ಘಾನಾ : ಪಶ್ಚಿಮ ಘಾನಾದಲ್ಲಿ ಗಣಿಗಾರಿಕೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಘಟನೆ ಪಶ್ಚಿಮ ಆಫ್ರಿಕಾ ದೇಶದ ರಾಜಧಾನಿ ಅಕ್ರಾದಿಂದ ಪಶ್ಚಿಮಕ್ಕೆ 300 ಕಿ.ಮೀ ದೂರದಲ್ಲಿರುವ ಗಣಿ ನಗರ ಬೊಗೊಸೊ ಬಳಿಯ ಅಪಿಯಾಟೆಯಲ್ಲಿ ಮಧ್ಯಾಹ್ನದ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ನಂತರ 17 ಜನರು ಮೃತಪಟ್ಟಿದ್ದಾರೆ. ಖನಿಜ ಸಮೃದ್ಧ ಪ್ರದೇಶದ ಎರಡು ಚಿನ್ನದ ಗಣಿಗಳ ನಡುವೆ ಪ್ರಯಾಣಿಸುತ್ತಿದ್ದ ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ …
Read More »ಬಂಗಲೆ ಮಾರಾಟಕಿಟ್ಟ ರಮೇಶ್ ಜಾರಕಿಹೊಳಿ
ಬೆಂಗಳೂರ : ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಅವರ ಬೆಂಗಳೂರಿನ ಸದಾಶಿವನಗರದಲ್ಲಿರುವ ಬಂಗಲೆ `ಲಕ್ಷ್ಮೀ’ ಮಾರಾಟಕ್ಕಿಡಲಾಗಿದೆ. ಸದಾಶಿವನಗರದಲ್ಲಿ ಉದ್ಯಮಿ ರವಿ ಅವರಿಂದ ಖರೀದಿಸಿದ್ದ ಬಂಗಲೆಯನ್ನು ರಮೇಶ್ ಜಾರಕಿಹೊಳಿ ಮಾರಲು ನಿರ್ಧರಿಸಿದ್ದು, ಇದರ ಬೆಲೆ 40 ಕೋಟಿ ರೂ. ನಿಗದಿಪಡಿಸಲಾಗಿದೆ.
Read More »ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ನೂತನ ಆಯುಕ್ತರ ಭೇಟಿ
ಹುಬ್ಬಳ್ಳಿ : ಅವಳಿ ನಗರದ ಬೀದಿಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೂತನ ಆಯುಕ್ತರಾದ ಗೋಪಾಲಕೃಷ್ಣ ಬಿ. ಅವರನ್ನು ಭೇಟಿ ಮಾಡಿ ಶುಭಕೋರಲಾಯಿತು. ಬೆಂಗೇರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾದ ಮಾರುಕಟ್ಟೆ ಪ್ರಾರಂಭಿಸಲು, ಬೀದಿಬದಿ ವ್ಯಾಪಾರಿಗಳ ಸರ್ವೆ ನೋಂದಣಿ ಮಾಡುವುದು ಸೇರಿದಂತೆ ಬೇಡಿಕೆಗಳ ಮನವಿಯನ್ನು ನೀಡಲಾಯಿತು. ಸಂಘದ ಗೌರವಾಧ್ಯಕ್ಷ ಅಮೃತ ಇಜಾರಿ, ಅಧ್ಯಕ್ಷರಾದ ಹುಲಿಗೆಮ್ಮ ಚಲವಾದಿ, ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಟೌನ್ ವೆಂಡರ್ ಕಮಿಟಿ …
Read More »ಪಾಲಕರಿಂದ ಪ್ರಾಂಶುಪಾಲರಿಗೆ ಮನವಿ ಸಲ್ಲಿಕೆ
ಚಾಮರಾಜನಗರ : ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳಲ್ಲಿ ಕೋವಿಡ್ ಸೋಂಕು ಕಂಡು ಬರುತ್ತಿದೆ. ಅಲ್ಲದೇ ಜೆಎಸ್‌ಎಸ್ ಪಬ್ಲಿಕ್ ಶಾಲೆಯ ಕೆಲ ಮಕ್ಕಳಿಗೆ ಕೋವಿಡ್ ಸೋಂಕು ದೃಢಪಟ್ಟ ಕಾರಣ ಶಾಲೆಗೆ ರಜೆ ಘೋಷಿಸಿ, ಆನ್‌ಲೈನ್ ತರಗತಿ ನಡೆಸಬೇಕೆಂದು ಒತ್ತಾಯಿಸಿ ಪೋಷಕರು ಶಾಲೆಯ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು. ಎಷ್ಟೇ ತಿಳಿ ಹೇಳಿದರೂ ಮಕ್ಕಳಿಗೆ ಭೌತಿಕ ಅಂತರ ಕಾಪಾಡಬೇಕೆಂಬ ಪರಿವೆ ಇರುವುದಿಲ್ಲ. ಆಟಕ್ಕೆ ಬಿಟ್ಟಾಗ ಜೊತೆಯಾಗುತ್ತಾರೆ. ಇದರಿಂದ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಸೋಂಕು …
Read More »ತಮಿಳುನಾಡಿನಿಂದ ಬರುವವರಿಗೂ ನೆಗೆಟಿವ್ ರಿಪೋರ್ಟ್ ಕಡ್ಡಾಯ : ಸೋಮಶೇಖರ್
ಚಾಮರಾಜನಗರ : ಜಿಲ್ಲೆಯಲ್ಲಿ ಹೊಂದಿಕೊಂಡಿರುವ ಎಲ್ಲಾ ಅಂತಾರಾಜ್ಯ ಗಡಿಗಳಲ್ಲಿ ಮತ್ತಷ್ಟು ಬಿಗಿ ಮಾಡಲಿದ್ದು, ಎಲ್ಲಾ ಕಡೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಬೇಕೆಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ಕೋವಿಡ್ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿ, ಕೇರಳದಿಂದ ಬರುವವರಿಗೆ ಮಾತ್ರ ಈಗ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಿದೆ. ಆದರೆ, ಇಂದಿನಿಂದ ತಮಿಳುನಾಡಿನಿಂದ ಬರುವವರಿಗೂ ನೆಗೆಟಿವ್ ರಿಪೋರ್ಟ್ ತರುವುದನ್ನು ಕಡ್ಡಾಯ ಮಾಡಿದ್ದು, …
Read More »ಕೊರೋನಾ ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ
ಕೋಲಾರ: ಶಾಲಾ ಮಕ್ಕಳು ಸೇರಿದಂತೆ 3 ಸಾವಿರಕ್ಕೂ ಅಧಿಕ ಮಂದಿ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣ ವಿಪರೀತವಾಗಿ ಹರಡುತ್ತಿದೆ. ಈ ಪೈಕಿ ಬಹುತೇಕ ಸೋಂಕಿತರು ಮನೆಗಳಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಆಸ್ಪತ್ರೆಗಳ ಮೇಲೆ ಒತ್ತಡ ಇಲ್ಲವಾಗಿದೆ. ಮಾರಣಾಂತಿಕವಲ್ಲದ ಕೊರೊನಾ 3ನೇ ಅಲೆ ಎದುರಿಸಲು ಜಿಲ್ಲಾಡಳಿತ ಮನೆಗಳಿಗೆ ಔಷಧಿ ವಿತರಿಸಲು, ರೋಗಿಗಳ ಮಾಹಿತಿ ಸಂಗ್ರಹಿಸಲು ಮತ್ತು ಕೋವಿಡ್ ಮಾರ್ಗಸೂಚಿ ಪಾಲನೆ ನಿಗಾವಹಿಸಲು ವ್ಯವಸ್ಥೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
Read More »ಯಾವ ಗಲಾಟೆನೂ ಇಲ್ಲ, ಯಾರೋ ಮಿಸ್ ಗೈಡ್ ಮಾಡಿದ್ದಾರೆ: ಡಿಕೆಶಿ
ಬೆಂಗಳೂರು: ಮೊಹಮ್ಮದ್ ನಲಪಾಡ್ ವಿರುದ್ಧ ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಪಟ್ಟಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಯಾವ ಗಲಾಟೆನೂ ಇಲ್ಲ, ಏನು ಇಲ್ಲ. ನಾನು ಕ್ರಾಸ್ ಚೆಕ್ ಮಾಡಿದೆ. ಆ ಥರ ಏನೂ ಇಲ್ಲ. ಯಾವ ಗಲಾಟೆನೂ ಇಲ್ಲ. ಯಾರೋ ಮಿಸ್ ಗೈಡ್ ಮಾಡಿದ್ದಾರೆ. ನಾನು ಸಿದ್ದು ಹಳ್ಳೇಗೌಡರ ಜೊತೆ ಪೋನ್ನಲ್ಲಿ ಮಾತನಾಡಿದೆ. ನನ್ನ ಪೋನ್ ತಗೊಂಡು ಯಾರೋ …
Read More »ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ರಾಕ್ಷಸರಿಗೆ ಹೋಲಿಸುವ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದರು. ತಾಲೂಕಿನ ಮಾವಿನಕಟ್ಟಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗುದ್ದಲಿ ಪೂಜೆ ನೆರವೇರಿಸಿದರು ಈ ರೀತಿ ಮಾತನಾಡಿದರು. ಗುದ್ದಲಿ ಪೂಜೆ ಬಳಿಕ ಮಾತನಾಡಿದ ಅವರು, ನಾಲ್ಕೂವರೆ ಕೋಟಿ ರೂಪಾಯಿಯ ಪ್ಯಾಕೇಜ್ ಇದು. ಎರಡು ವರ್ಷಗಳ ಹಿಂದೆಯೇ ನಾಲ್ಕೂವರೆ ಕೋಟಿ ರೂಪಾಯಿ ಟೆಂಡರ್ ಆಗಿ ವರ್ಕ್ ಆರ್ಡರ್ ಆಗಿತ್ತು. …
Read More »ವಿಶ್ವದಾಖಲೆಯಲ್ಲಿ ಧಾರವಾಡಕ್ಕೆ ಮತ್ತೊಂದು ಕಿರೀಟ ತಂದ ಕೊಟ್ಟ ಕವಿತಾ ಮೇದಾರ
ಹುಬ್ಬಳ್ಳಿ:ಆಕೆ ನಿಜಕ್ಕೂ ಕಿತ್ತು ತಿನ್ನುವ ಬಡತನದಲ್ಲಿ ಹುಟ್ಟಿದ ಹೆಣ್ಣುಮಗಳು. ಈಗ ಆಕೆ ವಿಶ್ವ ದಾಖಲೆಯಲ್ಲಿ ತನ್ನ ಹೆಸರನ್ನು ಬರೆದಿದ್ದಾಳೆ. ತೊಟ್ಟಿಲನ್ನು ತೂಗುವ ಕೈ ಜಗತ್ತನೇ ಆಳಬಲ್ಲದು ಎಂಬುವಂತ ಗಾದೆಗೆ ನಿದರ್ಶನ ಎಂಬಂತೆ ಈ ಮಹಿಳೆ ಸಾಧನೆ ಮಾಡಿದ್ದಾಳೆ. ಸಾಮಾನ್ಯವಾಗಿ ದೊಡ್ಡ ದೊಡ್ಡ ಬಾರ್ ಗಳಲ್ಲಿ ಬಾರ್ ಟೆಂಡರ್ ಗಳನ್ನು ನೀವು ನೋಡಿರ್ತೀರಾ. ಅದರಲ್ಲಿ ಬಾರ್ ಟೆಂಡರ್ ಗಳ ಬಾಟಲಿ ತಿರುಗಿಸುವುದನ್ನು ನೋಡಿಯೇ ಹೌ ಹಾರಿರುತ್ತೇವೆ. ಅಂಥದ್ದರಲ್ಲಿ ಇಲ್ಲೊರ್ವ ಯುವತಿ ಗ್ರಾಮೀಣ …
Read More »ಬ್ರಾಹ್ಮಿ ಮುಹೂರ್ತದಲ್ಲಿ ನೆರೆವೇರಿದ ಶ್ರೀ ಗವಿ ಸಿದೇಶ್ವರ ರಥೋತ್ಸವ
ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳೆ ಎಂದೇ ಪ್ರಸಿದ್ಧಿ ಪಡೆದ ನಗರದ ಗವಿ ಮಠದ ಅಜ್ಜನ ಜಾತ್ರಾಮಹೋತ್ಸವ ಇಂದು(ಬುಧವಾರ) ಬೆಳಗ್ಗೆ 4.30ಕ್ಕೆ ಸಲ್ಲುವ ಬ್ರಾಹ್ಮಿ ಮುಹೂರ್ತದಲ್ಲಿ ನೆರವೇರಿತು. ಪ್ರತಿ ವರ್ಷ 5 ಲಕ್ಷ ಜನ ಸೇರುತ್ತಿದ್ದ ಈ ಜಾತ್ರೆ ಸಂಜೆ ವೇಳೆ ನಡೆಯುತ್ತಿತ್ತು. ಕರೊನಾ 3ನೇ ಅಲೆ ಇರುವ ಕಾರಣ ಜಿಲ್ಲಾಡಳಿತ ಜಾತ್ರೆಗೆ ನಿರ್ಬಂಧ ವಿಧಿಸಿದ್ದರಿಂದ ಯಾರಿಗೂ ನಿಗದಿತ ಸಮಯವನ್ನು ತಿಳಿಸದೇ ಇಂದು ನಸುಕಿನಲ್ಲಿ ಅತ್ಯಂತ ಸರಳವಾಗಿ ರಥೋತ್ಸವ ನಡೆಸಲಾಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





