Breaking News

admin

ಮಂಡ್ಯ ಜಿಲ್ಲೆಯ ವತಿಯಿಂದ ಉತ್ತರಕರ್ನಾಟಕ, ಕೊಡಗು ನೆರೆ ಸಂತ್ರಸ್ತರಿಗೆ ಪಾದಯಾತ್ರೆಯ ಮೂಲಕ ನಿಧಿ ಸಂಗ್ರಹಕ್ಕೆ ನಿರ್ಧಾರ: ಚಂದ್ರಮೋಹನ್

ಮಂಡ್ಯ :ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಆಗಷ್ಟ್-14ರ ಬುಧವಾರ ಬೆಳಿಗ್ಗೆ 9.30ಗಂಟೆಗೆ ತೆಂಡೇಕೆರೆ ಬಾಳೆಹೊನ್ನೂರು ಶಾಖಾಮಠದ ಶ್ರೀಗಳಾದ ಶ್ರೀ ಗಂಗಾಧರಶಿವಾಚಾರ್ಯರ ದಿವ್ಯಸಾನಿಧ್ಯದಲ್ಲಿ ಶಾಸಕ ನಾರಾಯಣಗೌಡರ ನೇತೃತ್ವದಲ್ಲಿ ಉತ್ತರ ಕರ್ನಾಟಕ ಹಾಗೂ ಕೊಡಗಿನ ನೆರೆ ಸಂತ್ರಸ್ತರಿಗೆ ನಿಧಿ ಮತ್ತು ಅಗತ್ಯ ವಸ್ತುಗಳನ್ನು ಪಾದಯಾತ್ರೆ ನಡೆಸಿ ಸಂಗ್ರಹಿಸಲಾಗುವುದು ಎಂದು ಶಾಸಕ ನಾರಾಯಣಗೌಡರ ಅಭಿಮಾನಿಗಳ ಬಳಗದ ಅಧ್ಯಕ್ಷ ಚಂದ್ರಮೋಹನ್ ತಿಳಿಸಿದ್ದಾರೆ.ಪಟ್ಟಣದ ಎಪಿಎಂಸಿ ಮಾರುಕಟ್ಟೆ, ಎಂ.ಕೆ.ಬೊಮ್ಮೇಗೌಡ ವೃತ್ತ, ಹೊಸಹೊಳಲು ರಸ್ತೆ, ಕೆ.ಆರ್.ಪೇಟೆ ಮುಖ್ಯ ರಸ್ತೆ, ದುರ್ಗಾಭವನ್ ಸರ್ಕಲ್, …

Read More »

ಕೇಂದ್ರ ಹಾಗೂ ರಾಜ್ಯ ಸಕಾ೯ರಗಳು ರೈತರ ಪರ: ಸಂಸದ ವೈ.ದೇವೇಂದ್ರಪ್ಪ

ಬಳ್ಳಾರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ರೈತರು ಹಾಗೂ ರೈತಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಕೆರೆಗಳಿಗೆ ನದಿ ನೀರು ಪೂರೈಸಬೇಕು. ನೆರೆಹಾವಳಿಗೆ ತುತ್ತಾದ ರೈತರಿಗೆ ಶೀಘ೯ವೇ ಸಮಪ೯ವಾದ ಪರಿಹಾರಗಳನ್ನು ನೀಡಬೇಕು ಹಾಗೂ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ನೂರಾರು ರೈತರು ರೈತಸಂಘ ಹಾಗು ಹಸಿರು ಸೇನೆ ಕಾಯ೯ಕತ೯ರು ಪ್ರತಿಭಟನೆ ನಡೆಸಿದರು. ಈ ವೇಳೆ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಸಂದಭ೯ದಲ್ಲಿ ನೆರೆಹಾವಳಿ ಪ್ರದೇಶಗಳಿಗೆ ಭೇಟಿ ಕೊಡುವ …

Read More »

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹೊಗೆನಕಲ್ ಜಲಾಶಯದ ನೀರಿನ ಮಟ್ಟ ಆತಂಕದಲ್ಲಿ ದಿನದೂಡುತ್ತಿರುವ ಸುತ್ತಮುತ್ತಲಿನ ಗ್ರಾಮಸ್ಥರು

ಹೊಗೆನಕಲ್: ಈ ಬಾರಿಯ ಮಳೆಯ ಪ್ರವಾಹಕ್ಕೆ ಹಲವು ಜಲಾಶಯಗಳು ಉಕ್ಕಿ ಹರಿಯುತ್ತಿದ್ದು, ಕೆಲ ಗ್ರಾಮಗಳಿಗೆ ನೀರು ನುಗ್ಗಿ ಜ‌ನರ ಜೀವನ ಅಕ್ಷರಶಃ ನಲುಗಿ ಹೋಗಿದೆ. ಅದೇ ರೀತಿ ಕರ್ನಾಟಕದ ತಮಿಳುನಾಡು ಗಡಿ ಭಾಗದ ಹೊಗೆನಕಲ್ ಜಲಾಶಯವೂ ಸಹ ಸಂಪೂರ್ಣ ಭರ್ತಿಯಾಗಿದ್ದು, ಅಪಾಯ ಮಟ್ಟ ಮೀರಿ ಹರಿಯುತ್ತಿದೆ.ಹೌದು ಕಬಿನಿ ಹಾಗು ಕೆ ಆರ್ ಎಸ್ ಜಲಾಶಯಗಳಿಂದ ಹೊಗೆನಕಲ್ ಜಲಾಶಯಕ್ಕೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗಿ ರಸ್ತೆ ಹಾಗೂ ಗ್ರಾಮಗಳ ಕಡೆ …

Read More »

ರಾಜ್ಯದ ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೋಡಿಹಳ್ಳಿ ಚಂದ್ರಶೇಖರ ಒತ್ತಾಯ

ಧಾರವಾಡ:ಪ್ರಸ್ತುತ ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ದೊಡ್ಡ ಪ್ರಮಾಣದ ಹಾನಿಯಾಗಿದ್ದು, ಈ ದುರಂತವನ್ನು ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ರಾಜ್ಯ ರೈತ ಸಂಘದ ಅಧ್ಯಕ್ಷ, ಕೋಡಿಹಳ್ಳಿ ಚಂದ್ರಶೇಖರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪರಿಸ್ಥಿತಿಯಲ್ಲಿ ಆಗಿರುವ ಹಾನಿಯನ್ನು ಅಂದಾಜಿಸುವಲ್ಲಿ ರಾಜ್ಯ ಸರ್ಕಾರ ಕೂಡ ವಿಫಲವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗಿದೆ. ಜಾನುವಾರುಗಳು ಸತ್ತಿವೆ. ಹೊಲ-ಗದ್ದೆಗಳಲ್ಲಿನ ಅಪಾರ ಮೌಲ್ಯದ ಬೆಳೆ …

Read More »

ಉತ್ತರ ಕರ್ನಾಟಕದ ಸಂತ್ರಸ್ತರ ಕಷ್ಟಗಳನ್ನು ಕೇಳದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ದ ಸಾರ್ವಜನಿಕರ ಆಕ್ರೋಶ.

ಹುಬ್ಬಳ್ಳಿ: ಒಂದು ವಾರ ನಿರಂತರವಾಗಿ ಸುರಿದ ಭಾರಿ ಮಳೆಗೆ ನಗರದ ಜನರು ತತ್ತರಿಸಿದ್ದಾರೆ. ಹಲವು ಮನೆಗಳು ನೆಲಕಚ್ಚಿವೆ. ಆದರೆ ಇಲ್ಲಿನ ಅಧಿಕಾರಿಗಳು ಮಾತ್ರ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ದೋಬಿಘಾಟ್​ನ ನಿವಾಸಿಗಳು ಕಿಡಕಾರಿದ್ದಾರೆ.ಮನೆ ಮತ್ತು ಮನೆಗಳಲ್ಲಿನ ವಸ್ತುಗಳನ್ನು ಕಳೆದುಕೊಂಡು ಕಂಗಾಲಾಗಿರುವ ಜನರ ನಿತ್ಯದ ಬದುಕು ದುಸ್ತರವಾಗಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಈವರೆಗೆ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಬಂದು ಸ್ಪಂದಿಸುವ ಕೆಲಸ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ವೋಟು ಬೇಕಾದಾಗ …

Read More »

ಹೇಮಾವತಿ ನದಿಯಲ್ಲಿ ಕಡಿಮೆಯಾದ ನೀರಿನ ಅಬ್ಬರ

ಮಂಡ್ಯ : ಹೇಮಾವತಿ ನದಿಯಲ್ಲಿ ನೀರು ಸಂಪೂರ್ಣ ಕಡಿಮೆಯಾಗಿದೆ. ಜೊತೆಗೆ ರಾಶಿ ರಾಶಿ ಮರಳು ಸಂಗ್ರಹವಾಗಿದ್ದು ಜನರು ನದಿಗೆ ಇಳಿದು ಆನಂದ ಪಡುವ ಜೊತೆಗೆ ಮರಳಿನಲ್ಲಿ ನಲಿಯುತ್ತಿದ್ದಾರೆ.ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಈಗ ಸಂಗ್ರಹವಾಗಿರುವ ಮರಳನ್ನು ರಕ್ಷಿಸಿ ಪ್ರಕೃತಿ ಸೌಂದರ್ಯ ಕಾಪಾಡುವ ಜೊತೆಗೆ ಮಿನಿ ತಲಕಾಡಂತಾಗಿರುವ ಹೇಮಗಿರಿಯು ಬರಿದಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪೋಲಿಸ್ ಇಲಾಖೆಯದ್ದಾಗಿದೆ.

Read More »

ಅರಂಬೂರಿನಲ್ಲಿ ಸ್ಕೂಟಿ ಹಾಗೂ ಜೀಪ್ ನಡುವೆ ಡಿಕ್ಕಿ : ನಿವೃತ್ತ ಎಎಸ್‌ಐ ದುರ್ಮರಣ

ಸುಳ್ಯ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ನಗರದ ಹೊರವಲಯದ ಅರಂಬೂರಿನಲ್ಲಿ ಸ್ಕೂಟಿ ಹಾಗೂ ಜೀಪು ಪರಸ್ಪರ ಡಿಕ್ಕಿ ಹೊಡೆದು ಸ್ಕೂಟಿ ಸವಾರ ನಿವೃತ್ತ ಎಎಸ್‌ಐ ಪಡ್ಪು ಇಡ್ಯಡ್ಕ ಅಣ್ಣಯ್ಯ ಗೌಡ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ. ಅಣ್ಣಯ್ಯ ಗೌಡರು ತನ್ನ ಮನೆಯಿಂದ ಅರಂತೋಡು ಕಡೆ ತೆರಳುತ್ತಿದ್ದರು. ಅರಂತೋಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಚಿಕನ್ ಸೆಂಟರೊಂದಕ್ಕೆ‌ ಸೇರಿದ ಜೀಪು, ಸ್ಕೂಟಿಗೆ ಡಿಕ್ಕಿ ಹೊಡೆಯಿತು. ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡ …

Read More »

ಸಂಪುಟ ವಿಸ್ತರಣೆ ವಿಳಂಬ: ಜೈಲು ಹಕ್ಕಿಗಳಿಗೆ ಇಲ್ಲ ಬಿಡುಗಡೆ ಭಾಗ್ಯ.

ಆನೇಕಲ್: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಆಗದೆ ಇರುವ ಬಿಸಿ ಕಾರಾಗೃಹದಲ್ಲಿನ ಜೈಲು ಹಕ್ಕಿಗಳಿಗೂ ಕೂಡ ತಟ್ಟಿದೆ. ಸನ್ನಡತೆ ಆಧಾರದ ಮೇಲೆ ಆ. 15ರಂದು ಜೈಲುವಾಸದಿಂದ ಹೊರಬರಬೇಕಿದ್ದ ಸುಮಾರು 72ಕ್ಕೂ ಹೆಚ್ಚು ಕೈದಿಗಳಿಗೆ ಬಿಡುಗಡೆ ಭಾಗ್ಯವಿಲ್ಲದಂತಾಗಿದೆ.ಸಾಮಾನ್ಯವಾಗಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಮತ್ತು ಜನವರಿ 26ರ ಗಣರಾಜ್ಯೋತ್ಸವ ದಿನದಂದು ಸನ್ನಡತೆ ಹಾಗೂ‌ ಮನಪರಿವರ್ತನೆಗೊಂಡ ಕೈದಿಗಳನ್ನು ಶಿಕ್ಷೆಯ ಅವಧಿಗೆ ಮುನ್ನವೇ ಬಿಡುಗಡೆ ಮಾಡಲಾಗುತ್ತದೆ. ಸಚಿವ ಸಂಪುಟ ಶಿಫಾರಲಸು ಹಾಗೂ ರಾಜ್ಯಪಾಲರ …

Read More »

ಬುಧವಾರದ ರಾಶಿಫಲ

ಮೇಷ: ಇಂದು, ಮತ್ತೊಂದು ಒತ್ತಡದ ದಿನ. ನೀವು ಕಛೇರಿಯಲ್ಲಿ ಮತ್ತು ಮನೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಜ್ಜಾಗಿದ್ದೀರಿ. ನಿಮ್ಮ ಮೇಲಧಿಕಾರಿಗಳು ನಿಮಗೆ ಕೆಲ ರಿಯಾಯಿತಿಗಳನ್ನು ನೀಡಬಹುದು, ಮತ್ತು ಇದು ವಿಷಯಗಳನ್ನು ಕೊಂಚ ಸುಲಭಗೊಳಿಸುತ್ತದೆ. ನೀವು ಹಿರಿಯರಿಂದ ಮೌಲ್ಯಯುತ ಮಾರ್ಗದರ್ಶನ ಪಡೆಯುತ್ತೀರಿ.ವೃಷಭ: ಇಂದು ನಿಮ್ಮ ವೃತ್ತಿಯಲ್ಲಿ ಪ್ರಗತಿಯ ಸಾಧ್ಯತೆ ಇದೆ. ಆದರೆ ಈ ಪ್ರಗತಿ ನೀವು ನಿರೀಕ್ಷಿಸಿದ ದಿಕ್ಕಿನಲ್ಲಿ ಇಲ್ಲ. ಹಣಕಾಸಿನ ಅವಕಾಶಗಳು ಮತ್ತು ಯಶಸ್ಸು ನಿಮ್ಮ ಬಾಗಿಲು ತಟ್ಟುತ್ತವೆ. ನೀವು ಭೌತಿಕ …

Read More »

ಭಾರತದ ಮೊದಲ ವಿಶ್ವಮಟ್ಟದ ಕ್ರೀಡಾ ಶಾಲೆ ತೆರೆದ ಭಾರತದ ಯಶಸ್ವಿ ಬ್ಯಾಡ್ಮಿಂಟನ್​ ಕೋಚ್​ ಪುಲ್ಲೇಲಾ ಗೋಪಿಚಂದ್

ಹೈದರಾಬಾದ್​: ಮಾಜಿ ಶೆಟ್ಲರ್​ ಹಾಗೂ ಭಾರತದ ಯಶಸ್ವಿ ಬ್ಯಾಡ್ಮಿಂಟನ್​ ಕೋಚ್​ ಪುಲ್ಲೇಲಾ ಗೋಪಿಚಂದ್ ಗಾಡಿಯಂ ಸ್ಪೋರ್ಟೋಪಿಯಾ ಎಂಬ​ ಭಾರತದ ಮೊದಲ ವಿಶ್ವಮಟ್ಟದ ಕ್ರೀಡಾ ಶಾಲೆಯನ್ನು 18 ಎಕರೆ ಪ್ರದೇಶದಲ್ಲಿ ತೆರೆಯುವ ಮೂಲಕ ಕ್ರೀಡಾಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದಾರೆ.ಕ್ರೀಡೆ ಮಕ್ಕಳಲ್ಲಿ ಶಿಸ್ತು ಕಲಿಸುವುದರ ಜೊತೆಗೆ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಗೋಪಿಚಂದ್​ರ ಈ ಕ್ರೀಡಾ ಅಕಾಡೆಮಿ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಮಹತ್ವ ನೀಡಿ ವಿಶ್ವಮಟ್ಟದ ಕ್ರೀಡಾಪಟುಗಳನ್ನು ತಯಾರು …

Read More »