ದಾವಣಗೆರೆ: ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸಲು ಭಾನುವಾರ ರಾಜ್ಯಾದ್ಯಂತ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದರೂ, ಜಗಳೂರಿನ ಬಿಜೆಪಿ ಶಾಸಕ ಎಸ್ವಿ ರಾಮಚಂದ್ರ ಅವರು ನಿಯಮಗಳ ಉಲ್ಲಂಘಿಸಿ ಇಲ್ಲಿನ ತಮ್ಮ ನಿವಾಸದ ಎದುರು ಹುಟ್ಟುಹಬ್ಬ ಆಚರಿಸಿಕೊಂಡರು. ದಾವಣಗೆರೆ ಕೆ.ಬಿ. ಬಡಾವಣೆಯಲ್ಲಿರುವ ಶಾಸಕರ ಮನೆಯ ಮುಂದೆ ಶಾಮಿಯಾನ, ವೇದಿಕೆ, ಕುರ್ಚಿಗಳನ್ನು ಹಾಕಲಾಗಿತ್ತು. ಅಭಿಮಾನಿಗಳು, ಜನಪ್ರತಿನಿಧಿಗಳು, ಬಿಜೆಪಿ ಕಾರ್ಯಕರ್ತರು, ಅಧಿಕಾರಿಗಳು, ಪೊಲೀಸರು ಭಾಗವಹಿಸಿ ಶಾಸಕರಿಗೆ ಶುಭಕೋರಿದರು. ಕೋವಿಡ್ ನಿಯಮ ಪಾಲನೆ ಮಾಡದೆಯೇ ಜನುಮದಿನದ ಆಚರಣೆ ನಡೆಯಿತು. …
Read More »ಭಾರತದಲ್ಲಿ 2,58,089 ಕೋವಿಡ್ ಪತ್ತೆ
ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ದಿನ ಕಳೆದಂತೆ ವೇಗವಾಗಿ ಹರಡುತ್ತೀದೆ. ಇದರಿಂದಾಗಿ ಜನರಲ್ಲಿ ಆತಂಕ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ 2,58,089 ಕೋವಿಡ್ ಪ್ರಕರಣಗಳು ವರದಿಯಾಗುವೆ. ಇದು 13,113 ನಿನ್ನೆಗಿಂತ ಕಡಿಮೆ ಇದೆ. 385 ಸಾವುಗಳು ಉಂಟಾಗಿದೆ, ಮತ್ತು ಕಳೆದ 24 ಗಂಟೆಗಳಲ್ಲಿ 1,51,740 ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ವರದಿ ಆಗಿದೆ.
Read More »ರಾಜಧಾನಿಯಲ್ಲಿ ತುಸು ಇಳಿಕೆ ಕಂಡ ಕೋವಿಡ್
ಬೆಂಗಳೂರು: ರಾಜಧಾನಿಯಲ್ಲಿ ಕೊರೋನಾ ಪ್ರಕಣಗಳ ಏರಿಳಿತ ಮುಂದುವರಿದಿದ್ದು, ಭಾನುವಾರ ಹೊಸದಾಗಿ 21,071 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ. ಶನಿವಾರಕ್ಕೆ ಹೋಲಿಸಿದರೆ (22,284) ಭಾನುವಾರ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ.ಹೊಸದಾಗಿ 12,460 ಪುರುಷರು ಮತ್ತು 8,610 ಮಹಿಳೆಯರಲ್ಲಿ ಪತ್ತೆಯಾದ ಪ್ರಕರಣಗಳಿಂದ ಈವರೆಗಿನ ಸೋಂಕಿತರ ಒಟ್ಟು ಸಂಖ್ಯೆ 14,16,807ಕ್ಕೆ ತಲುಪಿದೆ. ಒಂದೇ ದಿನ 2,142 ಪುರುಷರು ಮತ್ತು 1836 ಮಹಿಳೆಯರು ಸೇರಿ ಒಟ್ಟು 3,978 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಬಿಡುಗಡೆಯಾದವರ …
Read More »ಮಹಾಮಾರಿ ಆತಂಕದಲ್ಲಿ ಜನರಿಗೆ ಸಿಹಿ ಸುದ್ದಿ
ನವದೆಹಲಿ: ದೇಶದಲ್ಲಿ ಒಮಿಕ್ರಾನ್ ಬಳಿಕ ಕೊರೋನಾ ಮೂರನೇ ಅಲೆ ಆತಂಕ ಹೆಚ್ಚಾಗಿದೆ. ಕೊರೋನಾ ಸೋಂಕು ಶರವೇಗದಲ್ಲಿ ಹರಡುತ್ತಿದೆ. ಇದೇ ಹೊತ್ತಲ್ಲಿ ಮೂರನೇ ಅಲೆ ಅಬ್ಬರದ ನಡುವೆ ಆಶಾಕಿರಣವೊಂದು ಮೂಡಿದೆ. ಕೊರೊನಾ ಸೋಂಕಿನ ಆರ್ -ವ್ಯಾಲ್ಯೂ ಇಳಿಮುಖವಾಗುತ್ತಿದೆ ಎಂದು ಹೇಳಲಾಗಿದೆ. ದೇಶದಲ್ಲಿ ಆರ್ -ವ್ಯಾಲ್ಯೂ ದರ 2.2 ಕ್ಕೆ ಇಳಿಕೆ ಕಂಡಿದೆ. ಎರಡು ಲಕ್ಷಕ್ಕೂ ಅಧಿಕ ದೈನಂದಿನ ಪ್ರಕರಣಗಳ ನಡುವೆಯೂ ಸೋಂಕಿನ ವೇಗ ಕಡಿಮೆಯಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.
Read More »ವಾಯುವಿಹಾರಕ್ಕೆ ಹೋದ ದಂಪತಿ : ಸಾವಿನಲ್ಲಿ ಅಂತ್ಯ
ರಾಯಚೂರು: ಸಂಜೆ ಗಂಡ ಹೆಂಡತಿ ಇಬ್ಬರೂ ಜೊತೆಯಾಗಿ ವಾಯುವಿಹಾರಕ್ಕೆ ಇಬ್ಬರೂ ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪತಿ ಸ್ಥಳದಲ್ಲೇ ಸಾವಿಗೀಡಾದರೆ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ ಈ ಘಟನೆ ನಗರದ ಕೃಷಿ ವಿಶ್ವವಿದ್ಯಾಲಯದ ಬಳಿ ಇಂಥದ್ದೊಂದು ದುರಂತ ಸಂಭವಿಸಿದೆ. ಕಂದಾಯ ಇಲಾಖೆ ಸರ್ವೇಯರ್ ಎಸ್.ಎಸ್. ಪಾಟೀಲ್ (64) ಮೃತಪಟ್ಟಿದ್ದು, ಪತ್ನಿ ಲೇಪಾಕ್ಷಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು …
Read More »ಗೀಸರ್ ಅನಿಲ ಲೀಕ್ : ಸಾವಿನಲ್ಲಿ ಒಂದಾದ ತಾಯಿ ಮಗಳು
ಬೆಂಗಳೂರು: ಇಂದು ಬೆಳಗ್ಗೆ ಪತಿ ನರಸಿಂಹಮೂರ್ತಿ ಕೆಲಸಕ್ಕೆಂದು ಹೊರಗೆ ಹೋಗಿದ್ದಾಗ ಮಗುವನ್ನು ಕರೆದುಕೊಂಡು ತಾಯಿ ಸ್ನಾನಕ್ಕೆಂದು ಬಚ್ಚಲಕೋಣೆಗೆ ಹೋಗಿ ಬಿಸಿನೀರಿಗಾಗಿ ಗ್ಯಾಸ್ ಗೀಸರ್ ಆನ್ ಮಾಡಲು ಹೋಗಿದ್ದ ಸಂದರ್ಭದಲ್ಲಿ ಗ್ಯಾಸ್ ಗೀಸರ್ನಿಂದ ಅನಿಲ ಸೋರಿಕೆ ಉಂಟಾಗಿದ್ದು, ಉಸಿರುಗಟ್ಟಿ ತಾಯಿ-ಮಗಳು ಇಬ್ಬರೂ ಸಾವಿಗೀಡಾಗಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಸಂಭವಿಸಿದೆ. ತಾಯಿ – ಮಗಳು ಉಸಿರಾಡಲು ತೊಂದರೆ ಉಂಟಾಗಿರುವ ಸನ್ನಿವೇಶ ಸಂಭವಿಸಿರುವುದು ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 35 …
Read More »ಕೋವಿಡ್ ಉಲ್ಬಣ : ಇಂದು ಸಿಎಂ ಮಹತ್ವದ ಸಭೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನ ಕಳೆದಂತೆ ವೇಗವಾಗಿ ಹರಡುತ್ತೀದೆ. ಇದರಿಂದಾಗಿ ಜನರಲ್ಲಿ ಆತಂಕ ಹೆಚ್ಚುತ್ತಿದೆ. ಮಹಾಮಾರಿಯನ್ನು ನಿಯಂತ್ರಣ ಕುರಿತಾಗಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಸಂಜೆ 4 ಗಂಟೆಗೆ ಅಧಿಕಾರಿಗಳೊಂದಿಗೆ ಸಿಎಂ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು, ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್, ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
Read More »ವಿಶೇಷ ರೀತಿಯಲ್ಲಿ ಸಂಕ್ರಾಂತಿ ಹಬ್ಬ ಆಚರಣೆ
ಮಂಡ್ಯ : ಇತ್ತೀಚೆಗೆ ಅಪ್ಪು ಅವರನ್ನು ಚಿತ್ರರಂಗ ಕಳೆದುಕೊಂಡು ಅನಾಥ ವಾಗಿದೆ. ಅವರನ್ನು ನೆನದು ಮಾಡಿರುವಂತಂಹ ಕಾರ್ಯಕ್ರಮವಿಲ್ಲ ಹಾಗೂ ಪೂಜೆಗಳು ಇಲ್ಲಾ. ಇಷ್ಟು ಬೇಗ ಅವರನ್ನ ಕರೆದುಕೊಂಡ ಯಮನಿಗೆ ಇಡೀ ಶಾಪ ಹಾಕುತ್ತಿದ್ದಾರೆ. ಜೊತೆಗೆ ದೇವರ ಪೂಜೆಗಳಲ್ಲೂ ಅಪ್ಪು ಅವರನ್ನ ಮುಂದಿಡುತ್ತಿದ್ದಾರೆ. ಇದೀಗ ಸಂಕ್ರಾಂತಿ ಹಬ್ಬಕ್ಕೂ ಅಪ್ಪು ನೆನೆದಿದ್ದಾರೆ ಮಂಡ್ಯ ಜನ. ಈ ವೇಳೆ ಎತ್ತುಗಳ ಮೈ ಮೇಲೆ ಅಪ್ಪು ಭಾವಚಿತ್ರ ಬಿಡಿಸಿರುವುದು ಕಂಡು ಬಂದಿದೆ. ಜೊತೆಗೆ ದೇವರೊಟ್ಟಿಗೆ ಅಪ್ಪು …
Read More »ವಾರಾಂತ್ಯ ಕರ್ಫ್ಯೂಗೆ ಸ್ಪಂದಿಸಿದ ಮೈಸೂರು ಜನ
ಮೈಸೂರು: ವಾರಾಂತ್ಯ ಕರ್ಫ್ಯೂನಿಂದಾಗಿ ರಸ್ತೆಗಳು, ಮಾರುಕಟ್ಟೆಗಳು ಸಂಪೂರ್ಣ ಖಾಲಿ ಖಾಲಿಯಾಗಿದ್ದವು. ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವುದು ಹಾಗೂ ವಾರಾಂತ್ಯ ಕರ್ಫ್ಯೂ ವಿಧಿಸಿರುವುದರಿಂದ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು.ಎಲ್ಲೆಡೆ ಬಿಕೋ ಎನ್ನವ ವಾತಾವರಣ ಸೃಷ್ಟಿಯಾಗಿತ್ತು ಪ್ರಮುಖ ವಾಣಿಜ್ಯ ಕೇಂದ್ರ ಕೆ.ಆರ್.ಸರ್ಕಲ್,ಡಿ.ದೇವರಾಜ ಅರಸು ರಸ್ತೆ, ಸಯ್ನಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ, ಧನ್ವಂತರಿ ರಸ್ತೆ, ಕಾಳಿದಾಸ ರಸ್ತೆ, ಅಗ್ರಹಾರ ವೃತ್ತಗಳಲ್ಲಿ ಜನಸಂಚಾರ ವಿರಳವಾಗಿ ಬಿಕೋ ಎನ್ನುವ ವಾತಾವರಣ ಇತ್ತು. ಸಂಕ್ರಾಂತಿ ಹಬ್ಬವನ್ನು ಆಚರಿಸಿದ ಜನರು …
Read More »ಮಲಯಾಳಂನ ಸೂಪರ್ ಸ್ಟಾರ್ ಮಮ್ಮುಟಿಯವರಿಗೂ ಕೊರೋನಾ ಪಾಸಿಟಿವ್
ಕೇರಳ: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ಈ ಸಂದರ್ಭದಲ್ಲಿಯೇ ಜನಪ್ರತಿನಿಧಿಗಳು, ಸ್ಟಾರ್ ನಟರಿಗೂ ಕೋವಿಡ್ ಶಾಕ್ ನೀಡುತ್ತಿದೆ. ಇಂದು ಮಲಯಾಳಂನ ಸೂಪರ್ ಸ್ಟಾರ್ ಮಮ್ಮುಟಿಯವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





