Breaking News

admin

ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ

ಜೈ ಶ್ರೀ ಗುರುದೇವ್ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಾಗರಪಂಚಮಿ ಹಬ್ಬದ ಪ್ರಯುಕ್ತ ಇಂದು ಬೆಳಗ್ಗೆ ಅಭಿಷೇಕ, ಹೋಮ ವಿಶೇಷ ಪೂಜೆಯು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.

Read More »

ಬೆಳಗಾವಿ ಗಂದಿಗವಾಡ-ತಿಗಡೋಳ್ಳಿ ವಾಯಾ ಕಿತ್ತೂರ ಗ್ರಾಮದ ಸಂಪರ್ಕ ಸೇತುವೆ ಸಂಪೂರ್ಣ ಜಲಾವೃತ

ಖಾನಾಪುರ: ಕಳೆದ ಒಂದು ವಾರದಿಂದ ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಮಲಪ್ರಭಾ ನದಿಗೆ ಹೆಚ್ಚಿನ ಪ್ರಮಾಣ ಹರಿದು ಬರುತ್ತಿರುವುದರಿಂದ ತಾಲೂಕಿನ ಗಂದಿಗವಾಡ ಗ್ರಾಮದ ಹೊರವಲಯದಲ್ಲಿರುವ *ಗಂದಿಗವಾಡ-ತಿಗಡೊಳ್ಳಿ ವಾಯಾ ಕಿತ್ತೂರು* ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿರುವ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಸೇತುವೆ ಸಂಪೂರ್ಣ ಜಲಾವೃತ ಆಗಿರುವುದರಿಂದ ಬೈಕ ಅನ್ನು ಹೊತ್ತುಕೊಂಡು ಹೊಗುತ್ತಿರುವ ಜನರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Read More »

ಎಲ್ಲೆಡೆ ನಾಗರ ಪಂಚಮಿ ನಡಗರ.

ಚಿತ್ರದುರ್ಗ: ಹಿಂದೂಗಳ ಪವಿತ್ರ ಹಬ್ಬವಾದ ನಾಗರ ಪಂಚಮಿ ಪ್ರಯುಕ್ತ ಇಂದು ಭಕ್ತರು ನಗರದ ನಾಗರ ಕಟ್ಟೆಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದರು . ಮುಂಜಾನೆ ಜಡಿಮಳೆಯ ಹೊರತಾಗಿಯೂ ಸಾಲು ಸಾಲಾಗಿ ಬಂದು ನಾಗರಕಟ್ಟೆಗೆ ಹಾಲನ್ನು ಎರೆದು ಭಕ್ತಿ ಸಮರ್ಪಿಸಿದರು. ಹಾಲನ್ನು ಎರೆದು ಪ್ರಸಾದ ನೈವೇದ್ಯ ಮಾಡಿ ನಾಗದೇವರ ಕೃಪೆಗೆ ಪಾತ್ರರಾದರು.

Read More »

ಬೆಳಗಾವಿಯಲ್ಲಿ ಮುಂದುವರಿದ ಮಳೆರಾಯನ ಅಬ್ಬರ

ಚಿಕ್ಕೋಡಿ: ಬೆಳಗಾವಿಯಲ್ಲಿ ಮುಂದುವರಿದ ಮಳೆರಾಯನ ಅಬ್ಬರದಿಂದಾಗಿ ಚಿಕ್ಕೋಡಿ ಭಾಗದ ಕೃಷ್ಣ ನದಿ ದೂದಗಂಗಾ ವೇದಗಂಗಾ ನದಿಗಳ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ.ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೋಳ & ಮಂಗಾವತಿ ಗ್ರಾಮಸ್ಥರು ಮನೆ ಸಾಮಗ್ರಿ ಮತ್ತು ದನ ಕರುಗಳನ್ನು ಸ್ಥಳಾಂತರ ಮಾಡಿದ್ದಾರೆ.ಇನ್ನೂ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಮಹಾರಾಷ್ಟ್ರ ಡ್ಯಾಮ್ ನಿಂದ ನೀರು ಹೊರಬಿಡುವ ಸಾಧ್ಯತೆ ಹೆಚ್ಚಾಗಿದೆ.

Read More »

ಪಶು ಆಹಾರ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಕೋಲಾರ: ಪಶು ಆಹಾರ ಬೆಲೆ ಏರಿಕೆ ಖಂಡಿಸಿ ಕೋಲಾರ ಹಾಲು ಒಕ್ಕೂಟಕ್ಕೆ ರೈತರ ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಬಂಡಿಯೊಂದಿಗೆ ಎತ್ತುಗಳು, ಸೀಮೆ ಹಸು ಸಮೇತ ಪಶು ಆಹಾರಗಳನ್ನು ಕೋಮುಲ್ ಆವರಣದಲ್ಲಿ ಪ್ರದರ್ಶಿಸಿ ಪ್ರತಿಭಟನೆ ಮಾಡಿದರು.ಪಶು ಆಹಾರ ಬೆಲೆ ಏರಿಕೆ ಮಾಡಿರುವುದಕ್ಕೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೇ ಇದೇ ವೇಳೆ ರೈತರು ಕೋಮುಲ್ ಅಧಿಕಾರಿಗಳನ್ನು ಬೆಲೆ ಏರಿಕೆ ಕಾರಣದಿಂದ ತರಾಟೆಗೆ ತೆಗೆದುಕೊಂಡರು.

Read More »

ಪಾದಚಾರಿಗೆ ಖಾಸಗಿ ಬಸ್ ಡಿಕ್ಕಿ.ವ್ಯಕ್ತಿ ಸ್ಥಳದಲ್ಲೇ ಸಾವು.

ಆನೇಕಲ್: ಪಾದಚಾರಿಯೊಬ್ಬರು ರೋಡ್ ಕ್ರಾಸ್ ಮಾಡುವ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟ ವೃತ್ತದಲ್ಲಿ ನಡೆದಿದೆ. ಬಸ್ಸಿನ ಚಕ್ರಕ್ಕೆ ಸಿಲುಕಿದ ದೇಹ ಚಿದ್ರ ಚಿದ್ರವಾಗಿದೆ. ವ್ಯಕ್ತಿಯ ವಿಳಾಸ ಇದುವರೆಗೂ ಪತ್ತೆಯಾಗಿಲ್ಲ.ಅಪಘಾತ ನಡೆಯುತ್ತಿದ್ದಂತೆ ಬಸ್ ಚಾಲಕ ಪರಾರಿಯಾಗಿದ್ದಾನೆ.ಬಸ್ ಚಾಲಕನ ಅತೀವೇಗವೆ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಮಣಿಪಾಲ್ ಆರೋಗ್ಯ ಕಾಡ್೯ ಅವಧಿ 2ವಷ೯

ಕೂಡ್ಲಿಗಿ: ಮಣಿಪಾಲ್ ಆರೋಗ್ಯ ಕಾಡ್೯ ಕಾಲವಧಿ 2019 ರಿಂದ 2 ವಷ೯ ಅವಧಿಗೆ ವಿಸ್ಥರಿಸಲಾಗಿದೆ ಎಂದು ಮಣಿಪಾಲ್ ಸಂಸ್ಥೆಯ ಸಹಾಯಕ ವ್ಯವಸ್ಥಾಪಕರಾದ ರವಿಕಿರಣ ಪೈ ತಿಳಿಸಿದ್ದಾರೆ.ಅವರು ಕೂಡ್ಲಿಗಿ ಪಟ್ಟಣದ ಸ್ಥಳೀಯ ಪತ್ರಕತ೯ರ ಒಕ್ಕೂಟದ ಪತ್ರಿಕಾಭನದಲ್ಲಿ ಮಾತನಾಡಿದರು.ಕಾಡ್೯ನಿಂದಾಗಿ ಗುಣಮಟ್ಟದ ಚಿಕಿತ್ಸೆಯು ಕೈಗೆಟುಕುವ ಧರದಲ್ಲಿ ದೊರಕುತ್ತದೆ.ಎಲ್ಲಾಬಗೆಯ ಆರೋಗ್ಯ ಸೇವೆಗೆ ರಿಯಾಯಿತಿ ಒದಗಿಸುತ್ತದೆ.ಅವಧಿಯೊಳಗೆ ಎಷ್ಟೇಬಾರಿ ವೈಧ್ಯರ ಜೊತೆ ಸಮಾಲೋಚನೆ.ಪ್ರಯೋಗಾಲಯ ಪರೀಕ್ಷೆಗಳು.ಸಿಟಿ/ಎಂಆರ್ ಐ./ಆಲ್ಟ್ರಾ ಸೌಂಡ್.ಶಸ್ತ್ರಚಿಕಿತ್ಸೆ.ಮಧುಮೇಹ.ಪಾದ ತಪಾಸಣೆ.ಈ ಎಲ್ಲಾ ಸೌಲಭ್ಯಗಳನ್ನು ಕನಿಷ್ಠ ಧರದಲ್ಲಿ ಪಡೆಯಬಹುದಾಗಿದೆ.ಸದಸ್ಯತ್ವ ಶುಲ್ಕ ಒಬ್ಬರಿಗೆ …

Read More »

ನಾಡಿನ ಅನ್ನದಾತರ ಸಾಂಸ್ಕೃತಿಕ ಹಬ್ಬ ನಾಗರಪಂಚಮಿ

ಕೂಡ್ಲಿಗಿ: ಶ್ರಾವಣವೆಂದರೆ ಹಬ್ಬಗಳ ಸರಮಾಲೆ ಧಾಮಿ೯ಕ ಶ್ರದ್ಧಾ ಚಟುವಟುಕೆಗಳು ಗರಿಗೆದರುತ್ತವೆ.ನಾಡಿನ ಬಹುದೊಡ್ಡ ಹಬ್ಬಗಳಲ್ಲಿ ನಾಗರಪಂಚಮಿಯೂ ಒಂದು ನಾಗರ ಅಮವಾಸೆಯಿಂದ ಗಣೇಶನ ಹಬ್ಬದ ಸಂದಭ೯ವರೆಗೂ ಕೂಡ ನಿರಂತರ ನಾಗಾರಾಧನೆ ಚಾಲ್ತಿಯಲ್ಲಿರುತ್ತದೆ.ಕೆಲವೆಡೆಗಳಲ್ಲಿ ಚೌತಿಯಂದೇ ಹಾಲೆರದರೆ. ಕೆಲವೆಡೆ ಪಂಚಮಿಯಂದು ಇನ್ನು ಕೆಲವೆಡೆಗಳಲ್ಲಿ ಶ್ರಾವಣ ಮಾಸದಲ್ಲಿಯ ತಮಗನುಕೂಲವಾದ ವಾರಗಳಲ್ಲಿ ವಿಷೇಶವಾಗಿ ಸೋಮವಾರದಿನದಂದು ನಾಗಾರಾಧನೆಗೆ ಒತ್ತುಕೊಟ್ಟು ಹಾಲೆರೆಯೋ ಹಬ್ಬ ಆಚರಿಸುದು ರೂಡಿಯಲ್ಲಿದೆ. ಹಾಲೆರೆದು ಹೊಸ ವಸ್ತ್ರಗಳನ್ನು ಧರಿಸುವ ಸಂಪ್ರದಾಯವೂ ಇದೆ.ವಿಷೇಶ ಖಾಧ್ಯಗಳನ್ನು ನಾಗದೇವತೆಗೆ ಎಡೆಯಿಡಿಯೋ ಮೂಲಕ ದೇವರ …

Read More »

ಕೂಡ್ಲಿಗಿ ಮಿನಿ ವಿಧಾನಸೌಧನಿಮಾ೯ಣಕ್ಕೆ ಶಾಸಕರಿಂದ ಭೂಮಿ ಪೂಜೆ

ಕೂಡ್ಲಿಗಿ: ತಾಲೂಕಿನ ಸಮಸ್ಥ ಜನತೆಯ ಕನಸು ಮಿನಿ ವಿಧಾನ ಸೌಧ ಇದುತಾಲೂಕು ಮಟ್ಟದ ಎಲ್ಲಾ ಇಾಖೆಗಳನ್ನು ಒಂದೆಡೆ ಸಂಪಕ೯ಕ್ಕೆ ದೊರಕಬಹುದಾದ ಬಹುದೊಡ್ಧ ಶಕ್ತಿ ಕೇಂದ್ರವಾಗಿದ್ದು.ಇದು ಸಕಾ೯ರದ ಬಹತ್ತರವಾದ ಯೋಜನೆಗಳಲ್ಲಿ ಪ್ರಮುಖದ್ದಾಗಿದೆ.ಕೂಡ್ಲಿಗಿ ಪಟ್ಟಣದಲ್ಲಿ ಮಿನಿ ವಿಧಾನ ಸೌಧ ನಿಮಾ೯ಣಕ್ಕೆ ಮುಹೂಥ೯ ಕೂಡಿಬಂದಿದ್ದು.ತಹಶೀಲ್ದಾರವರ ಹಳೆಯ ಕಛೇರಿಯ ಸ್ಥಳದಲ್ಲಿ ಮಿನಿವಿಧಾನ ಸೌಧ ನಿಮಿ೯ಸುವ ಉದ್ದೇಶದಿಂದಾಗಿ ಈಗಿರುವ ಹಳೆಕಟ್ಟಡವನ್ನು ತೆರವುಗೊಳಿಸುವ ಕಾಯ೯ಕ್ಕೆ ಚಾಲನೆ ದೊರಕಿದೆ.ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣರವರು ಮಿನಿವಿಧಾನಸೌಧ ನಿಮಾ೯ಣ ಕಾಯ೯ಕ್ಕೆ ಭೂಮಿ ಪೂಜೆ …

Read More »

ದಂಪತಿಗಳ ಜೋಡಿ ಕೊಲೆಯ ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಮಂಡ್ಯ : ರಾಯಸಮುದ್ರ ಗ್ರಾಮದಲ್ಲಿ ನಡೆದಿರುವ ಗುಂಡೇಗೌಡ ಲಲಿತಮ್ಮ ದಂಪತಿಗಳ ಕೊಲೆ ಪ್ರಕರಣದಲ್ಲಿ ಪಕ್ಕದ ಮನೆಯವನಾದ ಒಬ್ಬರಾದ ಯೋಗೇಶ್ ಅವರಿಂದ ಮಾತ್ರ ಈ ಜೋಡಿಕೊಲೆ ನಡೆದಿಲ್ಲ ಯೋಗೇಶ್ ಅವರೊಂದಿಗೆ ಹಲವಾರು ಜನರು ಈ ಕೊಲೆ ಪ್ರಕರಣದಲ್ಲಿ ಶಾಮೀಲಾಗಿರುವ ಶಂಕೆ ಹಾಗೂ ಅನುಮಾನವಿದ್ದು ಪೋಲಿಸರು ನಿಷ್ಪಕ್ಷಪಾತವಾಗಿ ತನಿಖೆಯನ್ನು ನಡೆಸಿತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯನ್ನು ವಿಧಿಸಬೇಕು ಎಂದು ಇಂದು ಗ್ರಾಮಕ್ಕೆ ಭೇಟಿ ನೀಡಿದ್ದ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್ …

Read More »