಒಟ್ಟು 1,29,500/- ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿರುತ್ತಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

