Breaking News

admin

ಹುಬ್ಬಳ್ಳಿಯಲ್ಲಿ ಜೇಮ್ಸ್ ಚಿತ್ರದ ಪೋಸ್ಟರ್ ಬಿಡುಗಡೆ

ಹುಬ್ಬಳ್ಳಿ : ಕರ್ನಾಟಕ ರತ್ನ ಪವರ್ ಸ್ಟಾರ್ ಶ್ರೀ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಇಂದು ಹುಬ್ಬಳ್ಳಿ ನಗರದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ರಾಜರತ್ನ ಕನ್ನಡ ಯುವ ಸಮಿತಿ ವತಿಯಿಂದ ಹಮ್ನಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿವಕುಮಾರ ಮಟ್ಟಿ, ಶೇಕರಯ್ಯ ಮಠಪತಿ, ಬಸಯ್ಯ ಹೀರೆಮಠ,ರಾಹುಲ ಉಮಚಗಿ, ಪ್ರಶಾಂತ ಎಸ್, ಸಾಯಿಶ ಯರಕದ, ಮಂಜುನಾಥ ಯರಗಂಬಳಿಮಠ, ಬೃಂಗೇಶ ಕಾಂಬಳೆ, ಸದು ಪವಾಡಿ, ಮುರುಳಿ ಇಂಗಳಲ್ಲಿ, …

Read More »

ಅಪ್ಪುಗೆ ಪದ್ಮಪ್ರಶಸ್ತಿ : ಮಾತು ಉಳಿಸಿಕೊಳ್ಳದ ಸಿಎಂ : ಡಿಕೆಶಿ ಅಸಮಧಾನ

ಬೆಂಗಳೂರು:ಪುನೀತ್ ರಾಜಕುಮಾರ್ ಅವರ ಹೆಸರನ್ನು ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು ಆದರೆ ಪ್ರಶಸ್ತಿ ಪಟ್ಟಿಯಲ್ಲಿ ಅವರ ಹೆಸರಿಲ್ಲ ಎಂಬ ಪ್ರಶ್ನೆಗೆ, ‘ಪ್ರಧಾನಮಂತ್ರಿಗಳಿಗೆ ಯಾರು ಏನು ಶಿಫಾರಸ್ಸು ಮಾಡಿದ್ದರೋ ಗೊತ್ತಿಲ್ಲ  ಅಸಮಾಧಾನ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ವಿಚಾರದಲ್ಲಿ ಸಿಎಂ‌ ಬೊಮ್ಮಾಯಿ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಟೀಕಿಸಿದ್ದಾರೆ. ಪಾದಯಾತ್ರೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಯಾವ ಕಲಾವಿದರ ಜತೆ ಏನು ಮಾತನಾಡಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಹೇಳುವುದಿಲ್ಲ. …

Read More »

ಕಲಾವಿದ ಹೆಚ್‌.ಆರ್.ಕೇಶವಮೂರ್ತಿ ಗೆ ಪದ್ಮಶ್ರೀ ಪ್ರಶಸ್ತಿ

ಶಿವಮೊಗ್ಗ: ಖ್ಯಾತ ಗಮಕ ಕಲಾವಿದರಾದ ಹೆಚ್‌.ಆರ್.ಕೇಶವಮೂರ್ತಿ ಅವರಿಗೆ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಕಳೆದ ಹಲವಾರು ದಶಕಗಳಿಂದ ಹೆಚ್‌.ಆರ್.ಕೇಶವಮೂರ್ತಿ ಅವರು ನಿರಂತರವಾಗಿ ಗಮಕ ಕಾರ್ಯಕ್ರಮಗಳ ಮೂಲಕ ಮಾಡಿರುವ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ. ಹೆಚ್‌.ಆರ್.ಕೇಶವಮೂರ್ತಿ ಅವರದು ಶಿವಮೊಗ್ಗ ಸಮೀಪದ ಮತ್ತೂರು ಹೊಸಳ್ಳಿ. ರಾಮಸ್ವಾಮಿ ಶಾಸ್ತ್ರಿ-ಲಕ್ಷ್ಮೀದೇವಮ್ಮ ದಂಪತಿ ಪುತ್ರ. 22 ಫೆಬ್ರವರಿ 1934ರಲ್ಲಿ ಜನಿಸಿದ್ದ ಅವರು ಬಾಲ್ಯದಿಂದಲೇ ಗಮಕ ಕಲೆ ಕರಗತ ಮಾಡಿಕೊಂಡಿದ್ದರು. ತಂದೆ, ತಾಯಿ ರಾಗವಾಗಿ …

Read More »

ಕಲಾವಿದೆ ಶೀಲಾ ದಿವಾಕರ್ ನಿಧನ

ಮಂಗಳೂರು: ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್ ಅವರು ಬುಧವಾರದಂದು (ಜನವರಿ 26) ನಿಧನರಾದರು.ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಅವರು ಇಂದು ಸಾವನ್ನಪ್ಪಿದ್ದಾರೆ. ಕಳೆದ 28 ವರ್ಷಗಳಿಂದ ಸಂಗೀತ ರಂಗದ ನೂರಾರು ಮೇರು ಪ್ರತಿಭೆಗಳಿಗೆ ಗುರುವಾಗಿರುವ ಶೀಲಾ ದಿವಾಕರ್ ಅನಾರೋಗ್ಯದ ಕಾರಣದಿಂದ ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

Read More »

ಚಿಟಗುಪ್ಪಿ ಆಸ್ಪತ್ರೆಯ ಉದ್ಯಾನವನದಲ್ಲಿ ಪ್ರೀಮಿಗಳು ಫುಲ್ ರೋಮ್ಯಾನ್ಸ್

ಹುಬ್ಬಳ್ಳಿ: ನಗರದ ಚಿಟಗುಪ್ಪಿ ಆಸ್ಪತ್ರೆಯ ಉದ್ಯಾನವನದಲ್ಲಿ ಪ್ರೇಮಿಗಳು ಇಬ್ಬರು ತಮ್ಮನ್ನು ತಾವೇ ಮರೆತು ರೋಮ್ಯಾನ್ಸ್ ನಲ್ಲಿ ಬ್ಯಸಿ ಆಗಿದ್ದಾರೆ.  ಜನರು, ಮಕ್ಕಳ್ಳು, ವೈದ್ಯರು, ರೋಗಿಗಳನ್ನು ಲೇಕಿಸದೇ ತಮ್ಮ ಗುಂಗಿನಲ್ಲಿ ತಮ್ಮನೇ ತಾವೇ ಮೈ ಮರೆತ ರೀತಿ ವರ್ತಿಸಿದ್ದು ಇದೀಗ ವಿಡಿಯೋ ವೈರೆಲ್ ಆಗಿದೆ. ಇಲ್ಲಿ ಹೇಳೋರು ಇಲ್ಲ, ಕೇಳೋರು ಇಲ್ಲ ಎಂಬಂತಾಗಿದ್ದು. ಯುವ ಪ್ರೇಮಿಗಳಿಬ್ಬರು ಮುತ್ತಿನ ಗಮ್ಮತ್ತಿನಲ್ಲಿ ತಮ್ಮನ್ನೇ ತಾವು ಮರೆತಿದ್ದಾರೆ.ಅಲ್ಲೇ ಇದ್ದ ಸಾರ್ವಜನಿಕರಿಗೆ ಈ ವರ್ತನೆಯಿಂದ ಮುಜುಗುರ ಉಂಟಾಗಿದೆ. …

Read More »

ಪವರ್ ಸ್ಟಾರ್ ಅಭಿನಯದ ಜೇಮ್ಸ್​ ಚಿತ್ರದ ​ ಪೋಸ್ಟರ್ ಬಿಡುಗಡೆ

ಗಣರಾಜ್ಯೋತ್ಸವದ ದಿವವೇ ಪುನೀತ್​ ರಾಜ್ ಕುಮಾರ್ ಅವರ ಕೊನೆಯ ಚಿತ್ರ ‘ಜೇಮ್ಸ್​’ ಚಿತ್ರದ ಸ್ಪೆಷಲ್​ ಪೋಸ್ಟರ್ ಬಿಡುಗಡೆಯಾಗಿದೆ. ಪುನೀತ್​ ಅವರ ಜನ್ಮದಿನದ ಪ್ರಯುಕ್ತ ಮಾರ್ಚ್​17ರಂದು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.ಪುನೀತ್​ ಹೀರೋ ಆಗಿ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್​’ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈಗ ಹೊಸದಾಗಿ ರಿಲೀಸ್​ ಆಗಿರುವ ಪೋಸ್ಟರ್​ ಈ ಸಿನಿಮಾದ ಮೇಲಿದ್ದ ನಿರೀಕ್ಷೆಯನ್ನು ದುಪ್ಟಟ್ಟು ಮಾಡಿದೆ. ಪೋಸ್ಟರ್​ ಕಂಡು ಅಪ್ಪು ಅಭಿಮಾನಿಗಳು ಅಪ್ಪು ವಿ …

Read More »

ಶಾಲೆಯಲ್ಲಿ ನಮಾಜ್ :ಶಿಕ್ಷಕಿ ಅಮಾನತು

ಕೋಲಾರ : ಸರ್ಕಾರಿ ಶಾಲೆ ಕೊಠಡಿಯಲ್ಲಿ ನಮಾಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಮುಖ್ಯ ಶಿಕ್ಷಕಿ ಉಮಾದೇವಿ ಅವರನ್ನು ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ವರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಲು ಪಟ್ಟಣದ ಬಳೆ ಚಂಗಪ್ಪ ಸರ್ಕಾರಿ ಶಾಲೆ ಕೊಠಡಿಯಲ್ಲಿ ಜನವರಿ 21 ರಂದು ವಿದ್ಯಾರ್ಥಿಗಳು ನಮಾಜ್ ಮಾಡಿದ್ದರು. ಈ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಶಾಲಾ ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ …

Read More »

ರಾಜ್ಯದ 5 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ

ನವದೆಹಲಿ: 73ನೇ ಗಣರಾಜ್ಯೋತ್ಸವ ಅಂಗವಾಗಿ ರಾಜ್ಯದ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಸುಬ್ಬಣ್ಣ ಅಯ್ಯಪ್ಪನ್ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕೃಷಿ ವಿಭಾಗದಿಂದ ಅಮೈ ಮಹಾಲಿಂಗ ನಾಯಕ್, ಇತರೆ ವಿಭಾಗದಿಂದ ಅಬ್ದುಲ್ ಖಾದರ್ ನಾದಕಟ್ಟಿನ್, ಕಲಾ ವಿಭಾಗದಿಂದ ಹೆಚ್.ಆರ್.ಕೇಶವಮೂರ್ತಿ, ಸಾಹಿತ್ಯ, ಶಿಕ್ಷಣ ವಿಭಾಗದಿಂದ ದಿ. ಸಿದ್ದಲಿಂಗಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

Read More »

ಕರಾವಳಿ ಭಾಗದ ಭಗೀರಥ ಗೆ ಪದ್ಮಶ್ರೀ ಪ್ರಶಸ್ತಿ

ಮಂಗಳೂರು: ‘ಬಂಟ್ವಾಳ ತಾಲ್ಲೂಕಿನ ಅಡ್ಯನಡ್ಕ ಸಮೀಪದ ಅಮೈ ಮಹಾಲಿಂಗ ನಾಯ್ಕ (76 ವರ್ಷ) ಕರಾವಳಿ ಭಾಗದ ಭಗೀರಥ’ ಎಂದೇ ಖ್ಯಾತಿ ಗಳಿಸಿರುವ ಅವರು ಕೃಷಿ ಕ್ಷೇತ್ರದ ಸಾಧನೆಗಾಗಿ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್‌ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಬಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್‌ ರಹಿತವಾಗಿ ಗುರುತ್ವಾಕರ್ಷಣೆಯ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಹನಿ …

Read More »

300 ಬಸ್ ಗಳ ಖರೀದಿಗೆ ಮುಂದಾದ ಕೆಕೆಆರ್ ಟಿಸಿ

ಕಲಬುರಗಿ:  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹೊಸದಾಗಿ 300 ಬಸ್‌ಗಳ ಖರೀದಿಗೆ ಸಿದ್ಧತೆ ನಡೆಸಿದ್ದು, ಕೋವಿಡ್‌-19 ಸೋಂಕಿನಿಂದ ಇತ್ತೀಚಿನ ವರ್ಷಗಳಲ್ಲಿ ಹೊಸ ಬಸ್‌ ಖರೀದಿಯನ್ನು ಮುಂದೂಡುತ್ತಲೇ ಬಂದಿರುವ ಕಾರಣ ಇದೀಗ ಖರೀದಿಸಲು ಮುಂದಾಗಿದೆ. 1800 ನೂತನ ಬಸ್‌ ಚಾಲಕ, ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿಯ ನೇಮಕಾತಿಗೂ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು. ಕಲಬುರಗಿ, …

Read More »