Breaking News

admin

ಉಕ್ರೇನ್‌ ಅಧ್ಯಕ್ಷ ಹತ್ಯೆ ಮಾಡಲು ಬಂದ ಹಂತಕರು ನಾಶ

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವರನ್ನು ಕೊಲ್ಲಲು ಆಗಮಿಸಿದ್ದ ಚೆಚೆನ್ಯಾ ಮೂಲದ ಹಂತಕರ ಗುಂಪೊಂದನ್ನು ಸಂಪೂರ್ಣವಾಗಿ ನಾಶ ಮಾಡಿರುವುದಾಗಿ ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಹಾಗೂ ರಕ್ಷಣ ಕೌನ್ಸಿಲ್‌ನ ಮುಖ್ಯಸ್ಥರಾದ ಒಲೆಕ್ಸಿಯ್‌ ಡ್ಯನಿಲೊವ್‌ ತಿಳಿಸಿದ್ದಾರೆ. ರಷ್ಯಾ ಗುಪ್ತಚರ ಇಲಾಖೆಯಲ್ಲಿರುವ, ಯುದ್ಧ ಮಾಡುವ ಮನಸ್ಸಿಲ್ಲದ ಅಧಿಕಾರಿಗಳು ಉಕ್ರೇನ್‌ನ ಅಧಿಕಾರಿಗಳಿಗೆ ಚೆಚೆನ್ಯಾದಿಂದ ಬಂದಿದ್ದ ಈ ಹಂತಕರ ಗುಂಪಿನ ಬಗ್ಗೆ ಮಾಹಿತಿ ನೀಡಿದ್ದರು. ಅವರು ನೀಡಿದ ಮಾಹಿತಿಯನ್ನಾಧರಿಸಿ ಹಂತಕರ ಗುಂಪನ್ನು ನಾಶಗೈದಿರುವುದಾಗಿ ಒಲೆಕ್ಸಿಯ್‌ ತಿಳಿಸಿದ್ದಾರೆ.

Read More »

ಇಂದು ಮೇಕೆದಾಟು ಪಾದಯಾತ್ರೆ ಸಮಾರೋಪ ಸಮಾರಂಭ

ಬೆಂಗಳೂರು: ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಕೈಗೊಂಡಿರುವ ಪಾದಯಾತ್ರೆ ಸಮಾರೋಪ ಸಮಾರಂಭ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಅರಮನೆ ಮೈದಾನದಿಂದ ಪಾದಯಾತ್ರೆ ಆರಂಭವಾಗಲಿದ್ದು, ಕಾವೇರಿ ಚಿತ್ರಮಂದಿರ, ಸ್ಯಾಂಕಿ ಟ್ಯಾಂಕ್, ಮಲ್ಲೇಶ್ವರಂ 18ನೇ ಕ್ರಾಸ್, ಮಾರ್ಗೋಸಾ ರಸ್ತೆ, ಕೆಸಿ ಜನರಲ್ ಆಸ್ಪತ್ರೆ, ಶೇಷಾದ್ರಿಪುರಂ ಲಿಂಕ್ ರಸ್ತೆ, ರಾಜೀವ್ ಗಾಂಧಿ ಪ್ರತಿಮೆ, ಕಾಟನ್ ಪೇಟೆ ಮುಖ್ಯರಸ್ತೆ, ಬ್ರಿಯಾಂಡ್ ಸರ್ಕಲ್, ಈದ್ಗಾ ಮೈದಾನ ಮಾರ್ಗವಾಗಿ ನ್ಯಾಷನಲ್ ಕಾಲೇಜು ಮೈದಾನಕ್ಕೆ …

Read More »

ಹರ್ಷ ಕುಟುಂಬಕ್ಕೆ ನೆರವಿನ ಮಹಾಪೂರ

ಶಿವಮೊಗ್ಗ : ಕೋಮುದ್ವೇಷಕ್ಕೆ ಬಲಿಯಾದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ನೆರವಿನ ಮಹಾಪೂರ ಹರಿದು ಬಂದಿದ್ದು, ಈವರೆಗೆ 2 ಕೋಟಿ ರೂಪಾಯಿಗಳಿಗೂ ಅಧಿಕ ನೆರವು ನೀಡಲಾಗಿದೆ ಎಂದು ತಿಳಿದುಬಂದಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ 10 ಲಕ್ಷ ರೂಪಾಯಿ ನೀಡಿರುವುದು ಸೇರಿದಂತೆ ಹರ್ಷ ಅವರ ಮನೆಗೆ ಭೇಟಿ ನೀಡಿದ್ದ ರಾಜಕಾರಣಿಗಳು, ಮಠಾಧೀಶರು ಹಣದ ನೆರವು ನೀಡಿದ್ದಾರೆ. ಅಲ್ಲದೆ ಹರ್ಷ ತಾಯಿ ಪದ್ಮಾ ಅವರ ಖಾತೆಯ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ …

Read More »

ಉಕ್ರೇನ್‌ನಲ್ಲಿ ಸಿಲುಕಿರು 200 ವಿದ್ಯಾರ್ಥಿಗಳು ರೊಮೇನಿಯಾದಿಂದ ದೆಹಲಿಗೆ ಆಗಮನ

ನವದೆಹಲಿ: ಉಕ್ರೇನ್‌ನಲ್ಲಿ ಸಿಲುಕಿರುವ ಸುಮಾರು 200 ಭಾರತೀಯರನ್ನು ಹೊತ್ತ ವಿಶೇಷ ವಿಮಾನವು ಇಂದು ರೊಮೇನಿಯಾದಿಂದ ದೆಹಲಿ ತಲುಪಿದೆ. ʻಆಪರೇಷನ್ ಗಂಗಾ ಅಡಿಯಲ್ಲಿ ಇಂಡಿಗೋ ವಿಶೇಷ ವಿಮಾನವು ಬುಧವಾರ (ಸ್ಥಳೀಯ ಕಾಲಮಾನ) ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಹೊರಟಿದೆ. ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ನಾಗರಿಕರನ್ನು ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಬರಮಾಡಿಕೊಂಡರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ‘ನಾವು ಕಷ್ಟಗಳ ನಡುವೆಯೂ ನಮ್ಮ ನಾಗರಿಕರನ್ನು ಮರಳಿ ಕರೆತರುತ್ತಿದ್ದೇವೆ. ಸಂಕಷ್ಟದಲ್ಲಿರುವ …

Read More »

ತೃತೀಯ ಲಿಂಗಿಗಳಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ

ಬೆಂಗಳೂರು : ತೃತೀಯ ಲಿಂಗಿಗಳಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಸರ್ಕಾರಿ ಹುದ್ದೆಗಳ ನೇಮಕಾತಿ ವೇಳೆ ತೃತೀಯ ಲಿಂಗಿಗಳಿಗೆ ಎಲ್ಲ ವರ್ಗಗಳಲ್ಲಿ ಶೇ. 1 ರಷ್ಟು ಸಮತಲ ಮೀಸಲು ಕಲ್ಪಿಸಿ ರೂಪಿಸಲಾಗಿರುವ ನಿಯಮವನ್ನು ಅಳವಡಿಸಿಕೊಳ್ಳುವಂತೆ ರಾಜ್ಯದ ಪ್ರಾಧಿಕಾರಗಳು ಹಾಗೂ ನಿಗಮ ಮಂಡಳಿಗಳಿಗೆ ಕೋರಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಮಾಹಿತಿ ನೀಡಿದೆ. ರಾಜ್ಯ ಸರ್ಕಾರ, ಕರ್ನಾಟಕ ನಾಗರಿಕ ಸೇವಾ ನೇಮಕಾತಿ ನಿಯಮ 1977 ರ ನಿಯಮ 9 ಕ್ಕೆ …

Read More »

ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಂಗಳೂರು : ದ್ವಿತೀಯ ಪಿಯು ಪರೀಕ್ಷೆ ಮತ್ತು ಎನ್‌ಟಿ‌ಎ ನಡೆಸುವ ಜೆಇಇ ಪರೀಕ್ಷೆಯ ಕೆಲ ವಿಷಯಗಳು ಒಂದೇ ದಿನಾಂಕದಂದು ಬಂದಿರುವ ಕಾರಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿ (ತಾತ್ಕಾಲಿಕ) ಪರಿಷ್ಕರಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಟ್ವೀಟ್‌ ಮಾಡಿದ್ದಾರೆ. ಏ.22ರಿಂದ ಮೇ 11ರವರೆಗೆ ಪರೀಕ್ಷೆ ನಡೆಯಲಿದೆ. ವೇಳಾಪಟ್ಟಿಯ ಪ್ರಕಾರ, ಏ.22ರಂದು ವ್ಯವಹಾರ ಅಧ್ಯಯನ, 23ರಂದು ಹಿಂದಿ, 25ರಂದು ಅರ್ಥಶಾಸ್ತ್ರ, 26ರಂದು ರಸಾಯನವಿಜ್ಞಾನ, 27ರಂದು ಸಂಸ್ಕೃತ, 28ರಂದು …

Read More »

ಕರುನಾಡಿಗೆ ಕರೆ ನೀಡಿದ ಡಿಕೆಶಿ

ಬೆಂಗಳೂರು: ಮಾರ್ಚ್ 3 ಮತ್ತೊಂದು ಇತಿಹಾಸ ಸೃಷ್ಟಿಯಾಗುವ ಸಮಯ. ಈ ಅಮೋಘ ಘಳಿಗೆಗೆ ನೀವು ಸಾಕ್ಷಿಯಾಗಬೇಕು ಎಂದು ಮೇಕೆದಾಟು ಪಾದಯಾತ್ರೆಯಲ್ಲಿ ನಿರತರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯದ ಜನರಿಗೆ ಕರೆ ಕೊಟ್ಟಿದ್ದಾರೆ. ಮೂರನೇ ತಾರೀಕು ಪಾದಯಾತ್ರೆ ಅಂತ್ಯ ಮಾಡಲಿದ್ದೇವೆ. ರಾಜ್ಯದ ಉದ್ದಗಲಕ್ಕೂ ಕಾರ್ಯಕರ್ತರಿಗೆ ಮುಖಂಡರಿಗೆ ಮನವಿ ಮಾಡುತ್ತೇನೆ. ನೀವು ಮೂರನೇ ತಾರೀಖು ಬೆಳಗ್ಗೆ ಪ್ಯಾಲೆಸ್ಗೆ ಬಂದು ಅಲ್ಲಿಂದ ಪ್ಯಾಲೆಸ್ ನಿಂದ ಪಾದಯಾತ್ರೆಗೆ ಹೆಜ್ಜೆ ಹಾಕಬೇಕು. ಇದು ನಿಮಗೆ ಅನುಭವದ …

Read More »

ಉಕ್ರೇನ್ : ನವೀನ್ ಸಾವಿಗೆ ಕೇಂದ್ರ ಸರಕಾರದ ನಿರ್ಲ್ಯಕ್ಷವೇ ಕಾರಣ : ಸಿದ್ದರಾಮಯ್ಯ

ಬೆಂಗಳೂರು: ರಷ್ಯಾ ನಡೆಸಿದ ಶೆಲ್ ನಲ್ಲ ನಡೆದ ದಾಳಿಯಲ್ಲಿ ಭಾರತಿಯ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದು ವಿಷಾದಿನಿಯ. ನವೀನ್ ಸಾವಿನ ಸಂಬಂಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದರು. ವಿದ್ಯಾರ್ಥಿಯ ಸಾವಿಗೆ ಕೇಂದ್ರ ಸರಕಾರದ ನಿರ್ಲ್ಯಕ್ಷವೇ ಕಾರಣ ಎಂದು ಸಿದ್ದರಾಮಯ್ಯ ದೂರಿದ್ದರು. “ಉಕ್ರೇನ್‌ನಲ್ಲಿ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್ ಸಾವಿಗೆ ಯುದ್ದದಾಹಿ ರಷ್ಯಾ ಸೇನೆ ಎಷ್ಟು ಹೊಣೆಯೋ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಸಕಾಲದಲ್ಲಿ ನೆರವಾಗದೆ ನಿರ್ಲಕ್ಷಿಸಿದ @PMOIndia ಮತ್ತು …

Read More »

ಖಾರ್ಕಿವ್ ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ಮಹತ್ವ ಸೂಚನೆ ನೀಡಿದ ಎಂಇಎ

ನವದೆಹಲಿ: ರಷ್ಯಾದ ಪಡೆಗಳ ಭಾರಿ ಶೆಲ್ ದಾಳಿಯ ನಡುವೆ, ಉಕ್ರೇನ್ ನ ಖಾರ್ಕಿವ್ ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳನ್ನು ಅವರ ಸುರಕ್ಷತೆಗಾಗಿ ತಕ್ಷಣವೇ ನಗರವನ್ನು ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ಸೂಚಿಸಲಾಗಿದೆ. ಖಾರ್ಕಿವ್ ನಲ್ಲಿರುವ ಎಲ್ಲಾ ಭಾರತೀಯರನ್ನು ತಕ್ಷಣವೇ ನಗರದಿಂದ ಹೊರಹೋಗುವಂತೆ ಎಂಇಎ ತಿಳಿಸಿದೆ.ರಾತ್ರಿ 9.30ರ ವೇಳೆಗೆ ರೈಲ್ವೆ ನಿಲ್ದಾಣಗಳನ್ನು ತಲುಪುವಂತೆ ರಾಯಭಾರ ಕಚೇರಿ ಸೂಚಿಸಿದೆ. ಈ ಮೂಲಕ ಉಕ್ರೇನ್ ನಲ್ಲಿರುವಂತ ಭಾರತೀಯರು ಕೂಡಲೇ ಖಾರ್ಕಿವ್ ನಿಂದ್ ಸ್ಥಳೀಯ ಕಾಲಮಾನ …

Read More »

ಯುದ್ದಪೀಡಿತ ಉಕ್ರೇನ್ʼನಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿ ವಿಧಿವಶ

ಯುದ್ದಪೀಡಿತ ಉಕ್ರೇನ್ʼನಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಂಜಾಬ್‌ ಮೂಲದ ಯುವಕ ಚಂದನ್ ಇಂದು ಪಾರ್ಶ್ವವಾಯು ನಿಂದ ಮೃತ ಪಟ್ಟಿದ್ದಾನೆ ಎನ್ನಲಾಗ್ತಿದೆ. ಚಂದನ್ ಜಿಂದಾಲ್ (22) ಅನ್ನೋ ಯುವಕ ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೊವ್, ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿ, ವಿನ್ನಿಟ್ಸಿಯಾ ಉಕ್ರೇನ್ʼನಲ್ಲಿ ಅಧ್ಯಯನ ಮಾಡುತ್ತಿದ್ದನು. ಇನ್ನು ಚಂದನ್‌ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದು, ವಿನ್ನಿಟ್ಸಿಯಾದ ತುರ್ತು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೆದುಳಿನಲ್ಲಿ ಇಸ್ಚೆಮಿಯಾ ಸ್ಟ್ರೋಕ್ʼನಿಂದ ಬಳಲುತ್ತಿದ್ದ ಚಂದನ್‌ನನ್ನ ನಂತ್ರ ಐಸಿಯುಗೆ …

Read More »