Breaking News

admin

ಕಾಂಗ್ರೆಸ್ ಇಷ್ಟು ವರ್ಷ ಕತ್ತೆ ಕಾಯ್ತಾ ಇತ್ತಾ? ಪ್ರಹ್ಲಾದ ಜೋಶಿ ಹೇಳಿಕೆಗೆ ತಿರುಗೇಟು

ಕಾಂಗ್ರೆಸ್ ಇಷ್ಟು ವರ್ಷ ಕತ್ತೆ ಕಾಯ್ತಾ ಇತ್ತಾ? ಎಂದು ಹೇಳಿದ್ದು, ಪ್ರಹ್ಲಾದ ಜೋಶಿ ಅವರು ನಮ್ಮ ಪಕ್ಷದ ಪ್ರಣಾಳಿಕೆ ಬಗ್ಗೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಅವರ ಅಹಂಕಾರ ಮಿತಿಮೀರಿದೆ. ಈ ಅಹಂಕಾರಕ್ಕೆ ಜನ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ. ಜೋಶಿ ಅವರಿಗೆ ಅಧಿಕಾರದಿಂದ ನೆಲ ಕಾಣುತ್ತಿಲ್ಲ. ಅವರು ಮೊದಲು ನೆಲ ನೋಡಿ ಮಾತನಾಡಲಿ, ಯಾವ ಅಧಿಕಾರವೂ ಇಲ್ಲಿ ಶಾಶ್ವತವಲ್ಲ. ಎಂತೆಂತವರದ್ದೋ ಅಹಂಕಾರ ಇಲ್ಲಿ ಮುಗಿದು ಹೋಗಿದೆ. ಜೋಶಿ ಅವರ ರಾಜಕೀಯ ಇತಿಶ್ರೀ …

Read More »

ನಾನೇ ಸ್ವಯಂ ‌ಪ್ರೇರಿತವಾಗಿ ನಿವೃತ್ತಿಯಾಗುತ್ತಿದ್ದೇನೆ

ಬೆಂಗಳೂರಿನಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪಾ ಅವರು, ಫೆಬ್ರವರಿ 27ರಂದು ಶಿವಮೊಗ್ಗಕ್ಕೆ ಮೋದಿಯವರು ಬರುತ್ತಿದ್ದಾರೆ.ನನ್ನ ಬಹಳ ವರ್ಷದ ಕನಸು ನನಸಾಗಿದೆ. ಅಭಿವೃದ್ಧಿಗೆ ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಿದ್ದೇನೆಂಬ ತೃಪ್ತಿ ಇದೆ. 27 ನೇ ತಾರೀಖು‌ ನನಗೆ 80 ವರ್ಷ ಆಗುತ್ತಿದೆ. ಹೀಗಾಗಿ ನಾನೇ ಸ್ವಯಂ ‌ಪ್ರೇರಿತವಾಗಿ ನಿವೃತ್ತಿಯಾಗುತ್ತಿದ್ದೇನೆ. ಹೀಗಾಗಿ ವೀರಶೈವ ಬಂಧುಗಳು ಅಪಾರ್ಥ ಮಾಡಿಕೊಳ್ಳಬಾರದು. ಈ ಮೊದಲಿದ್ದಂತೆ ಸಮುದಾಯದ ಜನ ಬಿಜೆಪಿಗೆ ಬೆಂಬಲಿಸಬೇಕು. ವೀರಶೈವ ‌ಲಿಂಗಾಯತ ಬಂಧುಗಳಲ್ಲಿ ಕೈ ಜೋಡಿಸಿ ಮನವಿ ಮಾಡುತ್ತಿದ್ದೇನೆ ನನಗೆ …

Read More »

ಪ್ರಧಾನಿ ಮೋದಿಯವರಿಂದಾ ಮಾರ್ಚ್ 11 ರಂದು ಧಾರವಾಡ ಐಐಟಿ ನೂತನ ಕಟ್ಟಡ ಉದ್ಘಾಟನೆ

ಧಾರವಾಡ : ಇಂದು ಮುಮ್ಮಿಗಟ್ಟಿಯ ಐಐಟಿಯ ನೂತನ ಕಟ್ಟಡದ ನಿರ್ಮಾಣ ಹಂತದ ಕಾಮಗಾರಿಯನ್ನು ವೀಕ್ಷಿಸಿ, ಪರಿಶೀಲಿಸಿದ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡುತ್ತಾ, ಶೀಘ್ರವೇ ಉಳಿದೆಲ್ಲ ಕೆಲಸವನ್ನು ಬೇಗನೆ ಮುಕ್ತಾಯಗೊಳಿಸುವಂತೆ ಐಐಟಿಯ ಕಟ್ಟಡ ನಿರ್ಮಾಣದ ಕಂಪನಿಯ ಸಿಇಓಗೆ ತಿಳಿಸಲಾಗಿದೆ ಎಂದರು. ಮಾ.11 ರಂದು ಮಧ್ಯಾಹ್ನ 3 ಗಂಟೆಗೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಐಐಟಿ ಕಟ್ಟಡ ಹಾಗೂ ರಾಜ್ಯದ ಹಾಗೂ ಕೇಂದ್ರದ ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಗೊಳಿಸುವರು. ಹಾಗೂ …

Read More »

ಫೆ.27 ರಿಂದ ಮಾ.5 ರವರೆಗೆ ಟಿಬೇಟ್ ಫೆಸ್ಟಿವಲ್

ಹುಬ್ಬಳ್ಳಿ: ಟಿಬೇಟಿಯನ್ ಚೇಂಬರ್ ಆಫ್ ಕಾಮರ್ಸ್ ಆಶ್ರಯದಲ್ಲಿ ಟಿಬೇಟ್ ಫೆಸ್ಟಿವಲ್ ಟಿಬೆಟ್ ಹಬ್ಬವನ್ನು ಫೆ.27 ರಿಂದ ಮಾ.5 ರವರೆಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಬಳಿಯ ಡುಗುಲಿಂಗ್ ಟಿಬೇಟಿಯನ್ ಪುನರ್ವಸತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟಿಬೇಟಿಯನ್ ಚೇಂಬರ್ ಆಫ್ ಕಾಮರ್ಸ್’ನ ಸಿ.ಇ.ಓ ಸೆರಿನ್ ಪೋಪಿಯಾಲ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಬೇಟಿಯನ್ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದು ಟಿಬೇಟ್ ಹಬ್ಬ ಕ್ಯಾಂಪ್ ನಂ.3 …

Read More »

ಜಿಲ್ಲಾ ಮಟ್ಟದ ‘ಸರ್ವರಿಗೂ ಉದ್ಯೋಗʼ ಮೇಳ

ಹುಬ್ಬಳ್ಳಿ: ‘ಸರ್ವರಿಗೂ ಉದ್ಯೋಗ’ ಎಂಬ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ನಗರದ ವಿದ್ಯಾನಗರದ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್ ನ ಬಿ.ವಿ.ಬಿ ಕ್ಯಾಂಪಸ್ ನಲ್ಲಿ ಫೆ. ೨೮ ರಂದು ಬೆ. ೯ ಗಂಟೆಗೆ ಆಯೋಜಿಸಲಾಗಿದೆ ಎಂದು ಧಾರವಾಡ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ. ಚಂದ್ರಪ್ಪ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯ ಮಿಶನ್ ಧಾರವಾಡ, ಕಾಲೇಜು …

Read More »

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಚ್‌ ಡಿಕುಮಾರಸ್ವಾಮಿ ವಾಗ್ದಾಳಿ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಜ್ಯದ ಜನರು ಭೂಮಿ ನೀಡಿದ್ದಾರೆ. ಇನ್ನೂ ಕೆಲವರಿಗೆ ಹಣ ಬಂದಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೋದಿ ಕೊಡುಗೆ ಏನು? ಎಂದು ಪ್ರಶ್ನಿಸಿದರು, ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಮೋದಿ ಕೊಡುಗೆ ಶೂನ್ಯ ಎಂದು ಹೇಳಿದ, ಎಚ್‌ ಡಿಕುಮಾರಸ್ವಾಮಿ ಬಿಜೆಪಿ ವಿರುದ್ಧ ಕೀಡಿ ಕಾರಿದರು. ಮಾರ್ಚ್​​ 11ರಂದು ಮತ್ತೇ ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಗೆ ಮೋದಿ ಬರಲಿದ್ದಾರೆ. ತಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಬಿಂಬಿಸಲು ಅವರು ಬರುತ್ತಿದ್ದಾರೆ ಎಂದು ಶೃಂಗೇರಿಯಲ್ಲಿ  ಪತ್ರಿಕಾಗೋಷ್ಠಿಯಲ್ಲಿ …

Read More »

ಅಪ್ರಾಪ್ತೆ ಮೇಲೆ ಅತ್ಯಾಚಾರದ ಕೃತ್ಯ

ಹುಬ್ಬಳ್ಳಿ ಮೂಲದ ವಿವೇಕ್ ಎಂಬಾತನು ಫೋನ್ ಮೂಲಕ ಪರಿಚಯವಾದ್ದು,16 ವಯಸ್ಸಿನ ಹುಡಗಿ ಜೊತೆ ಎರಡು ವರ್ಷದಿಂದ ಸಂಬಂಧ ಇಟ್ಟುಕೊಂಡಿದ್ದ, ಹಲವಾರು ಬಾರಿ ಮಂಗಳೂರಿಗೆ ಹೋಗಿ ಹುಡುಗಿಯನ್ನು ಬೇಟಿಯಾಗುತ್ತಿದ್ದ. ದಿನಾಂಕ 16-01-23 ರಂದು ಆರೋಪಿ ವಿವೇಕ್ ಅಪ್ರಾಪ್ತೆಯನ್ನು ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಅಪ್ರಾಪ್ತೆ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಅಪ್ರಾಪ್ತೆ ಐದು ವಾರದ ಗರ್ಭಿಣಿ ಆಗಿದ್ದಾಳೆ. ಆಪ್ರಾತ್ತೆ ಬಾಲಕಿಯ ಪಾಂಡ್ಡೆಶ್ವರ್ ಮಹಿಳಾ ಪೋಲಿಸ್ ಠಾಣೆ ಮಂಗಳೂರಿನಲ್ಲಿ ಪ್ರಕರಣ ದಾಖಲಿಸಿದ್ದಾಳೆ. …

Read More »

ಟ್ಯಾಂಕ‌ರ್ ಡಿಕ್ಕಿ, ಸ್ಥಳದಲ್ಲಿ ಸಾವು

ಕಲಘಟಗಿ ಪಟ್ಟಣದ ಪಶು ಸಂಗೋಪನಾ ಇಲಾಖೆಯಲ್ಲಿ ಪಶು ವೈದ್ಯಕೀಯ ವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಚಾಂದಸಾಬ್ ಕಿರೇಸೂರ ರಾಷ್ಟ್ರೀಯ ಹೆದ್ದಾರಿ 63 ರ ಶಿಂಗನಳ್ಳಿ ಕ್ರಾಸ್ ಬಳಿ ಕರ್ತವ್ಯದ ಮೇಲೆ ತಂಬೂರ ಗ್ರಾಮಕ್ಕೆ ಹೋಗುತ್ತಿರುವಾಗ ಟ್ಯಾಂಕ‌ರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ತಾಲೂಕಾ ದೇವೇಂದ್ರಪ ಪಶುವೈದ್ಯಾಧಿಕಾರಿ ಲಮಾಣಿ, ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕ ಪರಾರಿಯಾಗಿದ್ದು,ಅವರ ಬಂಧನಕ್ಕೆ ಜಾಲ ಬಿಸಿದ್ದಾರೆ.

Read More »

ಒಂದೇ ಕುಟುಂಬದ ಮೂರವರು ನೇಣಿಗೆ ಶರಣು

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ವಾಸವಾಗಿದ್ದ ಒಂದು ಕುಟುಂಬ ಜೀವನಕ್ಕಾಗಿ ಸಾಲಮಾಡಿ ಸಾಲಗಾರ ಕಾಟ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ತಂದೆ – ತಾಯಿಯ ಮಹದಾಶೆ ಅಂದ್ರೆ ಅದು ಮಕ್ಕಳ ಭವಿಷ್ಯ ರೂಪಿಸುವದಾಗಿರುತ್ತದೆ‌‌. ಮಕ್ಕಳ ಜೀವನಕ್ಕಾಗಿ ಪಾಲಕರು ಇಡೀ ತಮ್ಮ ಜೀವನವನ್ನೆ ಮೂಡಿಪಾಗಿಡುತ್ತಾರೆ. ಹೀಗೆ ಮಕ್ಕಳ ಜೀವನಕ್ಕಾಗಿ ಸಾಲಮಾಡಿದ್ದ, ತೊಂಡೂರು ಗ್ರಾಮದ ಹನುಮಂತಗೌಡ ಪಾಟೀಲ್ ಎಂಬ ಒಂದೇ ಕುಟುಂಬಸ್ಥದ ಮೂವರು ಮೃತಪಟ್ಟಿದ್ದಾರೆ. ಮನೆ ನಿರ್ಮಾಣಕ್ಕಾಗಿ ,ಮಗಳ ವಿದ್ಯಾಭ್ಯಾಸಕ್ಕಾಗಿ …

Read More »

ನಗರಸಭೆ ಬಜೆಟ್ ಮಂಡನೆ ಪ್ರಾರಂಭ

ಬಜೆಟ್ ಆರಂಭಕ್ಕೂ ಮುನ್ನ ಸದನದ ಭಾವಿಗಿಳಿದ ವಿರೋಧ ಪಕ್ಷದ ಸದಸ್ಯರು. ನಗರಸಭೆ ಅಧ್ಯಕ್ಷರ ವಿರುದ್ದ ದಿಕ್ಕಾರ ಕೂಗುತ್ತಿರುವ ವಿರೋದ ಪಕ್ಷದ ಸದಸ್ಯರ ,ಗದ್ದಲದ ನಡುವೆಯೂ ಬಜೆಟ್ ಪ್ರತಿ ಓದುತ್ತಿರುವ ನಗರಸಭಾಧ್ಯಕ್ಷೆ. ಬೆಂಚ್ ಕುಟ್ಟುವುದರ ಮೂಲಕ ಅಧ್ಯಕ್ಷರಿಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಆಡಳಿತ ಪಕ್ಷದ ಸದಸ್ಯರು.

Read More »